‘ಲವ್ ಯೂ ರಚ್ಚು ತಂಡದ ಜತೆ ನಾನು ಕಾಣಿಸಿಕೊಳ್ಳಲ್ಲ, ನಿರ್ಮಾಪಕರಿಂದ ಅವಮಾನ ಆಗಿದೆ’; ಅಜಯ್ ರಾವ್

ನಾಯಕ ಅಜಯ್​ ರಾವ್​ ಮಾತ್ರ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು. ಚಿತ್ರತಂಡದ ಜತೆಗೆ ಅವರು ವೈಮನಸ್ಸು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಅಜಯ್​ ರಾವ್​ ಓಪನ್​ ಆಗಿಯೇ ಹೇಳಿಕೊಂಡಿದ್ದಾರೆ

TV9kannada Web Team

| Edited By: Rajesh Duggumane

Dec 21, 2021 | 2:50 PM

ರಚಿತಾ ರಾಮ್​ ಮತ್ತು ಅಜಯ್​ ರಾವ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಲವ್ ಯೂ ರಚ್ಚು’ ಸಿನಿಮಾ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಧ್ರುವ ಸರ್ಜಾ ಆಗಮಿಸಿದ್ದರು. ಆದರೆ, ನಾಯಕ ಅಜಯ್​ ರಾವ್​ ಮಾತ್ರ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು. ಚಿತ್ರತಂಡದ ಜತೆಗೆ ಅವರು ವೈಮನಸ್ಸು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಅಜಯ್​ ರಾವ್​ ಓಪನ್​ ಆಗಿಯೇ ಹೇಳಿಕೊಂಡಿದ್ದಾರೆ. ‘ಖಂಡಿತವಾಗಿಯೂ ನಿರ್ಮಾಪಕರ ನಡುವೆ ಮನಸ್ತಾಪ ಇದೆ. ಅವರಿಂದ ನನಗೆ ಅವಮಾನ ಆಗಿದೆ. ಅದೇನು ಎಂದು ನಾನು ಹೇಳೋಕೆ ಇಷ್ಟಪಡಲ್ಲ. ನಾನು ಚಿತ್ರತಂಡದ ಜೊತೆ ಕಾಣಿಸಿಕೊಳ್ಳಲ್ಲ. ವೈಯಕ್ತಿಕವಾಗಿ ಮಾತ್ರ ಪ್ರಚಾರ ಮಾಡ್ತಿನಿ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಧ್ರುವ ಸರ್ಜಾ ಅವರು ಆಂಜನೇಯನ ಮಗ’; ಹನುಮ ಭಕ್ತನ ಬಗ್ಗೆ ಮನಸಾರೆ ಮಾತಾಡಿದ ರಚಿತಾ ರಾಮ್

Follow us on

Click on your DTH Provider to Add TV9 Kannada