Anti Conversion bill : ವಿಧಾನ ಪರಿಷತ್ನಲ್ಲಿ ಬಿಜೆಪಿಗೆ ಬಹುಮತ ಇಲ್ಲ, ಸಿಎಂ ಬೊಮ್ಮಾಯಿ ಹೇಗೆ ಪಾಸ್ ಮಾಡ್ತಾರೆ?
ಆಡಳಿತ ಪಕ್ಷ ಬಿಜೆಪಿ ಈ ಬಾರಿ ವಿಧಾನಸಭೆ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನ ಮಂಡಿಸೋದಾಗಿ ಹೇಳಿತ್ತು. ಕಾಯ್ದೆ ಜಾರಿಗೆ ತಂದೇ ತರ್ತೀವಿ ಅಂತಾ ಘೋಷಿಸಿತ್ತು. ಆದ್ರೆ ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಬಾರಿ ಕುತೂಹಲ ಹುಟ್ಟಿಸಿದ ಮತಾಂತರ ನಿಷೇಧ ವಿಧೇಯಕ ಕೊನೆಗೂ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಆದ್ರೆ ಸುಮ್ ಸುಮ್ನೆ ಈ ಬಿಲ್ ಪಾಸ್ ಆಗಿಲ್ಲ. ಆಡಳಿತ ಪಕ್ಷದ ಪಟ್ಟು. ವಿಪಕ್ಷದ ಫೈಟು ಎಲ್ಲವೂ ನಿರೀಕ್ಷೆಯಂತೆ ನಡೆದಿದೆ.
ಕಾಂಗ್ರೆಸ್ ಬಿಜೆಪಿ ಮಧ್ಯೆ ಮತಾಂತರ ಮಹಾ ಸಮರ
ಆಡಳಿತ ಪಕ್ಷ ಬಿಜೆಪಿ ಈ ಬಾರಿ ವಿಧಾನಸಭೆ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನ ಮಂಡಿಸೋದಾಗಿ ಹೇಳಿತ್ತು. ಕಾಯ್ದೆ ಜಾರಿಗೆ ತಂದೇ ತರ್ತೀವಿ ಅಂತಾ ಘೋಷಿಸಿತ್ತು. ಆದ್ರೆ ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಎರಡು ದಿನದ ಹಿಂದೆ ವಿಧೇಯಕವನ್ನ ಮಂಡಿಸಿದಾಗಲೇ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಗುಡುಗಿತ್ತು. ಸ್ಪೀಕರ್ ವಿಧೇಯಕದ ಕುರಿತ ಚರ್ಚೆ ನಡೆಸೋಕೆ ಇಂದು ಟೈಂ ಫಿಕ್ಸ್ ಮಾಡಿದ್ರು. ವಿಧಾನಸಭೆಯಲ್ಲಿ ವಿಧೇಯಕದ ಕುರಿತು ನಡೆದ ಚರ್ಚೆ, ಆಡಳಿತ ಪಕ್ಷದ ತಂತ್ರ, ವಿಪಕ್ಷದ ಪ್ರತಿತಂತ್ರದ ವಾದಗಳು ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸಿದ್ವು. ಅಸಲಿಗೆ ಕಲಾಪ ಆರಂಭವಾಗುತ್ತಲೇ ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧೇಯಕದ ವಿವರಣೆ ನೀಡಿದ್ರು. ಇದು ಯಾವ ಧರ್ಮದ ವಿರುದ್ಧವೂ ಅಲ್ಲ, ಮತಾಂತರ ಹಾಗೂ ಮತಾಂತರಿಗಳ ಹಾವಳಿ ತಡೆಯೋಕೆ ಮಾಡಿರೋ ಕಾಯ್ದೆ ಅಂತಾ ಹೇಳಿದ್ರು.
ವಿಧಾನ ಪರಿಷತ್ನಲ್ಲಿ ಬಿಜೆಪಿಗೆ ಬಹುಮತ ಇಲ್ಲ
ಪರಿಷತ್ ಸದಸ್ಯರ ಸಂಖ್ಯೆ- 75
ಬಹುಮತ- 38
ಬಿಜೆಪಿ- 32
ಕಾಂಗ್ರೆಸ್- 29
ಜೆಡಿಎಸ್- 13
ಪಕ್ಷೇತರ- 01
ವಿರೋಧದ ನಡುವೆ ನಿನ್ನೆ ವಿಧಾನಸಭೆಯಲ್ಲಿ ವಿದೇಯಕ ಮಂಡನೆ ಮಾಡಲಾಗಿದೆ. ಇಂದು ಪರಿಷತ್ನಲ್ಲಿ ಮತಾಂತರ ನಿಷೇಧ ವಿದೇಯಕದ ಮೇಲೆ ಚರ್ಚೆ ನಡೆಯುವ ಸಾಧ್ಯತೆ ಇದೆ. ತೀವ್ರ ವಿರೋಧ ವ್ಯಕ್ತ ಪಡಿಸಲು ಜೆಡಿಎಸ್, ಕಾಂಗ್ರೆಸ್ ನಿರ್ಧಾರ ಮಾಡಿವೆ. ಪರಿಷತ್ನಲ್ಲಿ ಎಲ್ಲರೂ ಹಾಜರಿರುವಂತೆ ಶಾಸಕರಿಗೆ ಸೂಚನೆ ನೀಡಲಾಗಿದೆ. ನಿನ್ನೆ ಪರಿಷತ್ನಲ್ಲಿ ಕಾಂಗ್ರೆಸ್ 40 % ಕಮಿಷನ್ ಬಗ್ಗೆ ಪ್ರಸ್ತಾಪ ಮಾಡಿತ್ತು. ಇಂದು ಸರ್ಕಾರದಿಂದ ಉತ್ತರ ನೀಡಬೇಕಿರುವ ಹಿನ್ನೆಲೆ ಸರ್ಕಾರದ ಉತ್ತರದ ಬಳಿಕ ಮತಾಂತರ ನಿಷೇಧದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ವಿಧಾನ ಪರಿಷತ್ನಲ್ಲಿ ಮತಾಂತರ ನಿಷೇಧ ವಿದೇಯಕ ಮಂಡನೆ ಸಾಧ್ಯತೆ ಕಡಿಮೆ ಇದೆ.