ಚಿಕ್ಕಬಳ್ಳಾಪುರ: ಭೂಕಂಪದ ಭೀತಿಯ ಅಲೆಗಳು ಇನ್ನೂ 1 ತಿಂಗಳಿರುವ ಸಾಧ್ಯತೆ, ತಜ್ಞರು ಹೇಳೋದೇನು?

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹಾಗೂ ಅಡ್ಡಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕಳೆದ ಎರಡು ದಿನಗಳಲ್ಲಿ ಮೂರು ಭಾರಿ ಭೂ ಕಂಪನವಾದ ಹಿನ್ನಲೆ ತಾಲೂಕಿನ ಬಂಡಹಳ್ಳಿ ಗ್ರಾಮದ ಜನ ಭಯ ಭೀತರಾಗಿದ್ದು, ಬಿರುಕು ಬಿಟ್ಟ ಮನೆಗಳನ್ನು ತೊರೆದು ಬೇರೆ ಊರುಗಳ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

TV9kannada Web Team

| Edited By: sadhu srinath

Dec 24, 2021 | 11:18 AM

ಚಿಕ್ಕಬಳ್ಳಾಪುರ: ಮೂರನೆ ಭಾರಿಗೆ ನಿನ್ನೆ ಚಿಕ್ಕಬಳ್ಳಾಫುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಭೂಕಂಪವಾದ ಹಿನ್ನೆಲೆ ತಾಲೂಕಿನ ಶೆಟ್ಟಿಗೆರೆ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಇದ್ರಿಂದ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ದೈರ್ಯ ತುಂಬಿದ್ರು.

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹಾಗೂ ಅಡ್ಡಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕಳೆದ ಎರಡು ದಿನಗಳಲ್ಲಿ ಮೂರು ಭಾರಿ ಭೂ ಕಂಪನವಾದ ಹಿನ್ನಲೆ ತಾಲೂಕಿನ ಬಂಡಹಳ್ಳಿ ಗ್ರಾಮದ ಜನ ಭಯ ಭೀತರಾಗಿದ್ದು, ಬಿರುಕು ಬಿಟ್ಟ ಮನೆಗಳನ್ನು ತೊರೆದು ಬೇರೆ ಊರುಗಳ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಆದ್ರೂ ಇನ್ನೂ ಕೆಲವರು ಬಿರಕು ಬಿಟ್ಟ ಮನೆಗಳಲ್ಲಿ ವಾಸ ಮಾಡ್ತಿದ್ದು ಮತ್ತೆ ಯಾವಾಗ ಭೂಕಂಪನ ಆಗುತ್ತೆ ಅನ್ನೊ ಭೀತಿಯಲ್ಲಿ ದಿನದೂಡತ್ತಿದ್ದಾರೆ. 50 ವರ್ಷಗಳಿಂದ ಈ ಭಾಗದಲ್ಲಿ ಮಳೆಯಾಗಿಲ್ಲ. ಈ ವರ್ಷ ಹಲವೆಡೆ ಮಹಾ ಮಳೆಯಾಗಿದೆ. ಮಳೆಯಿಂದ ಅಂತರ್ಜಲದಲ್ಲಿ ಬದಲಾವಣೆಯಾಗಿದೆ. ಭೂಕಂಪದ ಅಲೆಗಳು 1 ತಿಂಗಳಿರುವ ಸಾಧ್ಯತೆ

Follow us on

Click on your DTH Provider to Add TV9 Kannada