ಪ್ರೇಕ್ಷಕರಿಗೆ ‘ಬಡವ ರಾಸ್ಕಲ್​’ ಚಿತ್ರ ಇಷ್ಟವಾಯ್ತಾ? ಧನಂಜಯ ಅಭಿಮಾನಿಗಳು ಹೇಳಿದ್ದೇನು?

ಡಾಲಿ ಧನಂಜಯ ಅವರ ಅಭಿಮಾನಿಗಳು ‘ಬಡವ ರಾಸ್ಕಲ್​’ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಏನು ಹೇಳಿದ್ದಾರೆ ಅಂತ ತಿಳಿಯಲು ಈ ವಿಡಿಯೋ ನೋಡಿ..

TV9kannada Web Team

| Edited By: Madan Kumar

Dec 24, 2021 | 4:27 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ ‘ಬಡವ ರಾಸ್ಕಲ್​’ (Badava Rascal Movie) ಚಿತ್ರ ಇಂದು (ಡಿ.24) ಬಿಡುಗಡೆ ಆಗಿದೆ. ಶಂಕರ್​ ಗುರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಡಾಲಿ ಧನಂಜಯ (Daali Dhananjay) ಬಂಡವಾಳ ಹೂಡಿದ್ದಾರೆ. ಮುಖ್ಯ ಪಾತ್ರವನ್ನೂ ನಿಭಾಯಿಸಿರುವ ಧನಂಜಯ್​ಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್​ (Amrutha Iyengar) ನಟಿಸಿದ್ದಾರೆ. ವಾಸುಕಿ ವೈಭವ್​ ಸಂಗೀತ ನಿರ್ದೇಶನ, ಪ್ರೀತಾ ಜಯರಾಮನ್​ ಛಾಯಾಗ್ರಹಣ ಮಾಡಿದ್ದಾರೆ. ಪೋಷಕ ಪಾತ್ರಗಳಲ್ಲಿ ನಾಗ ಭೂಷಣ್​, ರಂಗಾಯಣ ರಘು, ತಾರಾ ಅನುರಾಧ ಹೈಲೈಟ್​ ಆಗಿದ್ದಾರೆ. ಮೊದಲ ದಿನ ‘ಬಡವ ರಾಸ್ಕಲ್​’ ಚಿತ್ರಕ್ಕೆ ಒಳ್ಳೆಯ ಓಪನಿಂಗ್​ ಸಿಕ್ಕಿದೆ. ಡಾಲಿ ಧನಂಜಯ ಅವರ ಅಭಿಮಾನಿಗಳು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಏನು ಹೇಳಿದ್ದಾರೆ? ಈ ವಿಡಿಯೋ ನೋಡಿ..

ಇದನ್ನೂ ಓದಿ:

Badava Rascal Movie Review: ‘ಬಡವ ರಾಸ್ಕಲ್’ನ ಫ್ರೆಂಡ್​ಶಿಪ್​ ಗಟ್ಟಿ ಮಾಡಿದ ಪಂಚಿಂಗ್​ ಡೈಲಾಗ್

83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್​ಪ್ರಿಯರ ಎಮೋಷನ್​, ವಿಶ್ವಕಪ್​ ಗೆಲುವಿನ ಹೊಸ ಸೆಲೆಬ್ರೇಷನ್​

Follow us on

Click on your DTH Provider to Add TV9 Kannada