ಪುನೀತ್​ ರಾಜ್​ಕುಮಾರ್​ಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ; ವೇದಿಕೆಯಲ್ಲಿ ಭಾವುಕರಾದ ಶಿವಣ್ಣ

ಪುನೀತ್​ ರಾಜ್​ಕುಮಾರ್​ ಪರವಾಗಿ ಶಿವರಾಜ್​ಕುಮಾರ್​ ಅವರು ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಅವರು ಭಾವುಕವಾಗಿ ಮಾತನಾಡಿದರು.

TV9kannada Web Team

| Edited By: Madan Kumar

Jan 05, 2022 | 8:35 AM

ನಟ ಪುನೀತ್​ ರಾಜ್​ಕುಮಾರ್ ಅವರಿಗೆ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ ನೀಡಲಾಯಿತು. ‘ಟಿವಿ9 ಕನ್ನಡ’ ಸುದ್ದಿ ವಾಹಿನಿಯ 15ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ 9 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಪುನೀತ್​ ರಾಜ್​ಕುಮಾರ್​ ಪರವಾಗಿ ಶಿವರಾಜ್​ಕುಮಾರ್​ ಅವರು ಪ್ರಶಸ್ತಿ ಸ್ವೀಕರಿಸಿದರು. ಸಿಎಂ ಬಸವರಾಜ ಬೊಮ್ಮಾಯಿ, ಟಿವಿ9 ಸಿಇಒ ಬರುಣ್​ ದಾಸ್​, ಟಿವಿ9 ಕನ್ನಡ ವಾಹಿನಿಯ ಮ್ಯಾನೇಜಿಂಗ್​ ಎಡಿಟರ್​ ಶ್ರೀಧರನ್​ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಶಿವರಾಜ್​ಕುಮಾರ್​ ಭಾವುಕವಾಗಿ ಮಾತನಾಡಿದರು. ‘ಮಾತನಾಡಲು ಬಹಳ ಕಷ್ಟ ಆಗುತ್ತದೆ. ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಅಪ್ಪು ಬಗ್ಗೆ ಯಾವಾಗಲೂ ಹೇಳುತ್ತಲೇ ಇರುತ್ತೇನೆ. ಅಪ್ಪು ಒಂದು ಹೃದಯ. ಆ ಹೃದಯ ಎಲ್ಲರ ಜತೆ ಸೇರಿಕೊಂಡು ಜೀವಂತವಾಗಿ ಇದ್ದೇ ಇರುತ್ತದೆ. ಪ್ರಶಸ್ತಿ ನೀಡಿದ್ದಕ್ಕೆ ಟಿವಿ9ಗೆ ವಂದಿಸುತ್ತೇನೆ’ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ರವಿಚಂದ್ರನ್​, ಸಂಗೀತ ನಿರ್ದೇಶಕ ರಘು ದೀಕ್ಷಿತ್​, ಚರಣ್​ ರಾಜ್​, ಗಾಯಕ ಸಂಜಿತ್​ ಹೆಗಡೆ, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಿದ್ದರು.

ಇದನ್ನೂ ಓದಿ:

ಹೇಗಿತ್ತು ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ ಪ್ರದಾನ ಸಮಾರಂಭ? ಇಲ್ಲಿದೆ ವಿಡಿಯೋ ಝಲಕ್​

‘ಒಳ್ಳೆಯ ಕೆಲಸಕ್ಕೆ ಇದು ಸ್ಫೂರ್ತಿ’; ನವನಕ್ಷತ್ರ ಸನ್ಮಾನ ಕುರಿತು ರಘು ದೀಕ್ಷಿತ್​ ಮಾತು

Follow us on

Click on your DTH Provider to Add TV9 Kannada