‘ಒಳ್ಳೆಯ ಕೆಲಸಕ್ಕೆ ಇದು ಸ್ಫೂರ್ತಿ’; ನವನಕ್ಷತ್ರ ಸನ್ಮಾನ ಕುರಿತು ರಘು ದೀಕ್ಷಿತ್ ಮಾತು
‘ಪ್ರಶಸ್ತಿ ಪಡೆದವರನ್ನು ನೋಡಿ ಯುವಜನರಿಗೂ ಸ್ಫೂರ್ತಿ ಬರುತ್ತದೆ. ಇದು ಶ್ಲಾಘನೀಯ ಕೆಲಸ’ ಎಂದು ಟಿವಿ9 ಕನ್ನಡ ವಾಹಿನಿಯ ‘ನವನಕ್ಷತ್ರ ಸನ್ಮಾನ 2021’ ಕುರಿತು ರಘು ದೀಕ್ಷಿತ್ ಹೇಳಿದ್ದಾರೆ.
‘ಟಿವಿ9 ಕನ್ನಡ’ ಸುದ್ದಿ ವಾಹಿನಿಯ 15ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗಿದೆ. ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗಳನ್ನು ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಆಗಮಿಸಿದ್ದರು. ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದ ಕುರಿತು ಅವರು ಮಾತನಾಡಿದರು. ‘ಪ್ರಶಸ್ತಿ ಸಿಕ್ಕವರಿಗೆ ಇದು ಇನ್ನಷ್ಟು ಪ್ರೋತ್ಸಾಹ ನೀಡುತ್ತದೆ. ಹಲವಾರು ಅಡೆತಡೆಗಳನ್ನು ದಾಟಿಕೊಂಡು ಬಂದು ಸಾಧನೆ ಮಾಡಿದವರಿಗೆ ಯಾರೋ ಈ ರೀತಿ ಸನ್ಮಾನ ಮಾಡಿದಾಗ ಇನ್ನೂ ಒಂದಷ್ಟು ಒಳ್ಳೆಯ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ. ಪ್ರಶಸ್ತಿ ಪಡೆದವರನ್ನು ನೋಡಿ ಯುವಜನರಿಗೂ ಸ್ಫೂರ್ತಿ ಬರುತ್ತದೆ. ಇದು ಶ್ಲಾಘನೀಯ ಕೆಲಸ. 9ರಿಂದ 90 ಜನರಿಗೆ ಪ್ರಶಸ್ತಿ ನೀಡುವಂತಾಗಲಿ’ ಎಂದು ರಘು ದೀಕ್ಷಿತ್ ಹೇಳಿದ್ದಾರೆ.
ಇದನ್ನೂ ಓದಿ:
‘ಸಮಾಜದ ಪ್ರತಿಯೊಬ್ಬರನ್ನೂ ಟಿವಿ9 ಗುರುತಿಸುತ್ತದೆ’; ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್
‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಿಂಚಿದ ರವಿಚಂದ್ರನ್
Published on: Jan 05, 2022 07:17 AM
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು
ಬಿಗ್ಬಾಸ್ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?

