250 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸ್ಯಾಂಡಲ್​ವುಡ್​ ನಿರ್ಮಾಪಕ ಅರೆಸ್ಟ್

250 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸ್ಯಾಂಡಲ್​ವುಡ್​ ನಿರ್ಮಾಪಕ ಅರೆಸ್ಟ್
ಆನಂದ್ ಅಪ್ಪುಗೋಳ್

ಸಂಗೊಳ್ಳಿ ರಾಯಣ್ಣ ಸಹಕಾರ ಬ್ಯಾಂಕ್​ನ ಅವ್ಯವಹಾರ ಪ್ರಕರಣದಲ್ಲಿ ಇವರು ಸುಮಾರು 250 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಇದೆ. ಈ ಪ್ರಕರಣಕ್ಕೆ ಸಂಬಂದಿಸಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪಿಎಂಎಲ್ಎ ಕಾಯಿದೆ ಅಡಿ ದೂರು ದಾಖಲಿಸಿದ್ದರು.

TV9kannada Web Team

| Edited By: Rajesh Duggumane

Jan 06, 2022 | 8:27 PM

ಕನ್ನಡ ಚಿತ್ರರಂಗದ ನಿರ್ಮಾಪಕ, ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಆನಂದ್ ಅಪ್ಪುಗೋಳ್ ಅವರನ್ನು ಇಡಿ ಅಧಿಕಾರಿಗಳು ಇಂದು (ಜನವರಿ 6) ಬಂಧಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಸಹಕಾರ ಬ್ಯಾಂಕ್​ನ ಅವ್ಯವಹಾರ ಪ್ರಕರಣದಲ್ಲಿ ಇವರು ಸುಮಾರು 250 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪಿಎಂಎಲ್ಎ ಕಾಯಿದೆ ಅಡಿ ದೂರು ದಾಖಲಿಸಿದ್ದರು.

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವನ್ನು ಆನಂದ್​ ನಿರ್ಮಾಣ ಮಾಡಿದ್ದರು. ಅವರು ಸಂಗೊಳ್ಳಿ ರಾಯಣ್ಣ ಸಹಕಾರ ಬ್ಯಾಂಕ್​ನ ಅಧ್ಯಕ್ಷರಾಗಿದ್ದಾರೆ. ಅವರು ಈ ಬ್ಯಾಂಕ್​ನಲ್ಲಿ ದೊಡ್ಡ ಮೊತ್ತದ ಅವ್ಯವಹಾರ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ, ಆನಂದ್​ ಅವರನ್ನು ಅರೆಸ್ಟ್​ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರಮುಖ ಆರೋಪ ಏನು?

ಸಂಗೊಳ್ಳಿ ರಾಯಣ್ಣ ಸೊಸೈಟಿ  ಬೆಳಗಾವಿಯಲ್ಲಿ ಪ್ರಮುಖ ಶಾಖೆ ಹೊಂದಿದೆ. ಇದರ ಜತೆಗೆ ಉಳಿದ ಕಡೆಗಳಲ್ಲೂ ಇದು ಶಾಖೆ ಹೊಂದಿದೆ. 26 ಸಾವಿರ ಜನರಿಂದ ಈ ಬ್ಯಾಂಕ್​ನವರು ಠೇವಣಿ ಸಂಗ್ರಹಿಸಿದ್ದರು. ಆನಂದ್ ಅಪ್ಪುಗೋಳ ಸೇರಿ ಸೊಸೈಟಿಯ 13 ಜನರು ಠೇವಣಿಯ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು ಎನ್ನುವುದು ಪ್ರಮುಖ ಆರೋಪ. ಇದಕ್ಕೆ ಸಂಬಂಧಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿತ್ತು. ಕೆಲ ವರ್ಷಗಳ ಹಿಂದೆ ಆನಂದ್​ ಅವರನ್ನು ಮುಂಬೈನಲ್ಲಿ ಬಂಧಿಸಲಾಗಿತ್ತು. ಆ ಬಳಿಕ ಅವರು ಹೊರ ಬಂದಿದ್ದರು. ಈಗ ಮತ್ತೆ ಅವರ ಬಂಧನ ನಡೆದಿದೆ.

ಇದನ್ನೂ ಓದಿ: ‘ಟ್ವಿಸ್ಟ್​ ಇಲ್ಲದೆ ‘ಜೊತೆ ಜೊತೆಯಲಿ’ ಧಾರಾವಾಹಿ ಇಲ್ಲ’; ಆರ್ಯವರ್ಧನ್ ಕ್ಯಾರೆಕ್ಟರ್ ಬದಲಾದ ಬಗ್ಗೆ ನಟ ಅನಿರುದ್ಧ ಮಾತು

Valimai Movie: ಅಜಿತ್​ ನಟನೆಯ ‘ವಲಿಮೈ’ ಚಿತ್ರದ ರಿಲೀಸ್​ ದಿನಾಂಕ ಮುಂದಕ್ಕೆ

Follow us on

Related Stories

Most Read Stories

Click on your DTH Provider to Add TV9 Kannada