Valimai Movie: ಅಜಿತ್​ ನಟನೆಯ ‘ವಲಿಮೈ’ ಚಿತ್ರದ ರಿಲೀಸ್​ ದಿನಾಂಕ ಮುಂದಕ್ಕೆ

Valimai Movie: ಅಜಿತ್​ ನಟನೆಯ ‘ವಲಿಮೈ’ ಚಿತ್ರದ ರಿಲೀಸ್​ ದಿನಾಂಕ ಮುಂದಕ್ಕೆ
ವಲಿಮೈ

ಪ್ರಭಾಸ್​-ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್​’ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಈಗ ಮತ್ತೊಂದು ಸ್ಟಾರ್​ ನಟನ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಅಜಿತ್​ ಅಭಿನಯದ ತಮಿಳಿನ ‘ವಲಿಮೈ’ ಚಿತ್ರಕ್ಕೆ ಕೊವಿಡ್​ ಭಯ ಕಾಡಿದೆ.

TV9kannada Web Team

| Edited By: Rajesh Duggumane

Jan 06, 2022 | 7:26 PM

ಕೊವಿಡ್​ ಮೂರನೇ ಅಲೆ ಕಾಣಿಸಿಕೊಳ್ಳುವ ಭಯ ಕಾಡಿದೆ. ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಈ ಕಾರಣಕ್ಕೆ ಚಿತ್ರರಂಗದಲ್ಲಿ ದೊಡ್ಡ ಆತಂಕ ಶುರುವಾಗಿದೆ. ಸಿನಿಮಾ ವಹಿವಾಟು ಸಂಪೂರ್ಣ ಕುಸಿದಿದೆ. ಶೇ.50 ಆಸನ ವ್ಯವಸ್ಥೆ ಮಾಡಿರುವ ಕಾರಣ ಸ್ಟಾರ್​ ನಟರ ಸಿನಿಮಾಗಳ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿವೆ. ಈಗಾಗಲೇ, ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಹಾಗೂ ಪ್ರಭಾಸ್​-ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್​’ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಈಗ ಮತ್ತೊಂದು ಸ್ಟಾರ್​ ನಟನ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಅಜಿತ್​ ಅಭಿನಯದ ತಮಿಳಿನ ‘ವಲಿಮೈ’ ಚಿತ್ರಕ್ಕೆ ಕೊವಿಡ್​ ಭಯ ಕಾಡಿದೆ.

ಸಂಕ್ರಾಂತಿ ಪ್ರಯುಕ್ತ ಜನವರಿ 13ರಂದು ‘ವಲಿಮೈ’ ರಿಲೀಸ್​ ಆಗೇಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಚಿತ್ರತಂಡ ಘೋಷಿಸಿದೆ. ಕೊವಿಡ್​ ಪ್ರಕರಣ ದಿನೇದಿನೇ ಹೆಚ್ಚುತ್ತಲೇ ಇದೆ. ಇದು ಸಹಜವಾಗಿಯೇ ಆತಂಕ ಮೂಡಿಸಿದೆ. ಶೀಘ್ರದಲ್ಲೇ ಮೂರನೆ ಅಲೆ ಅಪ್ಪಳಿಸುವ ಸೂಚನೆ ಸಿಕ್ಕಿದೆ. ಹೀಗಾಗಿ, ಸರ್ಕಾರ ಕೊವಿಡ್​ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಕಠಿಣ ನಿಯಮ ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ವೀಕೆಂಡ್​ ಕರ್ಫ್ಯೂ ಹೇರಲಾಗಿದೆ. ಹೀಗಾಗಿ, ವಾರಾಂತ್ಯದಲ್ಲಿ ಸಿನಿಮಾ ಪ್ರದರ್ಶನ ಅಸಾಧ್ಯವಾಗಿದೆ. ಅನೇಕ ರಾಜ್ಯಗಳು ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. ಹೀಗಾಗಿ, ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿವೆ. ಅಜಿತ್ ಸಿನಿಮಾ ತಂಡ ಕೂಡ ಹೀಗೆಯೇ ಮಾಡಿದೆ.

‘ವಲಿಮೈ’ ಚಿತ್ರದಲ್ಲಿ ಅಜಿತ್​ ಸಿಕ್ಕಾಪಟ್ಟೆ ಆ್ಯಕ್ಷನ್​ ಮಾಡಿದ್ದಾರೆ. ಸಾಹಸ ದೃಶ್ಯಗಳೇ ಸಿನಿಮಾದ ಹೈಲೈಟ್​ ಆಗಿರಲಿವೆ ಎಂಬುದಕ್ಕೆ ವಿಡಿಯೋ​ ಮೂಲಕ ಸಾಕ್ಷಿ ಸಿಕ್ಕಿದೆ. ಅದರಲ್ಲೂ ಅಜಿತ್​ ವಿಶೇಷವಾಗಿ ಬೈಕ್​ ಸ್ಟಂಟ್​ ಮಾಡಿದ್ದಾರೆ. ಅದನ್ನು ಕಂಡರೆ ಮೈನವಿರೇಳುವಂತಿದೆ. ದೊಡ್ಡ ಪರದೆಯಲ್ಲಿ ಈ ಸಾಹಸ ದೃಶ್ಯಗಳನ್ನು ನೋಡಿದರೆ ಪ್ರೇಕ್ಷಕರ ಎದೆಬಡಿತ ಹೆಚ್ಚುವುದು ಗ್ಯಾರಂಟಿ.

‘ನೇರ್ಕೊಂಡ ಪಾರ್ವೈ’ ಚಿತ್ರಕ್ಕೆ ಆ್ಯಕ್ಷನ್​-ಕಟ್ ಹೇಳಿದ್ದ ಎಚ್​. ವಿನೋದ್​ ಅವರೇ ‘ವಲಿಮೈ’ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ. ಬೋನಿ ಕಪೂರ್​ ಬಂಡವಾಳ ಹೂಡಿದ್ದಾರೆ. ಹಾಗಾಗಿ ಈ ಕಾಂಬಿನೇಷನ್​ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಾಯಕಿಯಾಗಿ ಹುಮಾ ಖುರೇಶಿ ನಟಿಸಿದ್ದಾರೆ.

ಇದನ್ನೂ ಓದಿ: ‘ಟ್ವಿಸ್ಟ್​ ಇಲ್ಲದೆ ‘ಜೊತೆ ಜೊತೆಯಲಿ’ ಧಾರಾವಾಹಿ ಇಲ್ಲ’; ಆರ್ಯವರ್ಧನ್ ಕ್ಯಾರೆಕ್ಟರ್ ಬದಲಾದ ಬಗ್ಗೆ ನಟ ಅನಿರುದ್ಧ ಮಾತು

Follow us on

Related Stories

Most Read Stories

Click on your DTH Provider to Add TV9 Kannada