‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಬಿಗ್​ ಟ್ವಿಸ್ಟ್​; ಇದನ್ನು ನಾವು ಒಪ್ಪಲ್ಲ ಎಂದ ವೀಕ್ಷಕರು

ಸಾಮಾನ್ಯವಾಗಿ, ಹೀರೋ ಆಗಿ ತೆರೆ ಮೇಲೆ ನೋಡುತ್ತಿದ್ದವರನ್ನು ವಿಲನ್​ ಆಗಿ ನೋಡೋಕೆ ಯಾರೂ ಇಷ್ಟಪಡುವುದಿಲ್ಲ. ಅದಕ್ಕೆ ಬೇಗ ಒಗ್ಗಿಕೊಳ್ಳೋಕೆ ಅಭಿಮಾನಿಗಳಿಗೆ ಸಾಧ್ಯವಾಗುವುದಿಲ್ಲ. ಈಗ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲೂ ಅದೇ ಆಗಿದೆ.

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಬಿಗ್​ ಟ್ವಿಸ್ಟ್​; ಇದನ್ನು ನಾವು ಒಪ್ಪಲ್ಲ ಎಂದ ವೀಕ್ಷಕರು
ಜೊತೆ ಜೊತೆಯಲಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 31, 2021 | 4:49 PM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಆರ್ಯವರ್ಧನ್​ (ಅನಿರುದ್ಧ) ಹಾಗೂ ಅನು (ಮೇಘಾ ಶೆಟ್ಟಿ) ಇಬ್ಬರ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ. ಮದುವೆ ಆದ ನಂತರದಲ್ಲಿ ಈ ಕಥೆ ಯಾವ ರೀತಿ ಸಾಗಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇತ್ತು. ಆದರೆ, ಯಾರೂ ಊಹಿಸದ ರೀತಿಯಲ್ಲಿ ಈ ಧಾರಾವಾಹಿ ತಿರುವೊಂದನ್ನು ಪಡೆದುಕೊಂಡಿದೆ. ಇದು ವೀಕ್ಷಕರಿಗೆ ಬೇಸರ ತರಿಸಿದೆ. ಅಲ್ಲದೆ, ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

ಸಾಮಾನ್ಯವಾಗಿ, ಹೀರೋ ಆಗಿ ತೆರೆ ಮೇಲೆ ನೋಡುತ್ತಿದ್ದವರನ್ನು ವಿಲನ್​ ಆಗಿ ನೋಡೋಕೆ ಯಾರೂ ಇಷ್ಟಪಡುವುದಿಲ್ಲ. ಅದಕ್ಕೆ ಬೇಗ ಒಗ್ಗಿಕೊಳ್ಳೋಕೆ ಅಭಿಮಾನಿಗಳಿಗೆ ಸಾಧ್ಯವಾಗುವುದಿಲ್ಲ. ಈಗ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲೂ ಅದೇ ಆಗಿದೆ. ‘ಜೊತೆ ಜೊತೆಯಲಿ’ ಧಾರಾವಾಹಿ ಪಾತ್ರದಲ್ಲಿ ಆರ್ಯವರ್ಧನ್​ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಧಾರಾವಾಹಿಯಲ್ಲಿ ಬರುವ ಆರ್ಯವರ್ಧನ್​ ಪಾತ್ರವನ್ನು ಒಂದು ಬ್ರ್ಯಾಂಡ್​ ರೀತಿಯಲ್ಲಿ ವೀಕ್ಷಕರು ಕಂಡಿದ್ದರು. ಆತ ನಡೆದುಕೊಳ್ಳುತ್ತಿದ್ದ ರೀತಿ, ಆತ ತೋರುತ್ತಿದ್ದ ಕರುಣೆ, ಆತನ ಒಳ್ಳೆಯ ಗುಣಕ್ಕೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು. ಆದರೆ, ಈ ಪಾತ್ರ ನೆಗೆಟಿವ್​ ಶೇಡ್​ಗೆ ತಿರುಗುತ್ತಿದೆ.

View this post on Instagram

A post shared by Zee Kannada (@zeekannada)

ಆರ್ಯವರ್ಧನ್​ನ ಮೊದಲ ಪತ್ನಿ ರಾಜನಂದಿನಿ ಮೃತಪಟ್ಟಿದ್ದಾಳೆ. ಅವಳ ಆಸ್ತಿ ರಾಜನಂದಿನಿ ತಾಯಿ ಶಾರದಾ ದೇವಿ ಮತ್ತು ಹರ್ಷನ ಹೆಸರಿನಲ್ಲಿದೆ. ಇದನ್ನು ಕಬಳಿಸೋಕೆ ಆರ್ಯವರ್ಧನ್​ ಸಂಚು ರೂಪಿಸುತ್ತಿದ್ದಾನೆ. ಇದಕ್ಕೆ ಆತ ದಾಳವನ್ನಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಅನು ಅವಳನ್ನು. ಆರಂಭದಲ್ಲಿ ಈ ಧಾರಾವಾಹಿಯಲ್ಲಿ ಹೈಲೈಟ್​ ಆಗಿದ್ದು ಅನು ಹಾಗೂ ಆರ್ಯವರ್ಧನ್​ ಪ್ರೇಮ ವಿಚಾರ. ಆದರೆ, ಇದೆಲ್ಲವೂ ಸುಳ್ಳು ಎಂಬ ರೀತಿಯಲ್ಲಿ ತೋರುತ್ತಿರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ.

‘ಜೊತೆ ಜೊತೆಯಲಿ’ ನೀಡಿದ ದೊಡ್ಡ ಟ್ವಿಸ್ಟ್​ ಬಗ್ಗೆ ವೀಕ್ಷಕರ ವಲಯ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡುತ್ತಿದೆ. ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಒಂದು ವರ್ಗದವರು ಕಮೆಂಟ್​ ಮಾಡುತ್ತಿದ್ದಾರೆ. ಮೂಲ ಕಥೆಗೂ, ಕನ್ನಡದ ಕಥೆಗೂ ಬದಲಾವಣೆ ಮಾಡಿಕೊಳ್ಳಬೇಕಿತ್ತು ಎಂದು ಕೆಲವರು ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಆರ್ಯವರ್ಧನ್​ ಪಾತ್ರ ಮತ್ತಷ್ಟು ನೆಗೆಟಿವ್​ ಶೇಡ್​ಗೆ ತಿರುಗಿದರೂ ಅಚ್ಚರಿ ಏನಿಲ್ಲ ಎನ್ನುವ ಮಾತು ವೀಕ್ಷಕರ ವಲಯದಿಂದ ಕೇಳಿ ಬಂದಿದೆ.

ಇದನ್ನೂ ಓದಿ: ಡಾರ್ಲಿಂಗ್​ ಕೃಷ್ಣ ಜೊತೆ ಮೇಘಾ ಶೆಟ್ಟಿ ‘ದಿಲ್​ ಪಸಂದ್’​; ‘ಜೊತೆ ಜೊತೆಯಲಿ’ ನಟಿಗೆ ಸಿಕ್ಕ ಪಾತ್ರ ಹೇಗಿದೆ?

‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿಗೆ ಬಹುಭಾಷಾ ಸಿನಿಮಾ ಆಫರ್​; ಈ ಚಿತ್ರಕ್ಕೆ ಹೀರೋ ಯಾರು?

Published On - 4:10 pm, Fri, 31 December 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ