AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಜೀವನದಲ್ಲಿ ಎಂದಿಗೂ ಹೀಗೆ ಆಗಿರಲಿಲ್ಲ ಎಂದು ಎಲ್ಲರ ಎದುರು ಕಣ್ಣೀರು ಹಾಕಿದ ಶಿಲ್ಪಾ ಶೆಟ್ಟಿ

ವೀಕೆಂಡ್​ನಲ್ಲಿ ಈ ಘಟನೆ ನಡೆದಿದೆ. ಸಲ್ಮಾನ್​ ಖಾನ್​ ವೇದಿಕೆ ಮೇಲೆ, ‘ನಿಮಗೆ ಈಗ ಒಂದು ಕರೆ ಬರುತ್ತದೆ’ ಎಂದರು. ಸ್ಕ್ರೀನ್​ ಮೇಲೆ ಶಿಲ್ಪಾ ಶೆಟ್ಟಿ ಮುಖ ಕಾಣುತ್ತಿದ್ದಂತೆ ಶಮಿತಾ ಭಾವುಕರಾದರು.

ನನ್ನ ಜೀವನದಲ್ಲಿ ಎಂದಿಗೂ ಹೀಗೆ ಆಗಿರಲಿಲ್ಲ ಎಂದು ಎಲ್ಲರ ಎದುರು ಕಣ್ಣೀರು ಹಾಕಿದ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ
TV9 Web
| Edited By: |

Updated on: Jan 01, 2022 | 6:30 AM

Share

ಶಿಲ್ಪಾ ಶೆಟ್ಟಿಗೆ (Shilpa Shetty) ಇತ್ತೀಚೆಗೆ ಸಾಕಷ್ಟು ಮುಜುಗರ ಆಗುವಂತಹ ಘಟನೆ ನಡೆದಿತ್ತು. ಪತಿ ರಾಜ್​ ಕುಂದ್ರಾ (Raj Kundra) ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್​​ ಆಗಿದ್ದರು. ಇದೇ ಸಂದರ್ಭದಲ್ಲಿ ಶಿಲ್ಪಾ ಸಹೋದರಿ ಶಮಿತಾ ಶೆಟ್ಟಿ (Shamita Shetty) ‘ಬಿಗ್​ ಬಾಸ್​ ಒಟಿಟಿ’ಗೆ (Bigg Boss OTT) ತೆರಳಿದ್ದರು. ಅದಾದ ಕೆಲವೇ ವಾರಗಳ ಬಳಿಕ ಅವರು ‘ಹಿಂದಿ ಬಿಗ್​ ಬಾಸ್​ 15’ (Bigg Boss 15) ಸೇರಿದ್ದಾರೆ. ಹೀಗಾಗಿ, ಶಮಿತಾ ಜತೆ ಶಿಲ್ಪಾಗೆ ಹೆಚ್ಚು ಸಮಯ ಕಳೆಯೋಕೆ ಸಾಧ್ಯವಾಗಿಲ್ಲ. ಈ ವಿಚಾರವನ್ನು ನೆನೆದು ಶಿಲ್ಪಾ ಕಣ್ಣೀರು ಹಾಕಿದ್ದಾರೆ. ಜೀವನದಲ್ಲಿ ಯವಾಗಲೂ ಈ ರೀತಿ ಆಗಿರಲಿಲ್ಲ ಎಂದು ಭಾವುಕ ನುಡಿಗಳನ್ನು ನುಡಿದಿದ್ದಾರೆ.

‘ಬಿಗ್​ ಬಾಸ್​ 15’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇರುವ ಕೆಲವೇ ಸ್ಪರ್ಧಿಗಳ ಮಧ್ಯೆ ಟಫ್​ ಕಾಂಪಿಟೇಷನ್​ ನಡೆಯುತ್ತಿದೆ. ಯಾರು ಗೆಲ್ಲಬಹುದು ಎನ್ನುವ ಕುತೂಹಲವೂ ಮನೆ ಮಾಡಿದೆ. ಈ ಮಧ್ಯೆ, ಬಿಗ್​ ಬಾಸ್​ ಮನೆಯಲ್ಲಿ ಶಮಿತಾಗೆ ಶಿಲ್ಪಾ ವಿಡಿಯೋ ಕಾಲ್​ ಮಾಡಿದ್ದಾರೆ. ಇದರ ಪ್ರೋಮೋವನ್ನು ಕಲರ್ಸ್​ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ. ಅಕ್ಕ-ತಂಗಿ ನಡುವಿನ ಬಾಂಧವ್ಯ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ವೀಕೆಂಡ್​ನಲ್ಲಿ ಈ ಘಟನೆ ನಡೆದಿದೆ. ಸಲ್ಮಾನ್​ ಖಾನ್​ ವೇದಿಕೆ ಮೇಲೆ, ‘ನಿಮಗೆ ಈಗ ಒಂದು ಕರೆ ಬರುತ್ತದೆ’ ಎಂದರು. ಸ್ಕ್ರೀನ್​ ಮೇಲೆ ಶಿಲ್ಪಾ ಶೆಟ್ಟಿ ಮುಖ ಕಾಣುತ್ತಿದ್ದಂತೆ ಶಮಿತಾ ಭಾವುಕರಾದರು. ಶಮಿತಾ ಬಗ್ಗೆ ಶಿಲ್ಪಾ ಮೆಚ್ಚುಗೆಯ ಮಾತುಗಳನ್ನು ಆಡುತ್ತಾ ಕಣ್ಣೀರು ಹಾಕಿದರು.

View this post on Instagram

A post shared by ColorsTV (@colorstv)

‘ನನ್ನ ಬದುಕಿನಲ್ಲಿ ಈ ರೀತಿ ಯಾವಾಗಲೂ ಆಗಿರಲಿಲ್ಲ. ಇಷ್ಟು ಸಮಯಗಳ ಕಾಲ, ಇಷ್ಟೊಂದು ದೂರ ನಾವು ಎಂದಿಗೂ ಇದ್ದ ಉದಾಹರಣೆಯೇ ಇಲ್ಲ. ಹಲವು ತಿಂಗಳಿಂದ ನಾನು ಅವಳನ್ನು ನೋಡಿಲ್ಲ. ನಾನು ಕಂಟ್ರೋಲ್​ ಮಾಡಿಕೊಳ್ಳುತ್ತಿದ್ದೇನೆ. ನಾವಿಬ್ಬರೂ ಒಬ್ಬರಿಗೊಬ್ಬರು ಸ್ಟ್ರೆಂತ್​ ಆಗಿರಬೇಕು. ನನ್ನ ಪಾಲಿಗೆ ಶಮಿತಾ ವಿನ್ನರ್​. ಶಮಿತಾ ಶೆಟ್ಟಿ ಸಹೋದರಿ ಎಂದು ಹೇಳಿಕೊಳ್ಳೋಕೆ ನನಗೆ ತುಂಬಾ ಗರ್ವ ಇದೆ’ ಎಂದಿದ್ದಾರೆ ಶಿಲ್ಪಾ.

‘ಬಿಗ್​ ಬಾಸ್​ 15’ ಆರಂಭವಾಗಿ ಹಲವು ವಾರಗಳು ಪೂರ್ಣಗೊಂಡಿದೆ. ಇನ್ನು ಕೆಲವೇ ವಾರಗಳಲ್ಲಿ ಬಿಗ್​ ಬಾಸ್ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ. ಯಾರು ವಿನ್ನರ್​ ಆಗಲಿದ್ದಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ಇದನ್ನೂ ಓದಿ: Shilpa Shetty: ಜಿಮ್​ನಲ್ಲಿ ಬೆವರಿಳಿಸಿದ ಶಿಲ್ಪಾ ಶೆಟ್ಟಿ; ಹೇಗಿದೆ ನೋಡಿ ವರ್ಕೌಟ್​ ವಿಡಿಯೋ

ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಾಂಪತ್ಯಕ್ಕೆ 12 ವರ್ಷದ ಸಂಭ್ರಮ; ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟ ನಟಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ