Sign In

By signing in or creating an account, you agree with Associated Broadcasting Company's Terms & Conditions and Privacy Policy.

Shilpa Shetty: ಜಿಮ್​ನಲ್ಲಿ ಬೆವರಿಳಿಸಿದ ಶಿಲ್ಪಾ ಶೆಟ್ಟಿ; ಹೇಗಿದೆ ನೋಡಿ ವರ್ಕೌಟ್​ ವಿಡಿಯೋ

ರಾಜ್​ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್​ ಆದಾಗಲೂ ಶಿಲ್ಪಾ ಯೋಗ ಮಾಡುವ ಮೂಲಕ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಿದ್ದರು.

Shilpa Shetty: ಜಿಮ್​ನಲ್ಲಿ ಬೆವರಿಳಿಸಿದ ಶಿಲ್ಪಾ ಶೆಟ್ಟಿ; ಹೇಗಿದೆ ನೋಡಿ ವರ್ಕೌಟ್​ ವಿಡಿಯೋ
ಶಿಲ್ಪಾ ಶೆಟ್ಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 15, 2021 | 5:30 PM

ಶಿಲ್ಪಾ ಶೆಟ್ಟಿ (Shilpa Shetty) ಅವರು ಇತ್ತೀಚೆಗೆ ಸಾಕಷ್ಟು ಏಳುಬೀಳುಗಳನ್ನು ಕಾಣುತ್ತಿದ್ದಾರೆ. ಆದರೆ, ಅವರು ಎಂದಿಗೂ ಸೈಲೆಂಟ್​ ಆಗಿಲ್ಲ. ನಿತ್ಯ ಯೋಗ ಹಾಗೂ ವರ್ಕೌಟ್​ ಮೂಲಕವೇ ದಿನವನ್ನು ಆರಂಭಿಸುತ್ತಾರೆ. ಈ ದಿನಚರಿಯನ್ನು ಅವರು ಎಂದಿಗೂ ತಪ್ಪಿಸಿಲ್ಲ. ರಾಜ್​ ಕುಂದ್ರಾ (Raj Kundra) ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್​ ಆದಾಗಲೂ ಶಿಲ್ಪಾ ಯೋಗ ಮಾಡುವ ಮೂಲಕ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಿದ್ದರು. ಇಂದು ಶಿಲ್ಪಾ ಶೆಟ್ಟಿ ಹೊಸ ವರ್ಕೌಟ್​ ವಿಡಿಯೋ ಒಂದನ್ನು ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ವರ್ಕೌಟ್​ ಮಾಡುತ್ತಿದ್ದಾರೆ. ಆರೇಂಜ್​ ಬಣ್ಣದ ಸ್ಪೋರ್ಟ್ಸ್​ ಬ್ರಾ ತೊಟ್ಟು, ಪ್ಯಾಂಟ್ ಹಾಕಿದ್ದಾರೆ ಶಿಲ್ಪಾ ಶೆಟ್ಟಿ. ಕೈಯಲ್ಲಿ ರಾಡ್​ ಹಿಡಿದು ಜಿಮ್​ನಲ್ಲಿ ಬೆವರು ಹರಿಸಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ಫಿಟ್ನೆಸ್​ ವಿಚಾರದಲ್ಲಿ ತಜ್ಞರಾಗಿದ್ದಾರೆ. ಇತರರಿಗೂ ಅವರು ಯೋಗ ಹೇಳಿಕೊಡುತ್ತಾರೆ. ಬೇರೆ ಬೇರೆ ನಗರದಲ್ಲಿ ಫಿಟ್​​ನೆಸ್​ ಕೇಂದ್ರ ಆರಂಭಿಸಲು ಆಸಕ್ತಿ ತೋರಿಸಿದ್ದರು ಎನ್ನಲಾಗಿತ್ತು. ಅದಕ್ಕಾಗಿ ಕೆಲವು ಉದ್ಯಮಿಗಳಿಂದ 1.5 ಕೋಟಿ ರೂ. ಹಣ ಪಡೆದು, ಫಿಟ್ನೆಸ್​ ಕೇಂದ್ರವನ್ನೂ ಆರಂಭಿಸಿಲ್ಲ, ಹಣವನ್ನೂ ವಾಪಸ್​ ನೀಡಿಲ್ಲ ಎಂಬ ಆರೋಪ ಇತ್ತು. ಈ ಸಂಬಂಧ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಆದರೆ ಇದರ ಅಸಲಿಯತ್ತನ್ನು ನಟಿ ತೆರೆದಿಟ್ಟಿದ್ದರು.

ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಅವರು ಮಾಹಿತಿ ನೀಡಿದ್ದರು. ಅಸಲಿಗೆ ಶಿಲ್ಪಾ ಶೆಟ್ಟಿ ಅವರದ್ದು ಎನ್ನಲಾದ SFL ಫಿಟ್​ನೆಸ್​ ಕೇಂದ್ರಕ್ಕೂ ಶಿಲ್ಪಾಗೂ ಸಂಬಂಧವೇ ಇಲ್ಲವಂತೆ. ‘SFL ಫಿಟ್ನೆಸ್ ಇದು ಕಾಶಿಫ್ ಖಾನ್ ನಡೆಸುತ್ತಿರುವ ಉದ್ಯಮ. ಅವರು ದೇಶಾದ್ಯಂತ SFL ಫಿಟ್‌ನೆಸ್ ಜಿಮ್‌ಗಳನ್ನು ತೆರೆಯಲು SFL ಬ್ರಾಂಡ್‌ನ ಹಕ್ಕುಗಳನ್ನು ತೆಗೆದುಕೊಂಡಿದ್ದರು. ಎಲ್ಲಾ ವ್ಯವಹಾರಗಳು ಅವರಿಂದ ನಡೆಯುತ್ತಿವೆ. ಅವರ ಯಾವುದೇ ವಹಿವಾಟಿನ ಬಗ್ಗೆ ನಮಗೆ ತಿಳಿದಿಲ್ಲ. ಈ ವ್ಯವಹಾರದಲ್ಲಿ ನಾವು ಅವರಿಂದ ಒಂದು ರೂಪಾಯಿಯನ್ನು ಪಡೆದಿಲ್ಲ. ಎಲ್ಲಾ ಫ್ರಾಂಚೈಸಿಗಳ ವ್ಯವಹಾರವನ್ನು ಕಾಶಿಫ್ ನೋಡಿಕೊಳ್ಳುತ್ತಿದ್ದಾರೆ. ಕಂಪನಿಯು 2014 ರಲ್ಲಿ ಮುಚ್ಚಿದೆ. ಈಗ ಅದರ ಸಂಪೂರ್ಣ ಜವಾಬ್ದಾರಿ ಕಾಶಿಫ್ ಖಾನ್ ನಿರ್ವಹಿಸುತ್ತಿದ್ದಾರೆ’ ಎಂದಿದ್ದಾರೆ ಶಿಲ್ಪಾ.

‘ಕಳೆದ 28 ವರ್ಷಗಳಿಂದ ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಈಗ ನನ್ನ ಹೆಸರು ಮತ್ತು ಖ್ಯಾತಿಗೆ ಹಾನಿಯಾಗುತ್ತಿದೆ. ಭಾರತದಲ್ಲಿ ಕಾನೂನು ಪಾಲಿಸುವ ಹೆಮ್ಮೆಯ ಪ್ರಜೆಯಾಗಿ ನನ್ನ ಹಕ್ಕುಗಳನ್ನು ರಕ್ಷಿಸಬೇಕು. ಕೃತಜ್ಞತೆಯೊಂದಿಗೆ, ಶಿಲ್ಪಾ ಶೆಟ್ಟಿ ಕುಂದ್ರಾ,’ ಎಂದು ಅವರು ಪತ್ರ ಮುಗಿಸಿದ್ದಾರೆ. ಅಂದಹಾಗೆ, ಶಿಲ್ಪಾ ಹೆಸರಿಗೆ ಮಸಿ ಬಳಿಯಬೇಕು ಎನ್ನುವ ಕಾರಣಕ್ಕೆ ಈ ರೀತಿಯ ಕುತಂತ್ರ ನಡೆದಿದೆಯೇ ಎನ್ನುವ ಅನುಮಾನ ಮೂಡಿದ್ದು, ತನಿಖೆಯಿಂದ ಅಸಲಿ ವಿಚಾರ ಹೊರಬರಬೇಕಿದೆ.

ಇದನ್ನೂ ಓದಿ: ಶಿಲ್ಪಾ ಹೆಸರಿಗೆ ಮಸಿ ಬಳಿಯೋಕೆ ಕಾಶಿಫ್ ಖಾನ್ ನಡೆಸಿದ್ರು ಕುತಂತ್ರ? ಅಸಲಿ ವಿಚಾರ ತೆರೆದಿಟ್ಟ ನಟಿ ಡಿವೋರ್ಸ್ ವಿಚಾರಕ್ಕೆ ಶಿಲ್ಪಾ ಶೆಟ್ಟಿ ಬ್ರೇಕ್