Sign In

By signing in or creating an account, you agree with Associated Broadcasting Company's Terms & Conditions and Privacy Policy.

Nora Fatehi: ದ್ವಂದ್ವಾರ್ಥಕ್ಕೆ ಕಾರಣವಾದ ‘ಕುಸು ಕುಸು’ ಹಾಡು; ನೆಟ್ಟಿಗರ ಮಜವಾದ ಪ್ರತಿಕ್ರಿಯೆ ನೋಡಿ

Kusu Kusu Song: ಜಾನ್ ಅಬ್ರಹಾಂ ನಟಿಸಿರುವ, ನೋರಾ ಫತೇಹಿ ಕಾಣಿಸಿಕೊಂಡಿರುವ ‘ಕುಸು ಕುಸು’ ಹಾಡು ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಇದರ ನಡುವೆ ಹಾಡು ತಮಾಷೆಗೂ ಕಾರಣವಾಗಿದೆ. ಏನಿದು ಸಮಾಚಾರ ಅಂತೀರಾ? ಮುಂದೆ ಓದಿ.

Nora Fatehi: ದ್ವಂದ್ವಾರ್ಥಕ್ಕೆ ಕಾರಣವಾದ ‘ಕುಸು ಕುಸು’ ಹಾಡು; ನೆಟ್ಟಿಗರ ಮಜವಾದ ಪ್ರತಿಕ್ರಿಯೆ ನೋಡಿ
‘ಕುಸು ಕುಸು’ ಹಾಡಿನಲ್ಲಿ ನೋರಾ ಫತೇಹಿ
Follow us
TV9 Web
| Updated By: shivaprasad.hs

Updated on: Nov 16, 2021 | 11:48 AM

ಬಾಲಿವುಡ್ ಡಾನ್ಸರ್, ನಟಿ ನೋರಾ ಫತೇಹಿ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಅವರು ಕಾಣಿಸಿಕೊಂಡ ಹಾಡುಗಳು ಪಡ್ಡೆಹುಡುಗರ ನಿದ್ದೆಗೆಡಿಸುವುದಲ್ಲದೇ, ಚಿತ್ರಕ್ಕೆ ಬಹುದೊಡ್ಡ ಮೈಲೇಜ್ ನೀಡುತ್ತವೆ. ಇದೀಗ ಜಾನ್ ಅಬ್ರಹಾಂ ನಟನೆಯ ‘ಸತ್ಯಮೇವ ಜಯತೆ 2’ ಚಿತ್ರದ ‘ಕುಸು ಕುಸು’ ಹಾಡು ಬಿಡುಗಡೆಯಾಗಿದ್ದು, ಅದರಲ್ಲಿ ನೋರಾ ಸೊಂಟ ಬಳುಕಿಸುತ್ತಾ, ಬೆಲ್ಲಿ ಡಾನ್ಸ್ ಮಾಡಿದ್ದಾರೆ. ಇದು ಸಖತ್ ಹಿಟ್ ಆಗಿದ್ದು, ಬಿಡುಗಡೆಗೊಂಡ ಐದು ದಿನಗಳೊಳಗೆ 50 ಮಿಲಿಯನ್ ವೀಕ್ಷಣೆ ಕಂಡಿದೆ. ಇದೀಗ ಹಾಡು ಮತ್ತೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದು, ನೆಟ್ಟಿಗರು ಸಖತ್ ತಮಾಷೆಯ ಮೀಮ್​ಗಳನ್ನು ಹರಿಬಿಡುತ್ತಾರೆ. ಇದಕ್ಕೆ ಕಾರಣ, ‘ಕುಸು ಕುಸು’ ಎಂದರೆ ತಮಿಳು ಭಾಷೆಯಲ್ಲಿ ಅಪಾನವಾಯು ಎಂದರ್ಥ. ಇದೇ ಕಾರಣಕ್ಕೆ, ನೋರಾ ಕಾಣಿಸಿಕೊಂಡಿರುವ ‘ಕುಸು ಕುಸು’ ಸಖತ್ ಸುದ್ದಿಯಾಗುತ್ತಿದ್ದು, ಬಗೆಬಗೆಯ ಮೀಮ್​ಗಳಿಗೆ ಆಹಾರವಾಗಿದೆ. ಅಂತಹ ಹಲವು ಮೀಮ್​ಗಳು ಇಲ್ಲಿವೆ.

ಟ್ವಿಟರ್​ ಬಳಕೆದಾರರು ಬಹಳ ಮಜವಾಗಿ ಪ್ರತಿಕ್ರಿಯಿಸುತ್ತಿದ್ದು, ಟಿ ಸೀರೀಸ್ ಮೊದಲು ತಮಿಳುನಾಡು ಅವರನ್ನು ಒಮ್ಮೆ ಸಂಪರ್ಕಿಸಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಹಲವರು, ‘ಕುಸು ಕುಸು ನವೆಂಬರ್ 10ರಿಂದ ಬಿಡುಗಡೆಯಾಗಿದೆ. ಎಲ್ಲಿ ಎಂದು ಕೇಳಬೇಡಿ ಎಂದು ತಮಾಷೆ ಮಾಡಿದ್ಧಾರೆ. ಮತ್ತೊಬ್ಬರು ‘ಹಾಡಿನಲ್ಲಿ ಸಾಹಿತ್ಯವಿದೆಯೇ ಅಥವಾ ಶಬ್ಧ ಮಾತ್ರವೇ?’ ಎಂದು ನಕ್ಕಿದ್ಧಾರೆ. ಒಟ್ಟಿನಲ್ಲಿ ಹಾಡನ್ನು ಜನರು ಸಖತ್ ಎಂಜಾಯ್ ಮಾಡಿದ್ದು, ಅವುಗಳೊಂದಿಗೆ ಮೀಮ್​ಗಳನ್ನು ನೋಡಿ ನಕ್ಕು ಹಗುರಾಗಿದ್ದಾರೆ.

ಒಂದು ಭಾಷೆಯ ಪದಗಳು ಮತ್ತೊಂದು ಭಾಷೆಯಲ್ಲಿ ಬೇರೆಯದೇ ಅರ್ಥ ಹೊಂದಿರುವುದು ಮಾಮೂಲು. ಕೆಲವೊಮ್ಮೆ ಒಂದು ಭಾಷೆಯಲ್ಲಿ ಗಹನವಾದ ಅರ್ಥ ನೀಡುವ ಪದ, ಮತ್ತೊಂದು ಭಾಷೆಯಲ್ಲಿ ಹಾಸ್ಯವನ್ನೂ ಹೊಮ್ಮಿಸಬಹುದು. ಸದ್ಯ ನೋರಾ ಕಾಣಿಸಿಕೊಂಡಿರುವ ಈ ಹಾಡು, ಜನರನ್ನು ಹುಚ್ಚೆಬ್ಬಿಸುವಂತೆ ಕುಣಿಸಲೆಂದೇ ರಚಿತವಾಗಿದೆ. ಆದರೆ ಅದರದೊಂದು ಪದ ಮಾತ್ರ ಭಿನ್ನ ಅರ್ಥ ಹೊಮ್ಮಿಸಿ, ತಮಾಷೆಗೆ ಕಾರಣವಾಗಿದೆ.

ಸದ್ಯ ಟ್ರೆಂಡ್ ಆಗಿರುವ ‘ಕುಸು ಕುಸು’ ಹಾಡು ಇಲ್ಲಿದೆ:

‘ಕುಸು ಕುಸು’ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದು ತಾನಿಷ್ಕ್ ಬಗ್ಚಿ. ಅದಕ್ಕೆ ಧ್ವನಿಯಾಗಿರುವವರು ಜರಾ ಎಸ್ ಖಾನ್ ಹಾಗೂ ದೇವ್ ನೇಗಿ.

ಇದನ್ನೂ ಓದಿ:

Nora Fatehi: ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ನೋರಾ ಫತೇಹಿ

Puneeth Rajkumar: ಪುನೀತ್ ಭಾಗವಹಿಸಿದ್ದ ಕೊನೆಯ ಪಾರ್ಟಿಯ ಕುರಿತು ಗುರುಕಿರಣ್ ಹೇಳಿದ್ದೇನು?

ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್