Puneeth Rajkumar: ಪುನೀತ್ ಭಾಗವಹಿಸಿದ್ದ ಕೊನೆಯ ಪಾರ್ಟಿಯ ಕುರಿತು ಗುರುಕಿರಣ್ ಹೇಳಿದ್ದೇನು?
Gurukiran: ಸ್ಯಾಂಡಲ್ವುಡ್ ಸಂಗೀತ ನಿರ್ದೇಶಕ ಗುರುಕಿರಣ್, ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದ ಹಿಂದಿನ ದಿನದ ಘಟನೆಗಳನ್ನು ವಿವರಿಸಿದ್ದಾರೆ.
ಸ್ಯಾಂಡಲ್ವುಡ್ ಸಂಗೀತ ನಿರ್ದೇಶಕ ಗುರುಕಿರಣ್ ಪುನೀತ್ ರಾಜ್ಕುಮಾರ್ ಕುರಿತು ಟಿವಿ9ನೊಂದಿಗೆ ಮಾತನಾಡಿದ್ದಾರೆ. ಅಪ್ಪು ನಿಧನಕ್ಕೂ ಹಿಂದಿನ ದಿನ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅಲ್ಲಿ ಅವರು ಸಖತ್ ಎನರ್ಜಿಟಿಕ್ ಆಗಿದ್ದರು ಎಂದು ಗುರುಕಿರಣ್ ಹೇಳಿದ್ಧಾರೆ. ಪುನೀತ್ ನನಗೆ ಕುಟುಂಬದಂತೆ. ಆಗಾಗ ಜೊತೆಯಾಗುತ್ತಿದ್ದೆವು. ಪುನೀತ್ ನಿಧನದ ಹಿಂದಿನ ದಿನ ನಡೆದ ಪಾರ್ಟಿಯ ಕುರಿತು ಮಾತನಾಡಿದ ಅವರು, ಅದೊಂದು ಖಾಸಗಿ ಪಾರ್ಟಿಯಾಗಿತ್ತು. ಮನೆಯಲ್ಲೇ ನಡೆದ ಕಾರ್ಯಕ್ರಮ ಅದು. ಅಂದು ಚಿತ್ರಗಳ ಬಗ್ಗೆ, ವೈಯಕ್ತಿಕವಾಗಿ ಅವರು ಮಾತನಾಡಿದ್ದರು. ಒಬ್ಬರಿಗೊಬ್ಬರು ಕಾಲೆಳೆದುಕೊಂಡು ಮಾತನಾಡುತ್ತಿದ್ದೆವು. ವರ್ಕೌಟ್ ಬಗ್ಗೆ ಮಾತನಾಡಿದ್ದೆವು ಎಂದು ಗುರುಕಿರಣ್ ನೆನಪಿಸಿಕೊಂಡಿದ್ಧಾರೆ.
ಪುನೀತ್ ಅಂದು ಎದೆಯ ಮೇಲೆ ಕೈ ಇಟ್ಟುಕೊಂಡಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಅದರ ಕುರಿತು ಮಾತನಾಡಿರುವ ಗುರುಕಿರಣ್, ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಒಬ್ಬೊಬ್ಬರ ಮ್ಯಾನರಿಸಂ ಒಂದೊಂದು ರೀತಿ ಇರತ್ತೆ. ಅದು ಕ್ಯಾಶುವಲ್ ಆದ ಘಟನೆ ಎಂದು ಸ್ಪಷ್ಟನೆ ನೀಡಿದ್ದಾರೆ. ವಾಸ್ತವವಾಗಿ ಅಂದು ಅಪ್ಪು ಎನರ್ಜೆಟಿಕ್ ಆಗಿದ್ದರು. ನಾನೇ ಸ್ವಲ್ಪ ಸುಸ್ತಾಗಿದ್ದೆ. ಆದರೆ ಮಾರನೇ ದಿನ ಸುದ್ದಿ ಕೇಳಿದಾಗ ನಾವ್ಯಾರೂ ನಂಬುವುದಕ್ಕೆ ತಯಾರಿರಲಿಲ್ಲ ಎಂದು ನುಡಿದಿದ್ದಾರೆ.
ಇದನ್ನೂ ಓದಿ:
‘ಗಂಧದ ಗುಡಿ’ಯಂತೆಯೇ ಮತ್ತೊಂದು ಮಹತ್ತರ ಯೋಜನೆಯ ತಯಾರಿಯಲ್ಲಿದ್ದ ಪುನೀತ್; ಅಪ್ಪು ಕನಸನ್ನು ಹಂಚಿಕೊಂಡ ನವೀನ್ ಸಜ್ಜು
ಅಚ್ಚರಿ ಘಟನೆ! ಪುನೀತ್ ರಾಜ್ಕುಮಾರ್ ಸಮಾಧಿಗೆ ಪ್ರದಕ್ಷಿಣೆ ಹಾಕಿದ ಕೋಳಿ