ಪ್ರೀತಿಯನ್ನು ಯಾಚಿಸಬಾರದು, ಅದನ್ನು ಅರಸಿಕೊಂಡು ಜನ ನಿಮ್ಮಲ್ಲಿಗೆ ಬರಬೇಕು: ಡಾ ಸೌಜನ್ಯ ವಶಿಷ್ಠ

ಪ್ರೀತಿಯನ್ನು ಯಾಚಿಸಬಾರದು, ಅದನ್ನು ಅರಸಿಕೊಂಡು ಜನ ನಿಮ್ಮಲ್ಲಿಗೆ ಬರಬೇಕು: ಡಾ ಸೌಜನ್ಯ ವಶಿಷ್ಠ

TV9 Web
| Updated By: preethi shettigar

Updated on: Nov 16, 2021 | 9:11 AM

ಕನ್ನಡಿ ಎದುರು ನಿಂತಾಗ ಅದರಲ್ಲಿ ಕಾಣುವ ನಮ್ಮ ಪ್ರತಿಬಿಂಬವನ್ನು ನಾವು ಮನಸಾರೆ ಪ್ರೀತಿಸಬೇಕು. ನಮ್ಮನ್ನು ಪ್ರೀತಿಸಿಕೊಂಡರೆ ಅದನ್ನು ಬೇರೆಯವರಿಂದ ಆಪೇಕ್ಷಿಸುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಅವರು ಹೇಳುತ್ತಾರೆ

ಬೇರೆಯವರಿಂದ ಪ್ರೀತಿ ಯಾಚಿಸುವುದು, ಪ್ರೇಮಭಿಕ್ಷೆ ಕೇಳುವುದು ಯಾವತ್ತೂ ಮಾಡಬಾರದು ಅಂತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ಪ್ರೀತಿ ಅನ್ನೋದು ಒಂದು ಭಾವನೆ, ಅದನ್ನು ಬಲವಂತದಿಂದ ಪಡೆಯುವುದೂ ಅಗಲ್ಲ ಮತ್ತು ಬಲವಂತದಿಂದ ಇಟ್ಟುಕೊಳ್ಳಲೂ ಬಾರದು. ನಮ್ಮ ಬದುಕಿನಲ್ಲಿ ನಾವು ಪ್ರತಿನಿತ್ಯ ಭಿಕ್ಷೆ ಬೇಡುವವರನ್ನು ನೋಡುತ್ತೇವೆ. ಒಬ್ಬ ಭಿಕ್ಷುಕ ಭಿಕ್ಷೆ ಕೇಳುತ್ತಾ ನಮ್ಮ ಹತ್ತಿರ ಬಂದಾಗ ನಾವು ನಮಗೆ ತಿಳಿದಷ್ಟನ್ನು ಕೊಡುತ್ತೇವೆಯೇ ಹೊರತು ಅವನು ಕೇಳಿದಷ್ಟು ಅಲ್ಲ. ಪ್ರೀತಿ ಪ್ರೇಮಕ್ಕೂ ಇದೆ ನಿಯಮ ಅನ್ವಯವಾಗುತ್ತದೆ. ನಾವು ಕೇಳಿದಾಗ ಮತ್ತು ಕೇಳಿದಷ್ಟು ಸಿಗಲಾರದು. ಹಾಗಾಗಿ, ನಾವು ಪ್ರೀತಿಯ ಭಿಕ್ಷೆ ಯಾಚಿಸಿ ನಿರಾಶರಾಗುವುದಕ್ಕಿಂತ ಅದನ್ನು ಯಾಚಿಸದೆ ಸಂತೋಷವಾಗಿರುವುದು ಒಳ್ಳೆಯದು ಅಂತ ಸೌಜನ್ಯ ಹೇಳುತ್ತಾರೆ.

ನಮ್ಮ ಜೀವನದಲ್ಲಿ ಅತಿ ದೀರ್ಘಾವಧಿಯ ಅಥವಾ ಅದರ ಅಂತ್ಯದವರೆಗೆ ಸಂಬಂಧ ಹೊಂದಿರುವುದು ಸ್ವತಃ ನಮ್ಮಿಂದ. ಕನ್ನಡಿ ಎದುರು ನಿಂತಾಗ ಅದರಲ್ಲಿ ಕಾಣುವ ನಮ್ಮ ಪ್ರತಿಬಿಂಬವನ್ನು ನಾವು ಮನಸಾರೆ ಪ್ರೀತಿಸಬೇಕು. ನಮ್ಮನ್ನು ಪ್ರೀತಿಸಿಕೊಂಡರೆ ಅದನ್ನು ಬೇರೆಯವರಿಂದ ಆಪೇಕ್ಷಿಸುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಅವರು ಹೇಳುತ್ತಾರೆ
ಅದೇ ರೀತಿಯಾಗಿ ನಾವು ನಮ್ಮ ಕುಟುಂಬವನ್ನು ಪ್ರೀತಿಸಬೇಕು, ಕುಟುಂಬವೆಂದರೆ ಹೆಂಡತಿಯಾಗಿರಬಹುದು, ತಂದೆ-ತಾಯಿಯಾಗಿರಬಹುದು, ಅಣ್ಣ-ತಮ್ಮ, ಅಕ್ಕ-ತಂಗಿ ಅಗಿರಬಹುದು, ಗಂಡನಾಗಿರಬಹುದು-ಅವರನ್ನು ನಿಸ್ವಾರ್ಥ ಮನೋಭಾವದಿಂದ ಪ್ರೀತಿಸಬೇಕು ಅಂತ ಡಾ ಸೌಜನ್ಯ ಹೇಳುತ್ತಾರೆ. Charity begins at home ಅಂತ ಇಂಗ್ಲಿಷ್ ಭಾಷೆಯಲ್ಲಿ ಒಂದು ಮಾತಿದೆ. ಅದು ಆಕ್ಷರಶಃ ಸತ್ಯ ಅಂತ. ನಾವು ಬೇರೆಯವರಿಗೆ ನಿಷ್ಕಲ್ಮಶ ಪ್ರೀತಿ ನೀಡಿದರೆ ಅದರ ನೂರ್ಪಟ್ಟು ನಮಗೆ ವಾಪಸ್ಸು ಸಿಗುತ್ತದೆ ಅಂತ ಆವರು ಹೇಳುತ್ತಾರೆ.

ವ್ಯಕ್ತಿಯೊಬ್ಬನ ಕುಟುಂಬದಲ್ಲಿ ಪ್ರೀತಿಯ ಕೊರತೆ ಇಲ್ಲದಿದ್ದರೆ ಆ ಕುಟುಂಬ ಸ್ಟ್ರಾಂಗ್ ಅಗಿರುತ್ತದೆ. ಅದರ ಪ್ರತಿಯೊಬ್ಬ ಸದಸ್ಯನ ಅತ್ಮಸ್ಥೈರ್ಯ ಬಲವಾಗಿರುತ್ತದೆ. ಹುಟ್ಟು ಮತ್ತು ಸಾವಿನ ನಡುವೆ ನಮಗೆ ಎರಡು ಆಯ್ಕೆಗಳಿರುತ್ತವೆ, ಸಂತೋಷದಿಂದ ಜೀವಿಸುವುದು ಇಲ್ಲವೇ ವಿಷಾದದಿದ ಕೊರಗುವುದು ಆಯ್ಕೆ ನಮ್ಮದು ಅಂತ ಸೌಜನ್ಯ ಹೇಳುತ್ತಾರೆ.

ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಹಾಗೆಯೇ, ನಮ್ಮ ಆರೋಗ್ಯ, ಉಡುಗೆ-ತೊಡುಗೆ, ಒಳ್ಳೆಯ ಆಹಾರ, ದೇಹಕ್ಕೆ ವ್ಯಾಯಾಮ, ಕ್ರೀಡೆ, ಸಾಮಾಜಿಕ ಬದುಕು ಎಲ್ಲವನ್ನೂ ಪ್ರೀತಿಸಿತ್ತಾ ಸಂತೋಷದಿಂದ ಇರಬೇಕು. ಸಂತೋಷದಿಂದ ಇರುವವರನ್ನು ಜನ ಪ್ರೀತಿಸುತ್ತಾರೆ ಎಂದು ಡಾ ಸೌಜನ್ಯ ಹೇಳುತ್ತಾರೆ.

ಇದನ್ನೂ ಓದಿ:    ಖ್ಯಾತ ನಟನಿಗೆ ಇದೆಂಥಾ ಗತಿ? ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ನೋಡಿ ಕಣ್ಣೀರಿಟ್ಟ ಫ್ಯಾನ್ಸ್​​​