ಸೈಫ್​-ಕರೀನಾ ಮಾಡಿದ ತಪ್ಪೇನು? ಫೋಟೋ ನೋಡಿ ನಿಮಗೆ ಪತ್ತೆ ಹಚ್ಚೋಕೆ ಆಗುತ್ತಾ ನೋಡಿ

ಸೈಫ್​-ಕರೀನಾ ಮಾಡಿದ ತಪ್ಪೇನು? ಫೋಟೋ ನೋಡಿ ನಿಮಗೆ ಪತ್ತೆ ಹಚ್ಚೋಕೆ ಆಗುತ್ತಾ ನೋಡಿ
ಸೈಫ್​ ಮತ್ತು ಕರೀನಾ

ಸೈಫ್​ ಅಲಿ ಖಾನ್​ ಹಾಗೂ ಕರೀನಾ ಕಪೂರ್​ ಅವರು ಇತ್ತೀಚೆಗೆ ಕಾರಿನಲ್ಲಿ ಕಾಣಿಸಿಕೊಂಡಿದ್ದರು. ಇವರು ಕಾರಿನಲ್ಲಿ ಸುತ್ತಾಡುತ್ತಿರುವ ಫೋಟೋಗಳನ್ನು ಪಾಪರಾಜಿಗಳು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

TV9kannada Web Team

| Edited By: Rajesh Duggumane

Jan 07, 2022 | 7:32 PM

ಕರೀನಾ ಕಪೂರ್ ಹಾಗೂ ಸೈಫ್​ ಅಲಿ ಖಾನ್ (Kareena Kapoor And Saif Ali Khan)​ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಮಾಡುವ ಸಣ್ಣಸಣ್ಣ ವಿಚಾರಗಳನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ. ಅನೇಕ ಬಾರಿ ಈ ಜೋಡಿ ಟ್ರೋಲ್​ ಆದ ಉದಾಹರಣೆ ಇದೆ. ಸೈಫ್​ ಅಲಿ ಖಾನ್​ ಅವರನ್ನು ಕರೀನಾ ಮದುವೆ ಆದ ವಿಚಾರ ಒಂದು ವರ್ಗದವರಿಗೆ ಇಷ್ಟವಾಗಿಲ್ಲ. ಈ ಕಾರಣಕ್ಕೆ ಇವರನ್ನು ಟಾರ್ಗೆಟ್​ ಮಾಡಿ ನೆಗೆಟಿವ್​ ಕಮೆಂಟ್​ಗಳು ಹಾಕಲಾಗುತ್ತಿದೆ. ಈಗ ಈ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಮಾಡಿದ ತಪ್ಪೊಂದನ್ನು ಎಲ್ಲರೂ ಎತ್ತಿ ಹೇಳುತ್ತಿದ್ದಾರೆ. ಹಾಗಾದರೆ, ಈ ಜೋಡಿ ಮಾಡಿದ ತಪ್ಪೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸೈಫ್​ ಅಲಿ ಖಾನ್​ ಹಾಗೂ ಕರೀನಾ ಕಪೂರ್​ ಅವರು ಇತ್ತೀಚೆಗೆ ಕಾರಿನಲ್ಲಿ ಕಾಣಿಸಿಕೊಂಡಿದ್ದರು. ಇವರು ಕಾರಿನಲ್ಲಿ ಸುತ್ತಾಡುತ್ತಿರುವ ಫೋಟೋಗಳನ್ನು ಪಾಪರಾಜಿಗಳು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದರಲ್ಲಿ ಕರೀನಾ ಹಾಗೂ ಸೈಫ್​ ಮಾಸ್ಕ್​ ಧರಿಸಿಲ್ಲ. ಇಷ್ಟೇ ಆದರೆ ಎಲ್ಲರೂ ಸುಮ್ಮನೆ ಇರುತ್ತಿದ್ದರೇನೋ. ಏಕೆಂದರೆ, ಕರೀನಾ ಹಾಗೂ ಸೈಫ್​ ಮನೆಯಲ್ಲೂ ಒಟ್ಟಿಗೆ ಇರುತ್ತಾರೆ. ಅದೇ ರೀತಿ ಕಾರಿನಲ್ಲೂ ಇದ್ದಾರೆ. ಈ ಕಾರಣಕ್ಕೆ ಈ ಜೋಡಿ ಮಾಸ್ಕ್​ ಧರಿಸಿಲ್ಲ ಎಂಬ ವಿಚಾರ ಹೆಚ್ಚು ಹೈಲೈಟ್​ ಆಗಿಲ್ಲ. ಆದರೆ, ಇದಕ್ಕಿಂತ ದೊಡ್ಡ ತಪ್ಪು ಎಂದರೆ ಅವರು ಸೀಟ್​ ಬೆಲ್ಟ್​ ಹಾಕಿಲ್ಲ. ಇದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಅಲ್ಲದೆ, ನಾನಾ ರೀತಿಯ ಕಮೆಂಟ್​ ಮಾಡುತ್ತಿದ್ದಾರೆ.

‘ಸೆಲೆಬ್ರಿಟಿಗಳಾಗಿ ಸೀಟ್​ ಬೆಲ್ಟ್​ ಹಾಕದೆ ಇರುವುದು ಎಷ್ಟು ಸರಿ? ಮಾದರಿ ಆಗಿರಬೇಕಿರುವ ನೀವೇ ಈ ರೀತಿ ಮಾಡಿದರೆ ಹೇಗೆ ಎನ್ನುವ’ ಪ್ರಶ್ನೆಯನ್ನು ಕೆಲವರು ಕೇಳಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಇನ್ನೂ ಕೆಲವರು, ‘ಈ ಸೆಲೆಬ್ರಿಟಿ ಜೋಡಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಕೆಲವರು ಮುಂಬೈ ಟ್ರಾಫಿಕ್​ ಪೊಲೀಸರ ಬಳಿ ಆಗ್ರಹಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ನಟಿ ಕರೀನಾ ಕಪೂರ್​ ಖಾನ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅನೇಕ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಅವರಿಗೆ ಕೊವಿಡ್​ ಪಾಸಿಟಿವ್​ ಆಗಿತ್ತು. ಆ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕಪಟ್ಟುಕೊಂಡಿದ್ದರು. ಅದೃಷ್ಟವಶಾತ್​ ಕರೀನಾಗೆ ಯಾವುದೇ ತೊಂದರೆ ಆಗಲಿಲ್ಲ. ಒಂದಷ್ಟು ದಿನ ಐಸೊಲೇಟ್​ ಆಗಿ ಚಿಕಿತ್ಸೆ ಪಡೆದ ಅವರು ಸಂಪೂರ್ಣ ಗುಣಮುಖರಾದರು. ಅದಾದ ಬೆನ್ನಲ್ಲೇ ಕರೀನಾ ಕಪೂರ್​ ಖಾನ್​ ಅವರ ವರ್ತನೆ ಕಂಡು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.  ಕೊರೊನಾ ನೆಗೆಟಿವ್​ ಆಗುತ್ತಿದ್ದಂತೆಯೇ ಅವರು ಪಾರ್ಟಿ ಮಾಡಲು ಆರಂಭಿಸಿದ್ದರು.

ಇದನ್ನೂ ಓದಿ: ಕೊರೊನಾ ನೆಗೆಟಿವ್​ ಆಗುತ್ತಿದ್ದಂತೆಯೇ ಪಾರ್ಟಿ ಶುರು ಮಾಡಿಕೊಂಡ ಕರೀನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

Follow us on

Related Stories

Most Read Stories

Click on your DTH Provider to Add TV9 Kannada