ಕೊರೊನಾ ನೆಗೆಟಿವ್​ ಆಗುತ್ತಿದ್ದಂತೆಯೇ ಪಾರ್ಟಿ ಶುರು ಮಾಡಿಕೊಂಡ ಕರೀನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

ಕೊರೊನಾ ನೆಗೆಟಿವ್​ ಆಗುತ್ತಿದ್ದಂತೆಯೇ ಪಾರ್ಟಿ ಶುರು ಮಾಡಿಕೊಂಡ ಕರೀನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​
ಅಮೃತಾ ಅರೋರಾ, ಕರೀನಾ ಕಪೂರ್

Kareena Kapoor Khan: ಕರೀಷ್ಮಾ ಕಪೂರ್​ ಮನೆಯಲ್ಲಿ ಪಾರ್ಟಿ ನಡೆದಿದೆ. ಅರ್ಜುನ್​ ಕಪೂರ್​, ಮಲೈಕಾ ಅರೋರಾ, ಸೈಫ್​ ಅಲಿ ಖಾನ್​, ಕರೀನಾ ಕಪೂರ್​ ಖಾನ್​, ಅಮೃತಾ ಅರೋರಾ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ.

TV9kannada Web Team

| Edited By: Madan Kumar

Dec 29, 2021 | 8:03 AM

ಕೆಲವೇ ದಿನಗಳ ಹಿಂದೆ ನಟಿ ಕರೀನಾ ಕಪೂರ್​ ಖಾನ್ (Kareena Kapoor Khan)​ ಅವರಿಗೆ ಕೊರೊನಾ (Covid 19) ಸೋಂಕು ತಗುಲಿತ್ತು. ಅನೇಕ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಅವರಿಗೆ ಕೊವಿಡ್​ ಪಾಸಿಟಿವ್​ ಆಗಿತ್ತು. ಆ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕಪಟ್ಟುಕೊಂಡಿದ್ದರು. ಅದೃಷ್ಟವಶಾತ್​ ಕರೀನಾಗೆ ಯಾವುದೇ ತೊಂದರೆ ಆಗಲಿಲ್ಲ. ಒಂದಷ್ಟು ದಿನ ಐಸೊಲೇಟ್​ ಆಗಿ ಚಿಕಿತ್ಸೆ ಪಡೆದ ಅವರು ಸಂಪೂರ್ಣ ಗುಣಮುಖರಾದರು. ಆದರೆ ಈಗ ಕರೀನಾ ಕಪೂರ್​ ಖಾನ್​ ಅವರ ವರ್ತನೆ ಕಂಡು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕರೀನಾ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾರೆ. ಕೊರೊನಾ ನೆಗೆಟಿವ್​ ಆಗುತ್ತಿದ್ದಂತೆಯೇ ಅವರು ಪಾರ್ಟಿ ಮಾಡಲು ಆರಂಭಿಸಿದ್ದಾರೆ. ಇದಕ್ಕೆ ಎಲ್ಲರಿಂದ ಟೀಕೆ ವ್ಯಕ್ತವಾಗುತ್ತಿದೆ.

ವಿಶ್ವಾದ್ಯಂತ ಒಮಿಕ್ರಾನ್​ ಹಾವಳಿ ಹೆಚ್ಚುತ್ತಿದೆ. ಭಾರತದಲ್ಲೂ ಈ ಪ್ರಕರಣಗಳ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅನೇಕ ಕಡೆಗಳಲ್ಲಿ ಕಠಿಣ ನಿಯಮ ಜಾರಿ ಮಾಡಲಾಗುತ್ತಿದೆ. ನೈಟ್​ ಕರ್ಫ್ಯೂ ಆರಂಭ ಆಗಿದೆ. ಇಂಥ ಸಂದರ್ಭದಲ್ಲಿ ಎಲ್ಲರೂ ಹೆಚ್ಚು ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ. ಆದರೆ ಕರೀನಾ ಕಪೂರ್​ ಅವರು ಮುಲಾಜಿಲ್ಲದೇ ಪಾರ್ಟಿ ಮಾಡುತ್ತಿರುವುದು ನೆಟ್ಟಿಗರ ಟೀಕೆಗೆ ಕಾರಣ ಆಗಿದೆ.

ಕರೀನಾ ಕಪೂರ್​ ಖಾನ್​ ಜೊತೆಗೆ ನಟಿ ಅಮೃತಾ ಅರೋರಾ ಅವರಿಗೂ ಕೊರೊನಾ ಪಾಸಿಟಿವ್​ ಆಗಿತ್ತು. ಅದಕ್ಕೂ ಮುನ್ನ ನಡೆದ ಪಾರ್ಟಿಯಲ್ಲಿ ಅವರು ಸಹ ಕರೀನಾ ಜೊತೆ ಇದ್ದರು. ಈಗ ಅಮೃತಾ ಕೂಡ ಪಾರ್ಟಿಯಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಅವರನ್ನು ಸಹ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಕರೀಷ್ಮಾ ಕಪೂರ್​ ಮನೆಯಲ್ಲಿ ಪಾರ್ಟಿ ನಡೆದಿದೆ. ಅರ್ಜುನ್​ ಕಪೂರ್​, ಮಲೈಕಾ ಅರೋರಾ, ಸೈಫ್​ ಅಲಿ ಖಾನ್​ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ. ಪಾರ್ಟಿಯ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದ ಕರೀನಾ ಅವರು, ‘ನಾವು ಮತ್ತೆ ಬಂದಿದ್ದೇವೆ’ ಎಂದು ಕ್ಯಾಪ್ಷನ್​ ನೀಡಿದ್ದರು. ಬೇರೆ ಬೇರೆ ಖಾತೆಗಳಲ್ಲಿ ಆ ಫೋಟೋ ವೈರಲ್​ ಆಗಿದೆ. ಅದಕ್ಕೆ ಜನರು ಕಟುವಾಗಿ ಕಮೆಂಟ್​ ಮಾಡಿದ್ದಾರೆ.

‘ಮತ್ತೆ ಪಾರ್ಟಿ ಶುರು ಮಾಡಿಕೊಂಡ್ರಾ? ನಿಮಗೆ ಇಂಥ ಪಾರ್ಟಿಯಿಂದಲೇ ಕೊರೊನಾ ಬಂದಿದ್ದು. ಎರಡು ಮಕ್ಕಳ ತಾಯಿ ಆದ್ರೂ ನಿಮ್ಮ ಹುಡುಗಾಟ ಕಮ್ಮಿ ಆಗಿಲ್ಲ. ಕೊರೊನಾ ನೆಗೆಟಿವ್​ ಆಗುತ್ತಿದ್ದಂತೆಯೇ ಪಾರ್ಟಿ ಮಾಡಿರುವುದು ನಿಜಕ್ಕೂ ಬೇಜವಾಬ್ದಾರಿಯುತ ಕೆಲಸ. ಇವರಿಗೆ ನಾಚಿಕೆ ಆಗಬೇಕು’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಕರೀನಾ ಕಪೂರ್​ ಖಾನ್​ ನಟಿಸಿರುವ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಆ ಚಿತ್ರಕ್ಕೆ ಆಮಿರ್​ ಖಾನ್​ ಹೀರೋ.

ಇದನ್ನೂ ಓದಿ:

ಕತ್ರಿನಾ ಕೈಫ್​ಗೆ ವಿಶ್​ ಮಾಡಿ ಟ್ರೋಲ್​ ಆದ ಕರೀನಾ ಕಪೂರ್​; ಇದಕ್ಕಿದೆ ರಣಬೀರ್​ ಲಿಂಕ್​

6ನೇ ಕ್ಲಾಸ್​ ಪರೀಕ್ಷೆಯಲ್ಲಿ ಸೈಫ್​-ಕರೀನಾ ಪುತ್ರನ ಬಗ್ಗೆ ಪ್ರಶ್ನೆ! ಇಲ್ಲಿದೆ ಪ್ರಶ್ನೆ ಪತ್ರಿಕೆಯ ವೈರಲ್​ ಫೋಟೋ

Follow us on

Related Stories

Most Read Stories

Click on your DTH Provider to Add TV9 Kannada