ಜಹೀರ್ ಇಕ್ಬಾಲ್​ ಜತೆ ಸೋನಾಕ್ಷಿ ಸಿನ್ಹಾ ಡೇಟಿಂಗ್? ವೈರಲ್​ ಆಗುತ್ತಿದೆ ಫೋಟೋ

ಜಹೀರ್ ಇಕ್ಬಾಲ್​ ಜತೆ ಸೋನಾಕ್ಷಿ ಸಿನ್ಹಾ ಡೇಟಿಂಗ್? ವೈರಲ್​ ಆಗುತ್ತಿದೆ ಫೋಟೋ
ಸೋನಾಕ್ಷಿ-

ಸೋನಾಕ್ಷಿ ಸಿನ್ಹಾ ಸದ್ಯ, ‘ಡಬಲ್​ ಎಕ್ಸ್​​ಎಲ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸೋನಾಕ್ಷಿ ನಾಯಕಿ ಆದರೆ, ಜಹೀರ್​ ಹೀರೋ. ಇಬ್ಬರ ನಡುವೆ ಏನೋ ನಡೆಯುತ್ತೊದೆ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

TV9kannada Web Team

| Edited By: Rajesh Duggumane

Dec 28, 2021 | 3:56 PM

ಬಾಲಿವುಡ್​ನಲ್ಲಿ ಸೋನಾಕ್ಷಿ ಸಿನ್ಹಾ (Sonakshi Sinha) ಬೇಡಿಕೆ ಕಳೆದುಕೊಂಡಿದ್ದಾರೆ. ಅವರಿಗೆ ಈಗ ಮೊದಲಿನಷ್ಟು ಬೇಡಿಕೆ ಉಳಿದಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಬೇಸರವಿದೆ. ಸ್ಟಾರ್​ ಕಿಡ್​ ಆದ ಹೊರತಾಗಿಯೂ ಸೋನಾಕ್ಷಿಗೆ ಆಫರ್​ಗಳು ಬರುತ್ತಿಲ್ಲ. ಈಗ ಸೋನಾಕ್ಷಿ ಅವರು ಪ್ರೀತಿ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಜಹೀರ್ ಇಕ್ಬಾಲ್ ಜತೆ ಅವರು ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಿರುವಾಗಲೇ ಸೋನಾಕ್ಷಿ ಹಾಗೂ ಜಹೀರ್​ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಸಾಕಷ್ಟು ವೈರಲ್​ ಆಗುತ್ತಿದೆ.

ಸೋನಾಕ್ಷಿ ಸಿನ್ಹಾ ಸದ್ಯ, ‘ಡಬಲ್​ ಎಕ್ಸ್​​ಎಲ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸೋನಾಕ್ಷಿ ನಾಯಕಿ ಆದರೆ, ಜಹೀರ್​ ಹೀರೋ. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಇದನ್ನು ಸೋನಾಕ್ಷಿ ಬಹಿರಂಗಪಡಿಸಿಲ್ಲ. ಸೋನಾಕ್ಷಿ ಹಾಗೂ ಜಹೀರ್​ ಒಟ್ಟಾಗಿ ನಿಂತಿದ್ದಾರೆ. ಈ ಫೋಟೋವನ್ನು ಸೋನಾಕ್ಷಿ ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಅಭಿಮಾನಿ ವಲಯದಲ್ಲೂ ಸಾಕಷ್ಟು ವೈರಲ್​ ಆಗುತ್ತಿದೆ. ಈ ಜೋಡಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇತ್ತೀಚೆಗೆ ಜಹೀರ್​ ಜನ್ಮದಿನ ಆಚರಿಸಿಕೊಂಡಿದ್ದರು. ಈ ವೇಳೆ ಸೋನಾಕ್ಷಿ ಉದ್ದನೆಯ ಸಾಲುಗಳನ್ನು ಬರೆದು ಬರ್ತ್​ಡೇ ವಿಶ್​ ಮಾಡಿದ್ದರು. ಅಲ್ಲದೆ, ಬೆಸ್ಟ್​ ಫ್ರೆಂಡ್​ ಎನ್ನುವ ವಿಚಾರವನ್ನು ಒತ್ತಿ ಹೇಳಿದ್ದರು. ಇದಕ್ಕೆ ಕಮೆಂಟ್​ ಮಾಡಿದ್ದ ಜಹೀರ್, ‘ನಿಮ್ಮನ್ನು ನನ್ನ ನಾಯಕಿ ಎಂದು ಅಧಿಕೃತವಾಗಿ ಕರೆಯಬಹುದೇ’ ಎಂದಿದ್ದರು.

ನಟ ಶತ್ರುಘ್ನ ಸಿನ್ಹಾ ಹಾಗೂ ಪೂನಮ್​ ಸಿನ್ಹಾ ಮಗಳು ಸೋನಾಕ್ಷಿ. ಸಲ್ಮಾನ್​ ಖಾನ್​ ನಟನೆಯ ‘ದಬಾಂಗ್’​ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರಿಗೆ ಸಾಲುಸಾಲು ಚಿತ್ರಗಳು ಸಿಕ್ಕವು. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಫ್ಲಾಪ್​ ಆಗುತ್ತಿವೆ. ಹೀಗಾಗಿ, ನಿರ್ಮಾಪಕರು ಅವರ ಮನೆಯ ಕದ ತಟ್ಟುತ್ತಿಲ್ಲ. ಇತ್ತೀಚೆಗೆ ತೆರೆಕಂಡ ಅವರ ನಟನೆಯ, ‘ಭುಜ್​: ದಿ ಪ್ರೈಡ್​ ಆಫ್​ ಇಂಡಿಯಾ’ ಸಿನಿಮಾ ವಿಮರ್ಶೆಯಲ್ಲಿ ಸೋತಿದೆ. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಾಲುಸಾಲು ಸಿನಿಮಾಗಳು ಫ್ಲಾಪ್​ ಆಗುತ್ತಿರುವುದಕ್ಕೆ ವೃತ್ತಿ ಜೀವನಕ್ಕೆ ಹಿನ್ನಡೆ ಆಗುತ್ತಿದೆ.

ಇದನ್ನೂ ಓದಿ: Samantha: ಗರ್ಲ್ಸ್​ ಗ್ಯಾಂಗ್​ ಜತೆ ಸಮಂತಾ ಗೋವಾ ಟ್ರಿಪ್​; ವೈರಲ್​ ಆಯ್ತು ಫೋಟೋ

‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?

Follow us on

Related Stories

Most Read Stories

Click on your DTH Provider to Add TV9 Kannada