Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಗರ್ಲ್ಸ್​ ಗ್ಯಾಂಗ್​ ಜತೆ ಸಮಂತಾ ಗೋವಾ ಟ್ರಿಪ್​; ವೈರಲ್​ ಆಯ್ತು ಫೋಟೋ

ವಿಚ್ಛೇದನದ ನಂತರ ಸಮಂತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಾಗೂ ಸಿನಿಮಾ ರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹೊಸಹೊಸ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ.

Samantha: ಗರ್ಲ್ಸ್​ ಗ್ಯಾಂಗ್​ ಜತೆ ಸಮಂತಾ ಗೋವಾ ಟ್ರಿಪ್​; ವೈರಲ್​ ಆಯ್ತು ಫೋಟೋ
ಸಮಂತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 27, 2021 | 6:50 PM

ವರ್ಷಾಂತ್ಯ ಸಮೀಪಿಸುತ್ತಿದೆ. 2021 ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿ ಇವೆ. ಇದನ್ನು ವಿಶೇಷವಾಗಿ ಆಚರಿಸಲು ಸೆಲೆಬ್ರಿಟಿಗಳು ಟ್ರಿಪ್​ ಹೋಗುತ್ತಿದ್ದಾರೆ. ಕೊವಿಡ್​ ಹೆಚ್ಚುತ್ತಿರುವ ಭಯ ಎಲ್ಲರಲ್ಲೂ ಕಾಡುತ್ತಿದೆ. ಈ ಕಾರಣಕ್ಕೆ ಅನೇಕ ಸೆಲೆಬ್ರೆಟಿಗಳು ವಿದೇಶಕ್ಕೆ ತೆರಳದೆ, ಭಾರತದಲ್ಲೇ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಈಗ ನಟಿ ಸಮಂತಾ ಕೂಡ ನ್ಯೂ ಇಯರ್​ ಆಚರಣೆಗೆ ಗೋವಾಗೆ ತೆರಳಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸಮಂತಾ ಈ ಫೋಟೋದಲ್ಲಿ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.

ವಿಚ್ಛೇದನದ ನಂತರ ಸಮಂತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಾಗೂ ಸಿನಿಮಾ ರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹೊಸಹೊಸ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಇನ್ನು, ಸೋಶಿಯಲ್​ ಮೀಡಿಯಾದಲ್ಲಿ ಅವರು ವಿವಿಧ ರೀತಿಯ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಸ್ಟೇಟಸ್​ನಲ್ಲಿ ಹಲವು ಅರ್ಥ ನೀಡುವ ಸ್ಟೇಟಸ್​ಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಈಗ ಅವರು ಗೋವಾ ಟ್ರಿಪ್​ನ ಫೋಟೋ ಹಂಚಿಕೊಂಡಿದ್ದಾರೆ.

ಡಿಸೈನರ್​ ಶಿಲ್ಪಾ ರೆಡ್ಡಿ ಹಾಗೂ ವಕೀಲೆ ವಾಸು ಪೂಂಜ್​ ಜತೆ ಸಮಂತಾ  ವರ್ಷಾಂತ್ಯ ಆಚರಣೆ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಗೋವಾ ಟ್ರಿಪ್​ ತೆರಳಿದ್ದಾರೆ. ಗೋವಾದಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಕಡಲ ತೀರಗಳ ಜತೆಗೆ ಕೆಲವು ಜಲಪಾತಗಳು ಇಲ್ಲಿಯ ಆಕರ್ಷಣೆಯ ಕೇಂದ್ರಬಿಂದು. ಸಮಂತಾ ಅವರು ಹಂಚಿಕೊಂಡ ಫೋಟೋದಲ್ಲಿ ಚಿಕ್ಕದಾದ ಜಲಪಾತ ಇದೆ.

ಸಮಂತಾ ಅವರು ಈ ಫೋಟೋದಲ್ಲಿ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ರೆಡ್ಡಿ ಅವರು ಬಿಕಿನಿ ತೊಟ್ಟು ಮಿಂಚಿದ್ದಾರೆ. ಈ ಫೋಟೋಗೆ ಲಕ್ಷಾಂತರ ಮಂದಿ ಲೈಕ್​ ಮಾಡಿದ್ದಾರೆ.

ಜ್ಯೂ.ಎನ್​ಟಿಆರ್​ಗೆ ಜತೆಯಾಗಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಸದ್ಯ, ಜ್ಯೂ.ಎನ್​ಟಿಆರ್​ ‘ಆರ್​ಆರ್​ಆರ್​’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಜನವರಿ 7ರಂದು ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾ ತೆರೆ ಕಂಡ ನಂತರದಲ್ಲಿ ಅವರು ಕೊರಟಾಲ ಶಿವ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಮಂತಾ ಅವರನ್ನು ನಾಯಕಿ ಮಾಡಿಕೊಳ್ಳಬೇಕು ಎನ್ನುವ ಆಲೋಚನೆ ನಿರ್ಮಾಪಕರು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜತೆ ಸಮಂತಾ ಮತ್ತೊಂದು ವೆಬ್​ ಸೀರಿಸ್​; ಆ್ಯಕ್ಷನ್​ನಲ್ಲಿ ಮಿಂಚಲಿದ್ದಾರೆ ಸ್ಯಾಮ್

ಮತ್ತೊಂದು ಸ್ಟಾರ್​ ನಟನಿಗೆ ಜತೆಯಾದ ಸಮಂತಾ; ಇವರನ್ನು ತಡೆಯೋರೆ ಇಲ್ಲ ಎಂದ ಅಭಿಮಾನಿಗಳು

ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ