‘ಬಂದ್​ ಬಗ್ಗೆ ಮಾತನಾಡಲ್ಲ ಆದರೆ, ಈ ಹೋರಾಟಕ್ಕೆ ನನ್ನ ಬೆಂಬಲ ಇದೆ’; ಸುಮಲತಾ

‘ಬಂದ್​ ಬಗ್ಗೆ ಮಾತನಾಡಲ್ಲ ಆದರೆ, ಈ ಹೋರಾಟಕ್ಕೆ ನನ್ನ ಬೆಂಬಲ ಇದೆ’; ಸುಮಲತಾ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 27, 2021 | 7:23 PM

ಕನ್ನಡ ಚಿತ್ರರಂಗದ ಕಡೆಯಿಂದ ಈ ಬಂದ್​ಗೆ ನೈತಿಕ ಬೆಂಬಲ ಮಾತ್ರ ನೀಡಲಾಗುತ್ತಿದೆ. ಈ ವಿಚಾರದ ಬಗ್ಗೆ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್​​ ಮಾತನಾಡಿದ್ದಾರೆ.

ಕನ್ನಡದ ಬಾವುಟಕ್ಕೆ ಅವಮಾನ, ಎಂಇಎಸ್​ ಪುಂಡಾಟಿಕೆ ಖಂಡಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್​​ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸುತ್ತಿವೆ. ಕನ್ನಡ ಚಿತ್ರರಂಗದ ಕಡೆಯಿಂದ ಈ ಬಂದ್​ಗೆ ನೈತಿಕ ಬೆಂಬಲ ಮಾತ್ರ ನೀಡಲಾಗುತ್ತಿದೆ. ಈ ವಿಚಾರದ ಬಗ್ಗೆ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್​​ ಮಾತನಾಡಿದ್ದಾರೆ. ‘ಬಂದ್​ನಿಂದ ನಷ್ಟ ಆಗುತ್ತದೆ. ಈ ಬಂದ್​ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗೋದಾದರೆ ನಾನು ಖಂಡಿತವಾಗಿಯೂ ಬೆಂಬಲ ನೀಡುತ್ತೇನೆ. ಆದರೆ, ಇದರಿಂದ ಸಾಕಷ್ಟು ನಷ್ಟ ಉಂಟಾಗುತ್ತದೆ. ಕೇವಲ ಸಿನಿಮಾ ರಂಗ ಎಂದು ನಾನು ಹೇಳುತ್ತಿಲ್ಲ. ಡಿಸೆಂಬರ್​ 31ರಂದು ಸಾಕಷ್ಟು ಅಂಗಡಿಗಳಿಗೆ ಹೆಚ್ಚು ವ್ಯಾಪಾರ ಆಗುತ್ತದೆ. ಆದರೆ ಬಂದ್​ ಮಾಡಿದರೆ ಇದರಿಂದ ಅವರಿಗೆ ನಷ್ಟ ಉಂಟಾಗುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಮಹಿಳೆ ಹುಟ್ಟಿನಿಂದಲೇ ಸಾಧಕಿ, ಕುಟುಂಬದ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಚಿಂತನೆ ಮಾಡುತ್ತಾಳೆ; ಸುಮಲತಾ ಅಂಬರೀಶ್