ಮಹಿಳೆ ಹುಟ್ಟಿನಿಂದಲೇ ಸಾಧಕಿ, ಕುಟುಂಬದ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಚಿಂತನೆ ಮಾಡುತ್ತಾಳೆ; ಸುಮಲತಾ ಅಂಬರೀಶ್

ಮಹಿಳೆ ಹುಟ್ಟಿನಿಂದಲೇ ಸಾಧಕಿ, ಕುಟುಂಬದ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಚಿಂತನೆ ಮಾಡುತ್ತಾಳೆ; ಸುಮಲತಾ ಅಂಬರೀಶ್
ಸಾಧಕಿಯರ ಜೀವನ ಚರಿತ್ರೆ ಪುಸ್ತಕವನ್ನು ಸುಮಲತಾ ಅಂಬರೀಶ್ ಲೋಕರ್ಪಣೆ ಮಾಡಿದರು

ಪ್ರಶಸ್ತಿ ಪ್ರದಾನ ಸಮಾರಂಭ ಪ್ರಮುಖ ಸಾಧಕರನ್ನು ಗುರುತಿಸಿ, ಯಾವುದೇ ಪಕ್ಷಪಾತವಿಲ್ಲದೆ ಸಮಾಜದ ಎಲ್ಲಾ ಕ್ಷೇತ್ರಗಳಿಂದ ಮಹಿಳೆಯನ್ನು ಮುಂಚೂಣಿಗೆ ತರುವ ಪ್ರಯತ್ನವನ್ನು ಮಾಡಿದೆ.

TV9kannada Web Team

| Edited By: sandhya thejappa

Dec 27, 2021 | 11:11 AM

ಬೆಂಗಳೂರು: ಕರ್ನಾಟಕ ಮಹಿಳಾ ಅಚೀವರ್ಸ್ ಅವಾರ್ಡ್ಸ್ 2021ನೇ (Karnataka Women Achievers Awards) ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಮಹಿಳಾ ಸಾಧಕಿಯರಿಗೆ ಪೀಣ್ಯಾ ಬಳಿಯ ತಾಜ್ – ವಿವಂತಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಂಸದೆ ಸುಮಲತಾ ಅಂಬರೀಶ್ ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಪ್ರಶಸ್ತಿ ಪ್ರದಾನ ಸಮಾರಂಭ ಪ್ರಮುಖ ಸಾಧಕರನ್ನು ಗುರುತಿಸಿ, ಯಾವುದೇ ಪಕ್ಷಪಾತವಿಲ್ಲದೆ ಸಮಾಜದ ಎಲ್ಲಾ ಕ್ಷೇತ್ರಗಳಿಂದ ಮಹಿಳೆಯನ್ನು ಮುಂಚೂಣಿಗೆ ತರುವ ಪ್ರಯತ್ನವನ್ನು ಮಾಡಿದೆ. ಇದರ ಏಕೈಕ ಉದ್ದೇಶವೆಂದರೆ ರಾಜ್ಯಾದ್ಯಂತ ಮಹಿಳೆಯರ ಸಬಲೀಕರಣ ಮತ್ತು ಅವರ ಸಾಧನೆಯನ್ನು ಗುರುತಿಸುವುದು. 18 ವರ್ಷ ಮೇಲ್ಪಟ್ಟವರು ಉಲ್ಲೇಖಿಸಲಾದ ವರ್ಗಗಳಲ್ಲಿ ನಾಮನಿರ್ದೇಶನ ಮಾಡಿರುತ್ತಾರೆ. ಕರ್ನಾಟಕದ ಜನರು ವೈಯಕ್ತಿಕವಾಗಿ ತಿಳಿದಿರುವ ಮಹಿಳಾ ಸಾಧಕರನ್ನು ನಾಮನಿರ್ದೇಶನ ಮಾಡಬಹುದು.

ವಯಸ್ಸು, ವರ್ಗ, ಜಾತಿ ಅಥವಾ ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬ ಮಹಿಳೆಯನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿ ಸಮಾರಂಭದ ಏಕೈಕ ಗುರಿಯಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಮಹಿಳೆಯರು ಹುಟ್ಟಿನಿಂದಲೆ ಸಾಧಕಿಯರು. ಮಹಿಳೆ ಇಂದು ಅಬಲೆ ಅಲ್ಲ. ಮಹಿಳೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪುರುಷರಷ್ಟೆ ಸಮಾನ ಎಂದು ನಿರೂಪಿಸಿದ್ದಾಳೆ. ಸಮಾಜದಲ್ಲಿ ಹೆಣ್ಣು ತಾಯಿ, ತಂಗಿ, ಅಕ್ಕ, ಹೆಂಡತಿಯಾಗಿ ಕುಟುಂಬದ ಜವಾಬ್ದಾರಿ ಜೊತೆಯಲ್ಲಿ ಸಮಾಜದ ಚಿಂತನೆ ಮಾಡುತ್ತಾಳೆ ಅಂತ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕೆಡಬ್ಲೂಎಎ (KWAA) ನ ಸಂಸ್ಥಾಪಕ ನಿರ್ದೇಶಕರಾದ ನಟಿ ಸ್ಪೂರ್ತಿ ವಿಶ್ವಾಸ್ ಮಾತನಾಡಿ, ಈ ದಿನಕ್ಕಾಗಿ ನಾನು ಕಾಯುತ್ತಿರುತ್ತೇನೆ. ಪ್ರತಿ ವರ್ಷ ಕೆಡಬ್ಲೂಎಎ ಹಿಂದೆ ಬಹಳಷ್ಟು ಪ್ರಯತ್ನಗಳು ನಡೆಯುತ್ತವೆ. ವಿಜೇತರ ಮುಖದಲ್ಲಿ ಕಾಣುವ ಸಂತೋಷಕ್ಕೆ ನಾವು ಸಾಕ್ಷಿಯಾಗಲು ಕಾಯುತ್ತೇವೆ ಅಂತ ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ 20 ಮಹಿಳಾ ಸಾಧಕಿಯರ ಜೀವನ ಚರಿತ್ರೆ ಪುಸ್ತಕವನ್ನು ಸುಮಲತಾ ಅಂಬರೀಶ್ ಲೋಕರ್ಪಣೆ ಮಾಡಿದರು ಮಾಡಿದರು.

ಕಾರ್ಯಕ್ರಮದಲ್ಲಿ ಸುಮಲತಾಗೆ ಸನ್ಮಾನಿಸಿ, ಗೌರವಿಸಲಾಗಿದೆ

ಇದನ್ನೂ ಓದಿ

Cheteshwar Pujara: ಸೊನ್ನೆಗೆ ಔಟಾಗಿ ಪೆವಿಲಿಯನ್​ಗೆ ಬಂದ ಪೂಜಾರಗೆ ದ್ರಾವಿಡ್ ಮಾಡಿದ್ದೇನು ನೋಡಿ

Merry Christmas: ರಾಮಕೃಷ್ಣಮಿಷನ್‌ನ ಸನ್ಯಾಸಿಗಳಿಂದ ಕ್ರಿಸ್‌ಮಸ್‌ ಆಚರಣೆ

Follow us on

Related Stories

Most Read Stories

Click on your DTH Provider to Add TV9 Kannada