Cheteshwar Pujara: ಸೊನ್ನೆಗೆ ಔಟಾಗಿ ಪೆವಿಲಿಯನ್​ಗೆ ಬಂದ ಪೂಜಾರಗೆ ದ್ರಾವಿಡ್ ಮಾಡಿದ್ದೇನು ನೋಡಿ

India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನ ಮೊದಲ ದಿನವೇ ಚೇತೇಶ್ವರ್ ಪೂಜಾರ ಪೂಜಾರ ತಾವು ಎದುರಿಸಿದ ಮೊದಲ ಎಸೆತದಲ್ಲೇ ಲುಂಗಿ ಎನ್​ಗಿಡಿ ಬೌಲಿಂಗ್​ನಲ್ಲಿ ಬಲಿಯಾಗಿಹೋದರು. ಫ್ರಂಟ್ ಫೂಟ್ ಡಿಫೆನ್ಸ್ ಆಡಲು ಹೋಗಿ ಪೀಟರ್ಸನ್​ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

Cheteshwar Pujara: ಸೊನ್ನೆಗೆ ಔಟಾಗಿ ಪೆವಿಲಿಯನ್​ಗೆ ಬಂದ ಪೂಜಾರಗೆ ದ್ರಾವಿಡ್ ಮಾಡಿದ್ದೇನು ನೋಡಿ
Cheteshwar Pujara IND vs SA
Follow us
TV9 Web
| Updated By: Vinay Bhat

Updated on: Dec 27, 2021 | 10:43 AM

ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ (India vs South Africa) ತಂಡ ಉತ್ತಮ ಸ್ಥಿತಿಯಲ್ಲಿದೆ. ಚೇತೇಶ್ವರ್ ಪೂಜಾರ (Cheteshwar Pujara) ಶೂನ್ಯಕ್ಕೆ ಔಟ್ ಆಗಿದ್ದು, ವಿರಾಟ್ ಕೊಹ್ಲಿ (Virat Kohli) ಅರ್ಧಶತಕ ಭಾರಿಸದೇ ಪೆವಿಲಿಯನ್ ಸೇರಿಕೊಂಡಿದ್ದು ತಂಡಕ್ಕೆ ಕೊಂಚ ಹಿನ್ನಡೆ ಆಯಿತು. ಇದರ ನಡುವೆ ಕೆಎಲ್ ರಾಹುಲ್ (KL Rahul) ಮನಮೋಹಕ ಶತಕ ಸಿಡಿಸಿ ತಂಡದ ರನ್ ಗತಿಯನ್ನು ಏರಿಸಿದರು. ಆದರೆ, ಮತ್ತೆ ಸೊನ್ನೆ ಸುತ್ತಿದ ಚೇತೇಶ್ವರ್ ಪೂಜಾರ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಲಾಸ್ಟ್ ಚಾನ್ಸ್ ಎಂಬಂತೆ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾದ ಪೂಜಾರ ಮತ್ತದೆ ಹಳೆಯ ತಪ್ಪುಗಳನ್ನು ಮಾಡಿ ತಮ್ಮ ಸ್ಥಾನಕ್ಕೆ ತಾವೇ ಕಂಟಕವಾಗಿ ಪರಿಣಮಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನ ಮೊದಲ ದಿನ ಪೂಜಾರ ತಾವು ಎದುರಿಸಿದ ಮೊದಲ ಎಸೆತದಲ್ಲೇ ಲುಂಗಿ ಎನ್​ಗಿಡಿ ಬೌಲಿಂಗ್​ನಲ್ಲಿ ಬಲಿಯಾಗಿಹೋದರು. ಫ್ರಂಟ್ ಫೂಟ್ ಡಿಫೆನ್ಸ್ ಆಡಲು ಹೋಗಿ ಪೀಟರ್ಸನ್​ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಔಟಾದ ಬಳಿಕ ರೂಮ್​ಗೆ ತೆರಳಿ ಡ್ರೆಸ್ ಬದಲಾಯಸಿದ ನಂತರ ಪೆವಿಲಿಯನ್​ಗೆ ಬಂದ ಪೂಜಾರ ಜಸ್​ಪ್ರೀತ್ ಬುಮ್ರಾ ಮತ್ತು ಪ್ರಿಯಾಂಕ್ ಪಂಚಲ್ ಜೊತೆ ನಿಂತುಕೊಂಡಿದ್ದರು. ಈ ಸಂದರ್ಭ ಅಲ್ಲಿಗೆ ಬಂದ ಕೋಚ್ ರಾಹುಲ್ ದ್ರಾವಿಡ್ ಪೂಜಾರ ಅವರ ಬೆನ್ನಿಗೆ ಬಡಿದು ಮುಂದೆ ಸಾಗಿದರು. ಪೂಜಾರ ಅಲ್ಲೆ ಇದ್ದು ತುಸು ನಗು ಬೀರಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಳೆದ ಕೆಲವ ವರ್ಷಗಳಿಂದ ಪೂಜಾರ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪೂಜಾರ ದಾರುಣವಾಗಿ ವಿಫಲರಾಗಿದ್ದರು. ಕಿವೀಸ್ ವಿರುದ್ಧದ ಮೊದಲ ಟೆಸ್ಟ್‍ನ ಮೊದಲ ಇನ್ನಿಂಗ್ಸ್‍ನಲ್ಲಿ 26 ರನ್ ಗಳಿಸಿದ್ದ ಪೂಜಾರ ಎರಡನೇ ಇನ್ನಿಂಗ್ಸ್‍ನಲ್ಲಿ 22 ರನ್ ಗಳಿಸಿ ಔಟಾದರು. ಇನ್ನು ಎರಡನೇ ಟೆಸ್ಟ್ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಮುಂದುವರೆಸಿದ್ದರು. ಹೀಗಾಗಿ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಪೂಜಾರಾಗೆ ಕೋಕ್ ನೀಡುವುದೇ ಉತ್ತಮ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೇ ಅವರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಆಗುವುದೇ ಅನುಮಾನವಾಗಿತ್ತು. ಆದ್ರೂ ಲಾಸ್ಟ್ ಚಾನ್ಸ್ ಎಂಬಂತೆ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿ ಅವರಿಗೆ ಮಣೆ ಹಾಕಿತ್ತು. ಆದರೀಗ ದಕ್ಷಿಣ ಆಫ್ರಿಕಾದಲ್ಲೂ ಪೂಜಾರ ಮಂಕಾಗಿದ್ದಾರೆ.

ಸೆಂಚೂರಿಯನ್​ನ ಸೂಪರ್ ಸ್ಪೋರ್ಟ್ ಪಾರ್ಕ್​ನಲ್ಲಿ ಆರಂಭವಾಗಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯ ಮೊದಲ ದಿನವೇ ರೋಚಕತೆಯಿಂದ ಕೂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಕೆ ಎಲ್ ರಾಹುಲ್ ಏಳನೇ ಟೆಸ್ಟ್ ಶತಕ ಭಾರತದ ಇನ್ನಿಂಗ್ಸ್ ಅನ್ನು ಕಳೆಗಟ್ಟಿಸಿತು. ಮಯಂಕ್ ಅಗರ್ವಾಲ್ ಮತ್ತು ಅವರು ಮೊದಲ ವಿಕೆಟ್​ಗೆ ಆಡಿದ ಜೊತೆಯಾಟ, ಈ ಕನ್ನಡಿಗರ ಜುಗಲ್​ಬಂದಿ ಮನಮೋಹಕವಾಗಿತ್ತು.

ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 272 ರನ್ ಕಲೆಹಾಕಿದ್ದು, ದೊಡ್ಡ ಮೊತ್ತದ ಮುನ್ಸೂಚನೆ ನೀಡಿದೆ. ಇತ್ತೀಚಿನ ಕೆಲ ಪಂದ್ಯಗಳಿಂದ ರನ್ ಗಳಿಸಲು ಪರದಾಡುತ್ತಿದ್ದ ರಹಾನೆ ತಮ್ಮ ಮಾಮೂಲಿಯ ಒಳ್ಳೆಯ ಲಯಕ್ಕೆ ಮರಳಿದ್ದಾರೆ. 81 ಎಸೆತಗಳನ್ನು ಎದುರಿಸಿದ ರಹಾನೆ 8 ಬೌಂಡರಿಗಳ ನೆರವಿನಿಂದ 40 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಾಹುಲ್ 248 ಎಸೆತಗಳನ್ನು ಎದುರಿಸಿ 122 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಇವರ ಬ್ಯಾಟ್​ನಿಂದ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

Bipul Sharma: ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಸನ್​ರೈಸರ್ಸ್​ ಹೈದರಾಬಾದ್ ತಂಡದ ಆಟಗಾರ

Mayank Agarwal: ರಾಹುಲ್ ಜೊತೆಗೆ ಶತಕದ ಜೊತೆಯಾಟ: ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ಮಯಾಂಕ್ ಅಗರ್ವಾಲ್

(SA vs IND Video Goes viral in which Rahul Dravid can be seen patting Cheteshwar Pujara in the back)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ