AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಸೆಂಚುರಿಯನ್‌ನಲ್ಲಿ ಹವಾಮಾನ ವೈಪರೀತ್ಯ; ಎರಡನೇ ದಿನದಾಟದ ರೋಚಕತೆಗೆ ಭಂಗ ತಂದ ಮಳೆರಾಯ!

IND vs SA: ಸೆಂಚುರಿಯನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಮೊದಲ ಟೆಸ್ಟ್‌ನ ಎರಡನೇ ದಿನದ ಆಟಕ್ಕೆ ಮಳೆ ಅಡ್ಡಿ ಬರುತ್ತಿದೆ.

IND vs SA: ಸೆಂಚುರಿಯನ್‌ನಲ್ಲಿ ಹವಾಮಾನ ವೈಪರೀತ್ಯ; ಎರಡನೇ ದಿನದಾಟದ ರೋಚಕತೆಗೆ ಭಂಗ ತಂದ ಮಳೆರಾಯ!
ಸೆಂಚುರಿಯನ್ ಮೈದಾನ
Follow us
TV9 Web
| Updated By: ಪೃಥ್ವಿಶಂಕರ

Updated on:Dec 27, 2021 | 1:12 PM

ಸೆಂಚುರಿಯನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಮೊದಲ ಟೆಸ್ಟ್‌ನ ಎರಡನೇ ದಿನದ ಆಟಕ್ಕೆ ಮಳೆ ಅಡ್ಡಿ ಬರುತ್ತಿದೆ.ಮೊದಲ ಟೆಸ್ಟ್​ನ ಮೊದಲ ದಿನ ಭಾರತದ ಪ್ರದರ್ಶನ ಉತ್ತಮವಾಗಿತ್ತು. ಹೀಗಾಗಿ ಎರಡನೇ ದಿನದಲ್ಲೂ ಆ ಆಟವನ್ನು ಮುಂದುವರೆಸಲು ಟೀಂ ಇಂಡಿಯಾ ಎದುರು ನೋಡುತ್ತಿದೆ. ಆದರೆ ಟೀಂ ಇಂಡಿಯಾದ ಈ ಗುರಿಗೆ ಮಳೆರಾಯ ಅಡ್ಡಿ ಪಡಿಸುತ್ತಿದ್ದಾನೆ. ಸೆಂಚುರಿಯನ್ ಟೆಸ್ಟ್‌ನಲ್ಲಿ ಭಾರತ ತನ್ನ ಮೊದಲ ದಿನದ ಅಂತ್ಯಕ್ಕೆ 3 ವಿಕೆಟ್‌ಗೆ 272 ರನ್ ಗಳಿಸಿದೆ. ಕೆಎಲ್ ರಾಹುಲ್ 122 ರನ್ ಗಳಿಸಿ ಅಜೇಯರಾಗುಳಿದಿದ್ದು, ರಹಾನೆ 40 ರನ್ ಗಳಿಸಿ ಆಡುತ್ತಿದ್ದರು.

ಆದರೆ, ಮೊದಲ ದಿನ ಸೆಂಚುರಿಯನ್‌ನಲ್ಲಿ ರಾಹುಲ್ ಬ್ಯಾಟ್‌ನಿಂದ ರನ್‌ಗಳ ಮಳೆ ಕಂಡಿದ್ದೇವು. ಆದರೆ ಈಗ ಎರಡನೇ ದಿನದ ವಾತಾವರಣ ಕೆಟ್ಟದಾಗಿದೆ. ಮೋಡ ಕವಿದ ವಾತಾವರಣ ಎಲ್ಲರಲ್ಲೂ ಆತಂಕ ಮೂಡಿಸಿದೆ. ಸೆಂಚುರಿಯನ್‌ನಿಂದ ಬಿಸಿಸಿಐ ಟ್ವೀಟ್ ಮಾಡಿರುವ ಚಿತ್ರಗಳನ್ನು ನೋಡಿದರೆ ಪಿಚ್​ ಮೇಲೆ ಹೊದಿಕೆ ಹಾಸಿರುವುದು ಕಂಡು ಬರುತ್ತಿದೆ. ಅಂದರೆ ಎರಡನೇ ದಿನದಾಟದ ರೋಚಕತೆಗೆ ಭಂಗ ಬರುವುದು ಖಚಿತ.

ಮಳೆ ಆಗುವ ಮುನ್ಸೂಚನೆ ಇತ್ತು ಸೆಂಚುರಿಯನ್​ನಲ್ಲಿ ಕೆಟ್ಟ ಹವಾಮಾನ ಹೊಸದೇನಲ್ಲ. ಟೆಸ್ಟ್ ಪಂದ್ಯದ ವೇಳೆ ಈಗಾಗಲೇ ಮಳೆಯ ಅಂದಾಜಿತ್ತು. ಮೊದಲ ದಿನವೇ ಮಳೆಯಾಗುತ್ತದೆ ಎಂಬ ಸುದ್ದಿ ಇತ್ತು. ಆದರೆ ಟೆಸ್ಟ್ ಪಂದ್ಯದ ಮೊದಲ ದಿನ ಚೆನ್ನಾಗಿಯೇ ಸಾಗಿತು. ಸಂಪೂರ್ಣ 90 ಓವರ್‌ಗಳನ್ನು ಆಡಲಾಯಿತು. ಆದರೆ ಟೆಸ್ಟ್ ಪಂದ್ಯದ ಎರಡನೇ ದಿನ ಮಳೆಯ ಭವಿಷ್ಯ ಸರಿಯಾಗಿದೆ.

ಸದ್ಯ ಸೆಂಚುರಿಯನ್‌ನಲ್ಲಿ ಮೋಡ ಕವಿದ ವಾತಾವರಣವಿದೆ. ಮೋಡ ತಿಳಿಗೊಂಡ ನಂತರ ಆಟವನ್ನು ಪ್ರಾರಂಭಿಸಬಹುದು. ಅಂದಹಾಗೆ, ಬಿಸಿಸಿಐ ಹಂಚಿಕೊಂಡಿರುವ ಚಿತ್ರವು ಮುಂಜಾನೆಯದ್ದಾಗಿದೆ, ಆದ್ದರಿಂದ ಪಂದ್ಯದ ವೇಳೆಗೆ ಹವಾಮಾನವು ಸ್ಪಷ್ಟವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಸೆಂಚುರಿಯನ್ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಈಗ ಹವಾಮಾನವು ಅಡ್ಡಿಯಾಗದಿದ್ದರೆ, ಸೆಂಚುರಿಯನ್‌ನಲ್ಲಿ ತನ್ನ ಮೊದಲ ಗೆಲುವಿನ ಸ್ಕ್ರಿಪ್ಟ್ ಅನ್ನು ಭಾರತ ಬರೆಯುವುದನ್ನು ಕಾಣಬಹುದು. ಪಂದ್ಯದ ಮೂರು ಮತ್ತು ನಾಲ್ಕನೇ ದಿನಗಳಲ್ಲಿ ಯಾವುದೇ ಮಳೆಯಾಗದ ನಿರೀಕ್ಷೆಯಿದೆ. ಆದರೆ 5ನೇ ದಿನವೂ ಸೆಂಚುರಿಯನ್​ನಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

Published On - 1:04 pm, Mon, 27 December 21

ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
ಕುಮಾರಸ್ವಾಮಿ ಒಬ್ಬ ಹಿಟ್ ಅಂಡ್ ರನ್ ಗಿರಾಕಿ: ಡಿಕೆ ಸುರೇಶ್
ಕುಮಾರಸ್ವಾಮಿ ಒಬ್ಬ ಹಿಟ್ ಅಂಡ್ ರನ್ ಗಿರಾಕಿ: ಡಿಕೆ ಸುರೇಶ್
ಅಲೆಗಳ ಅಬ್ಬರ ಕಂಡು ಮೀನುಗಾರರರೂ ಸಮುದ್ರಕ್ಕಿಳಿಯುತ್ತಿಲ್ಲ
ಅಲೆಗಳ ಅಬ್ಬರ ಕಂಡು ಮೀನುಗಾರರರೂ ಸಮುದ್ರಕ್ಕಿಳಿಯುತ್ತಿಲ್ಲ
ನೆರೆರಾಜ್ಯದ ಆನೆಹಿಂಡನ್ನು ಪಳಗಿಸಲು ಹೊರಟಿವೆ ಕರ್ನಾಟಕದ ಸಲಗಗಳು
ನೆರೆರಾಜ್ಯದ ಆನೆಹಿಂಡನ್ನು ಪಳಗಿಸಲು ಹೊರಟಿವೆ ಕರ್ನಾಟಕದ ಸಲಗಗಳು