AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bipul Sharma: ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಸನ್​ರೈಸರ್ಸ್​ ಹೈದರಾಬಾದ್ ತಂಡದ ಆಟಗಾರ

Bipul Sharma USA: ದೇಶೀಯ ಕ್ರಿಕೆಟ್​ನಲ್ಲಿ ಬಿಪುಲ್ ಶರ್ಮಾ ಪಂಜಾಬ್, ಹಿಮಾಚಲ್ ಪ್ರದೇಶ ಮತ್ತು ಸಿಕ್ಕಿಮ್ ತಂಡವನ್ನು ಪ್ರತಿನಿಧಿಸಿದ್ದರು. ಸದ್ಯ ಯುಎಸ್​ಎನಲ್ಲಿ ಕ್ರಿಕೆಟ್ ಆಡುವ ಸಲುವಾಗಿ ಭಾರತೀಯ ಕ್ರಿಕೆಟ್​ಗೆ (Indian Cricket) ನಿವೃತ್ತಿ ಘೋಷಿಸಿದ್ದಾರೆ.

Bipul Sharma: ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಸನ್​ರೈಸರ್ಸ್​ ಹೈದರಾಬಾದ್ ತಂಡದ ಆಟಗಾರ
Bipul Sharma SRH Player
TV9 Web
| Updated By: Vinay Bhat|

Updated on: Dec 27, 2021 | 9:36 AM

Share

ದೇಶೀಯ ಕ್ರಿಕೆಟ್​ನ ಅತ್ಯಂತ ಹಿರಿಯ ಆಟಗಾರ ಬಿಪುಲ್ ಶರ್ಮಾ (Bipul Sharma) ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಯುಎಸ್​ಎ ಕ್ರಿಕೆಟ್​ಗೆ (USA Cricket) ತೆರಳಲು ನಿರ್ಧರಿಸಿದ್ದಾರೆ. ಇವರು  2016ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಚಾಂಪಿಯನ್ ಪಟ್ಟ ಅಲಂಕರಿಸಿದ ಸನ್​ರೈಸರ್ಸ್​ ಹೈದರಾಬಾದ್ (SRH) ತಂಡದ ಆಟಗಾರನಾಗಿದ್ದರು. ಜೊತೆಗೆ ಪಂಜಾಬ್ ಕಿಂಗ್ಸ್ ತಂಡದ ಪರವೂ ಆಡಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಬಿಪುಲ್ ಶರ್ಮಾ ಪಂಜಾಬ್, ಹಿಮಾಚಲ್ ಪ್ರದೇಶ ಮತ್ತು ಸಿಕ್ಕಿಮ್ ತಂಡವನ್ನು ಪ್ರತಿನಿಧಿಸಿದ್ದರು. ಸದ್ಯ ಯುಎಸ್​ಎನಲ್ಲಿ ಕ್ರಿಕೆಟ್ ಆಡುವ ಸಲುವಾಗಿ ಭಾರತೀಯ ಕ್ರಿಕೆಟ್​ಗೆ (Indian Cricket) ನಿವೃತ್ತಿ ಘೋಷಿಸಿದ್ದಾರೆ. ಬಿಸಿಸಿಐ (BCCI) ನಿಯಮದ ಪ್ರಕಾರ ಭಾರತೀಯ ಕ್ರಿಕೆಟ್ ಆಟಗಾರರು ವಿದೇಶಿ ಲೀಗ್​ನಲ್ಲಿ ಭಾಗವಹಿಸಬೇಕಾದರೆ ಅವರು ಐಪಿಎಲ್ ಮತ್ತು ದೇಶೀಯ ಕ್ರಿಕೆಟ್​ನಿಂದ ಹಿಂದೆ ಸರಿಯಬೇಕು ಎಂಬುದಾಗಿದೆ.

ಐಪಿಎಲ್​ನಲ್ಲಿ 33 ಪಂದ್ಯಗಳನ್ನು ಆಡಿರುವ ಬಿಪುಲ್ 17 ವಿಕೆಟ್ ಕಿತ್ತಿದ್ದಾರೆ. ಐಪಿಎಲ್ 2016ರ ಫೈನಲ್ ಪಂದ್ಯದಲ್ಲಿ ಇವರು ಎಬಿ ಡಿವಿಲಿಯರ್ಸ್ ಅವರ ವಿಕೆಟ್ ಕಿತ್ತು ಮಿಂಚಿದ್ದರು. 2018ರ ಐಪಿಎಲ್ ವರೆಗೂ ಇವರು ಹೈದರಾಬಾದ್ ತಂಡದಲ್ಲೇ ಇದ್ದರು.

ಭಾರತದಲ್ಲಿ ಒಟ್ಟು 59 ಪಂದ್ಯಗಳನ್ನು ಆಡಿರುವ ಬಿಪುಲ್ ಶರ್ಮಾ 126 ವಿಕೆಟ್ ಕಿತ್ತಿದ್ದಾರೆ. 3012 ರನ್ ಬಾರಿಸಿದ್ದಾರೆ. 96 ಲಿಸ್ಟ್ ಎ ಪಂದ್ಯಗಳಲ್ಲಿ 1602 ರನ್ ಕಲೆಹಾಕಿದ್ದಾರೆ. ಇವರ ಗರಿಷ್ಠ ಸ್ಕೋರ್ 96 ಆಗಿದೆ. 105 ಟಿ20 ಪಂದ್ಯಗಳನ್ನು ಕೂಡ ಆಡಿದ್ದು 1203 ರನ್ ಗಳಿಸಿ 84 ವಿಕೆಟ್ ಕಬಳಿಸಿದ್ದಾರೆ.

ಇತ್ತೀಚೆಗಷ್ಟೆ ಭಾರತೀಯ ಆಟಗಾರ ಉನ್ಮುಕ್ತ್ ಚಂದ್ ಕೂಡ ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಯುನೈಟೆಡ್ ಸ್ಟೇಟ್ಸ್‌ ತಂಡವನ್ನು ಸೇರಿಕೊಂಡಿದ್ದರು. ಭಾರತೀಯ ಅಂಡರ್ -19 ತಂಡದಲ್ಲಿ ನಾಯಕರಾಗಿದ್ದ ಉನ್ಮುಕ್ತ್ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಬೇರೆ ದೇಶಗಳಲ್ಲಿ ಪಾಲ್ಗೊಳ್ಳಲು ಯೋಚಿಸಿದ್ದರು.

ಭಾರತದಲ್ಲಿ ಅನೇಕ ಕ್ರಿಕೆಟ್‌ ಪ್ರತಿಭೆಗಳು ಅವಕಾಶಕ್ಕಾಗಿ ಕಾಯುತ್ತಿರುವುದರಿಂದ ದೇಶದಲ್ಲಿ ಪ್ರತಿಭೆಗಳಿಗೆ ಅವಕಾಶದ ಕೊರತೆಯಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ವಯಸ್ಸು ಮೀರುವ ಮುನ್ನ ವಿದೇಶದಲ್ಲಾದರೂ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ಹೆಚ್ಚಿನ ಕ್ರಿಕೆಟ್ ಆಟಗಾರರು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.