India vs South Africa: ಸೆಂಚೂರಿಯನ್ನಲ್ಲಿ ಕೆಎಲ್ ರಾಹುಲ್ ಸೆಂಚುರಿ: ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣು
KL Rahul: ಉಪ ನಾಯಕನ ಹೆಚ್ಚುವರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ರಾಹುಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ಏಳನೇ ಶತಕದ ಸಾಧನೆ ಮಾಡಿದರು. ಅವರಿಗೆ ಅಜಿಂಕ್ಯಾ ರಹಾನೆ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 272 ರನ್ ಕಲೆಹಾಕಿದ್ದು, ದೊಡ್ಡ ಮೊತ್ತದ ಮುನ್ಸೂಚನೆ ನೀಡಿದೆ.
ಸೆಂಚೂರಿಯನ್ನ ಸೂಪರ್ ಸ್ಪೋರ್ಟ್ ಪಾರ್ಕ್ನಲ್ಲಿ ಆರಂಭವಾಗಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೊದಲ ಟೆಸ್ಟ್ ಪಂದ್ಯ (1st Test) ಮೊದಲ ದಿನವೇ ರೋಚಕತೆಯಿಂದ ಕೂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಚೇತೇಶ್ವರ್ ಪೂಜಾರ (Cheteshwar Pujara) ಶೂನ್ಯಕ್ಕೆ ಔಟ್ ಆಗಿದ್ದು, ವಿರಾಟ್ ಕೊಹ್ಲಿ (Virat Kohli) ಅರ್ಧಶತಕ ಭಾರಿಸದೇ ಹೋಗಿದ್ದು ಬಿಟ್ಟರೆ ಭಾರತಕ್ಕೆ ನಿರಾಸೆ ಆಗಲಿಲ್ಲ. ಕೆ ಎಲ್ ರಾಹುಲ್ (KL Rahul) ಏಳನೇ ಟೆಸ್ಟ್ ಶತಕ ಭಾರತದ ಇನ್ನಿಂಗ್ಸ್ ಅನ್ನು ಕಳೆಗಟ್ಟಿಸಿತು. ಮಯಂಕ್ ಅಗರ್ವಾಲ್ (Mayank Agarwal) ಮತ್ತು ಅವರು ಮೊದಲ ವಿಕೆಟ್‌ಗೆ ಆಡಿದ ಜೊತೆಯಾಟ, ಈ ಕನ್ನಡಿಗರ ಜುಗಲ್ಬಂದಿ ಮನಮೋಹಕವಾಗಿತ್ತು. ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 272 ರನ್ ಕಲೆಹಾಕಿದ್ದು, ದೊಡ್ಡ ಮೊತ್ತದ ಮುನ್ಸೂಚನೆ ನೀಡಿದೆ.
ಭಾರತದ ಆರಂಭಿಕ ಜೋಡಿ ಕೆಎಲ್ ರಾಹುಲ್ ಹಾಗೂ ಮಯಂಕ್ ಅಗರ್ವಾಲ್ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಭದ್ರ ಅಡಿಪಾಯ ಹಾಕುವಲ್ಲಿ ನೆರವಾದರು. ರೋಹಿತ್ ಶರ್ಮಾ ಅನುಪಸ್ಥಿತಿ ಕಾಡದಂತೆ ಈ ಜೋಡಿ ಒಳ್ಳೆಯ ಆರಂಭ ಕೊಟ್ಟಿದ್ದು ಭಾರತ ತಂಡದ ಇನ್ನಿಂಗ್ಸ್ ಕಟ್ಟಲು ನೆರವಾಯಿತು. ಇವರಿಬ್ಬರು ಮೊದಲ ವಿಕೆಟ್‌ಗೆ ಶತಕದ (117 ರನ್) ಜೊತೆಯಾಟ ಕಟ್ಟಿದರು. 123 ಎಸೆತಗಳನ್ನು ಎದುರಿಸಿದ ಅಗರವಾಲ್ ಒಂಬತ್ತು ಬೌಂಡರಿಗಳ ನೆರವಿನಿಂದ 60 ರನ್ ಗಳಿಸಿದರು.
ಈ ಹಂತದಲ್ಲಿ ದಾಳಿಗಿಳಿದ ಲುಂಗಿ ಗಿಡಿ, ಉತ್ತಮವಾಗಿ ಆಡುತ್ತಿದ್ದ ಮಯಂಕ್ ಜೊತೆಗೆ ಚೇತೇಶ್ವರ್ ಪೂಜಾರ (0) ಅವರನ್ನು ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್‌ಗೆ ಅಟ್ಟಿದರು. ಶೂನ್ಯಕ್ಕೆ ಔಟ್ ಆದ ಪೂಜಾರ ನಿರಾಸೆ ಮೂಡಿಸಿದರು. ಈ ಸಂದರ್ಭ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ 3ನೇ ವಿಕೆಟ್‌ಗೆ 82 ರನ್ ಜೊತೆಯಾಟ ಆಡಿದರು. ಕೊಹ್ಲಿ 35 ರನ್ಗೆ ಔಟ್ ಆಗುವ ಮೂಲಕ ಅವರ ಶತಕರಹಿತ ಇನ್ನಿಂಗ್ಸ್ ಸಂಖ್ಯೆ ಮುಂದುವರಿಯಿತು.
ಇನ್ನೊಂದೆಡೆ ಉಪ ನಾಯಕನ ಹೆಚ್ಚುವರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ರಾಹುಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ಏಳನೇ ಶತಕದ ಸಾಧನೆ ಮಾಡಿದರು. ಅವರಿಗೆ ಅಜಿಂಕ್ಯಾ ರಹಾನೆ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಇತ್ತೀಚಿನ ಕೆಲ ಪಂದ್ಯಗಳಿಂದ ರನ್ ಗಳಿಸಲು ಪರದಾಡುತ್ತಿದ್ದ ರಹಾನೆ ತಮ್ಮ ಮಾಮೂಲಿಯ ಒಳ್ಳೆಯ ಲಯಕ್ಕೆ ಮರಳಿದ್ದಾರೆ. ನಾಲ್ಕನೇ ವಿಕೆಟ್‌ಗೆ ಈ ಜೋಡಿ 73 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 81 ಎಸೆತಗಳನ್ನು ಎದುರಿಸಿದ ರಹಾನೆ 8 ಬೌಂಡರಿಗಳ ನೆರವಿನಿಂದ 40 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಾಹುಲ್ 248 ಎಸೆತಗಳನ್ನು ಎದುರಿಸಿ 122 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಇವರ ಬ್ಯಾಟ್ನಿಂದ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ದಕ್ಷಿಣ ಆಫ್ರಿಕಾ ಪರ ಗಿಡಿ 45 ರನ್ ತೆತ್ತು ಮೂರು ವಿಕೆಟ್ ಕಿತ್ತಿದ್ದಾರೆ.
ಮೊದಲ ದಿನಾಂತ್ಯಕ್ಕೆ ಸ್ಕೋರು ವಿವರ:
ಭಾರತ ಮೊದಲ ಇನ್ನಿಂಗ್ಸ್ 90 ಓವರ್ 272/3
(ಕೆಎಲ್ ರಾಹುಲ್ ಅಜೇಯ 122, ಮಯಂಕ್ ಅಗರ್ವಾಲ್ 60, ವಿರಾಟ್ ಕೊಹ್ಲಿ 35, ಅಜಿಂಕ್ಯ ರಹಾನೆ ಅಜೇಯ 40 ರನ್ – ಲುಂಗಿ ಎನ್ಗಿಡಿ 44/3)
Bengaluru Bulls: ರಣ ರೋಚಕ ಪಂದ್ಯದಲ್ಲಿ ಬೆಂಗಾಲ್ಗೆ ಸೋಲುಣಿಸಿದ ಬೆಂಗಳೂರು ಬುಲ್ಸ್
(KL Rahul headlined a strong Day 1 for India in Centurion as the visitors ended on 272-3)