ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ; ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ

ಅಧಿಕಾರ ವಹಿಸಿಕೊಂಡ ತಕ್ಷಣವೇ ಅನ್ನಭಾಗ್ಯ ಘೋಷಿಸಿದರು. ಇದರಿಂದ ಸೋಮಾರಿಗಳಿಗೆ ಪ್ರೋತ್ಸಾಹ ಕೊಟ್ಟಂತಾಗಲಿದೆ ಎಂದು ಹಲವರು ಟೀಕಿಸಿದ್ದರು ಎಂದು ಹಂಸಲೇಖ ಹೇಳಿದರು.

TV9kannada Web Team

| Edited By: sandhya thejappa

Dec 27, 2021 | 9:18 AM

ರಾಜ್ಯದ ಮಕ್ಕಳಿಗೆ ಹಾಲು ಕೊಟ್ಟ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಅಂತ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ. ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರ ‘ಯರೆಬೇವು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ, ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ. ಅವರು ಧರ್ಮೋಕ್ರಸಿ ಬದಿಗೆ ಸರಿಸಿ ಡೆಮೋಕ್ರಸಿ ಉಳಿಸಲಿ ಎಂದು ಹೇಳಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಿನ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಬಸವಜಯಂತಿ ದಿನ ಅಧಿಕಾರ ಸ್ವೀಕರಿಸುವ ಅವಕಾಶ ಸಿದ್ದರಾಮಯ್ಯನವರಿಗೆ ಸಿಕ್ಕಿತ್ತು. ಅಧಿಕಾರ ವಹಿಸಿಕೊಂಡ ತಕ್ಷಣವೇ ಅನ್ನಭಾಗ್ಯ ಘೋಷಿಸಿದರು. ಇದರಿಂದ ಸೋಮಾರಿಗಳಿಗೆ ಪ್ರೋತ್ಸಾಹ ಕೊಟ್ಟಂತಾಗಲಿದೆ ಎಂದು ಹಲವರು ಟೀಕಿಸಿದ್ದರು ಎಂದು ಹೇಳಿದರು. ದಾಸೋಹ ಪರಂಪರೆ ಗೊತ್ತಿದ್ದರೆ ಹೀಗೆ ಟೀಕೆ ಮಾಡುತ್ತಿರಲಿಲ್ಲ. ಸಿದ್ದರಾಮಯ್ಯಗೆ ಶರಣ ಪರಂಪರೆ ಬಗ್ಗೆ ದೊಡ್ಡ ಅರಿವು ಇದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಮತ್ತೊಮ್ಮೆ ಯೋಗಿ ಸರ್ಕಾರ ಆಡಳಿತಕ್ಕೆ ಬಂದರೆ, ಅಸಾದುದ್ದೀನ್​ ಓವೈಸಿ ಜನಿವಾರ ಧರಿಸಿ, ರಾಮಜಪ ಮಾಡುತ್ತಾರೆ: ಉತ್ತರಪ್ರದೇಶ ಸಚಿವ

Viral Photo: ಈ ಚಿತ್ರದಲ್ಲಿ ನಿಮಗೆ ಎಷ್ಟು ಕುದುರೆ ಕಾಣುತ್ತಿದೆ? ಸರಿಯಾದ ಉತ್ತರಕ್ಕಾಗಿ ತಲೆ ಕೆಡಿಸಿಕೊಂಡ ನೆಟ್ಟಿಗರು

Follow us on

Click on your DTH Provider to Add TV9 Kannada