‘ಬೆಳೆಯಲು ಆ ನಟಿಗೆ ಕನ್ನಡ ಬೇಕಿತ್ತು; ಈಗ ಕನ್ನಡದಲ್ಲಿ ಡಬ್​ ಮಾಡೋಕೆ ಟೈಂ ಇಲ್ಲ’: ವಿಶ್ವನಾಥ್ ಜಿ.ಪಿ. ಆಕ್ರೋಶ

Rashmika Mandanna: ತೆಲುಗಿನ ‘ಪುಷ್ಪ’ ಚಿತ್ರ ಕನ್ನಡಕ್ಕೆ ಡಬ್​ ಆಗಿ ತೆರೆಕಂಡಿತ್ತು. ಆದರೆ ಆ ಸಿನಿಮಾದ ಕನ್ನಡ ವರ್ಷನ್​ಗೆ ಡಬ್​ ಮಾಡಲು ಸಮಯ ಇರಲಿಲ್ಲ ಎಂದು ರಶ್ಮಿಕಾ ಹೇಳಿದ್ದರು.

TV9kannada Web Team

| Edited By: Madan Kumar

Dec 27, 2021 | 1:27 PM

ಕನ್ನಡ ಪರ ಹೋರಾಟಗಾರರು ಸ್ಯಾಂಡಲ್​ವುಡ್​ ಮಂದಿ ವಿರುದ್ಧ ಗರಂ ಆಗಿದ್ದಾರೆ. ಕರ್ನಾಟಕದಲ್ಲಿ ಪುಂಡಾಟಿಕೆ ಮೆರೆಯುತ್ತಿರುವ ಎಂಇಎಸ್​ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಡಿ.31ರಂದು ರಾಜ್ಯಾದ್ಯಂತ ಬಂದ್​ (Karnataka Bandh) ಮಾಡಲು ನಿರ್ಧರಿಸಲಾಗಿದೆ. ಆದರೆ ಈ ಬಂದ್​ಗೆ ಕನ್ನಡ ಚಿತ್ರರಂಗದಿಂದ ಕೇವಲ ನೈತಿಕ ಬೆಂಬಲ ನೀಡಲಾಗುವುದು ಎಂದು ವಾಣಿಜ್ಯ ಮಂಡಳಿ ತಿಳಿಸಿದೆ. ನೈತಿಕ ಬೆಂಬಲ ಬೇಡ, ಬಾಹ್ಯ ಬೆಂಬಲವೇ ಬೇಕು ಎಂದು ಕನ್ನಡಪರ ಹೋರಾಟಗಾರರು (Pro Kannada activists) ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಾತನಾಡಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವಿಶ್ವನಾಥ್​ ಜಿ.ಪಿ. ಅವರು ರಶ್ಮಿಕಾ ಮಂದಣ್ಣ (Rashmika Mandanna) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಯಾವ ಪರಿಸ್ಥಿತಿ ಬಂದಿದೆ ಎಂದರೆ, ಒಬ್ಬ ನಟಿಗೆ ಬೆಳೆಯೋಕೆ ಕನ್ನಡ ಬೇಕಿತ್ತು. ಆದರೆ ಇಂದು ಕನ್ನಡದಲ್ಲಿ ಡಬ್​ ಮಾಡೋಕೆ ಇವರಿಗೆ ಸಮಯ ಇಲ್ವ ಅಂತ ಹೇಳ್ತಾರೆ’ ಎಂದಿದ್ದಾರೆ ವಿಶ್ವನಾಥ್​. ತೆಲುಗಿನ ‘ಪುಷ್ಪ’ ಚಿತ್ರ (Pushpa Movie) ಕನ್ನಡಕ್ಕೆ ಡಬ್​ ಆಗಿ ತೆರೆಕಂಡಿತ್ತು. ಆದರೆ ಆ ಸಿನಿಮಾದ ಕನ್ನಡ ವರ್ಷನ್​ಗೆ ಡಬ್​ ಮಾಡಲು ಸಮಯ ಇರಲಿಲ್ಲ ಎಂದು ರಶ್ಮಿಕಾ ಹೇಳಿದ್ದರು.

ಇದನ್ನೂ ಓದಿ:

ರಶ್ಮಿಕಾ ಮಂದಣ್ಣ ಖುಷಿಗೆ ಸಿಕ್ತು ಇನ್ನೊಂದು ಕಾರಣ; ‘ಕಿರಿಕ್​ ಬ್ಯೂಟಿ’ಯನ್ನು ಹಿಂಬಾಲಿಸ್ತಾರೆ 2.5 ಕೋಟಿ ಜನ

ಭಕ್ತಿಗೀತೆಗೆ ಅವಮಾನ ಮಾಡಿದ ದೇವಿಶ್ರೀ ಪ್ರಸಾದ್​; ‘ಪುಷ್ಪ’ ಸಂಗೀತ ನಿರ್ದೇಶಕನ ಮೇಲೆ ಬಿತ್ತು ಕೇಸ್​

Follow us on

Click on your DTH Provider to Add TV9 Kannada