‘ಡಿಸೆಂಬರ್ 31ಕ್ಕೆ ಸಿನಿಮಾ ರಿಲೀಸ್​ ಮಾಡಿದ್ರೆ ಥಿಯೇಟರ್​ಗೆ ಮುತ್ತಿಗೆ’; ಕನ್ನಡಪರ ಹೋರಾಟಗಾರರ ಎಚ್ಚರಿಕೆ

ಡಿಸೆಂಬರ್​ 31ರಂದು ಸಿನಿಮಾ ರಿಲೀಸ್​ ಮಾಡಿದರೆ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಕರ್ನಾಟಕ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಪಿ. ವಿಶ್ವನಾಥ್ ನೀಡಿದ್ದಾರೆ.  

TV9kannada Web Team

| Edited By: Rajesh Duggumane

Dec 27, 2021 | 5:52 PM

ಕನ್ನಡದ ಬಾವುಟಕ್ಕೆ ಅವಮಾನ, ಎಂಇಎಸ್​ ಪುಂಡಾಟಿಕೆ ಖಂಡಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್​​ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸುತ್ತಿವೆ. ಕನ್ನಡ ಚಿತ್ರರಂಗದ ಕಡೆಯಿಂದ ಈ ಬಂದ್​ಗೆ ನೈತಿಕ ಬೆಂಬಲ ಮಾತ್ರ ನೀಡಲಾಗುತ್ತಿದೆ. ಡಿಸೆಂಬರ್​ 31 ಶುಕ್ರವಾರ ಬಂದಿದೆ. ಆ ದಿನ ಹಲವು ಸಿನಿಮಾಗಳು ರಿಲೀಸ್​ ಆಗುತ್ತಿವೆ. ಈಗಾಗಲೇ ಕೊವಿಡ್​ನಿಂದ ಚಿತ್ರರಂಗದ ಸಾಕಷ್ಟು ತೊಂದರೆ ಅನುಭವಿಸಿದೆ. ಈಗ ಸಿನಿಮಾ ರಿಲೀಸ್​ ದಿನವೇ ಬಂದ್​ ಆದರೆ, ಚಿತ್ರರಂಗದ ಮೇಲೆ ಹೊಡೆತ ಬೀಳಲಿದೆ. ಈ ಕಾರಣಕ್ಕೆ ಕೇವಲ ನೈತಿಕ ಬೆಂಬಲ ನೀಡುವ ನಿರ್ಧಾರಕ್ಕೆ ವಾಣಿಜ್ಯ ಮಂಡಳಿ ಬಂದಿತ್ತು. ಇದನ್ನು ಕನ್ನಡ ಪರ ಸಂಘಟನೆಗಳು ಖಂಡಿಸಿವೆ. ಸಿನಿಮಾ ರಿಲೀಸ್​ ಮಾಡಿದರೆ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಕರ್ನಾಟಕ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಪಿ. ವಿಶ್ವನಾಥ್ ನೀಡಿದ್ದಾರೆ.

ಇದನ್ನೂ ಓದಿ: ನಟಿ ಅದಿತಿ ಪ್ರಭುದೇವ ಜತೆ ಇರೋ ಹುಡುಗ ಯಾರು? ಶುಭಾಶಯ ತಿಳಿಸಿದ ಅಭಿಮಾನಿಗಳು

Follow us on

Click on your DTH Provider to Add TV9 Kannada