ಮತ್ತೊಮ್ಮೆ ಯೋಗಿ ಸರ್ಕಾರ ಆಡಳಿತಕ್ಕೆ ಬಂದರೆ, ಅಸಾದುದ್ದೀನ್​ ಓವೈಸಿ ಜನಿವಾರ ಧರಿಸಿ, ರಾಮಜಪ ಮಾಡುತ್ತಾರೆ: ಉತ್ತರಪ್ರದೇಶ ಸಚಿವ

ಭೂಪೇಂದ್ರ ಸಿಂಗ್ ಚೌಧರಿ ಅವರು ಮೂಲತಃ ಮೊರಾದಾಬಾದ್​ನವರಾಗಿದ್ದು, ರಾಜ್ಯ ವಿಧಾನಪರಿಷತ್​ ಸದಸ್ಯರಾಗಿದ್ದಾರೆ. ಶಮ್ಲಿಯಲ್ಲಿ  ನಡೆದ ಯುವಜನರ ಸಮಾವೇಶದಲ್ಲಿ ಈ ಮಾತುಗಳನ್ನಾಡಿದ್ದಾರೆ.

ಮತ್ತೊಮ್ಮೆ ಯೋಗಿ ಸರ್ಕಾರ ಆಡಳಿತಕ್ಕೆ ಬಂದರೆ, ಅಸಾದುದ್ದೀನ್​ ಓವೈಸಿ ಜನಿವಾರ ಧರಿಸಿ, ರಾಮಜಪ ಮಾಡುತ್ತಾರೆ: ಉತ್ತರಪ್ರದೇಶ ಸಚಿವ
ಅಸಾದುದ್ದೀನ್ ಒವೈಸಿ
Follow us
TV9 Web
| Updated By: Lakshmi Hegde

Updated on: Dec 27, 2021 | 9:04 AM

ಉತ್ತರ ಪ್ರದೇಶದಲ್ಲೇನಾದರೂ ಮುಂದಿನ ಅವಧಿಗೆ ಕೂಡ ಯೋಗಿ ಆದಿತ್ಯನಾಥ್​ ಸರ್ಕಾರ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಜನಿವಾರ (ಹಿಂದುಗಳಲ್ಲಿ ಬ್ರಾಹ್ಮಣರು ಸೇರಿ ಕೆಲವೇ ಸಮುದಾಯದವರು ಧರಿಸುವ ಯಜ್ಞೋಪವೀತ) ಧರಿಸಲು ಶುರು ಮಾಡುತ್ತಾರೆ. ಅಷ್ಟೇ ಅಲ್ಲ, ಶ್ರೀರಾಮನಾಮ ಜಪವನ್ನೂ ಭಜಿಸಲು ಪ್ರಾರಂಭ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಪಂಚಾಯಿತಿ ರಾಜ್​ ಸಚಿವ ಭೂಪೇಂದ್ರ ಸಿಂಗ್​ ಚೌಧರಿ ಹೇಳಿದ್ದಾರೆ.  ಹಾಗೇ, ರಾಹುಲ್ ಗಾಂಧಿ ಜನಿವಾರ ಧರಿಸಿದ್ದು, ಅಖಿಲೇಶ್​ ಯಾದವ್ ಹನುಮಾನ್​ ದೇಗುಲಕ್ಕೆ ಭೇಟಿ ಕೊಟ್ಟ ಘಟನೆಗಳ ಸಾಲಿಗೇ, ಈ ಓವೈಸಿ ಜನಿವಾರ ಧರಿಸಿ, ರಾಮನಾಮ ಜಪಿಸುವುದೂ ಸೇರಲಿದೆ ಎಂದು ವ್ಯಂಗ್ಯವಾಡಿದ್ದಾರೆ.  

ಭೂಪೇಂದ್ರ ಸಿಂಗ್ ಚೌಧರಿ ಅವರು ಮೂಲತಃ ಮೊರಾದಾಬಾದ್​ನವರಾಗಿದ್ದು, ರಾಜ್ಯ ವಿಧಾನಪರಿಷತ್​ ಸದಸ್ಯರಾಗಿದ್ದಾರೆ. ಶಮ್ಲಿಯಲ್ಲಿ  ನಡೆದ ಯುವಜನರ ಸಮಾವೇಶದಲ್ಲಿ ಈ ಮಾತುಗಳನ್ನಾಡಿದ್ದಾರೆ.  ಅಷ್ಟೇ ಅಲ್ಲ, ಪಿಟಿಐ ಜತೆ ಮಾತನಾಡುವಾಗಲೂ ಇದೇ ಮಾತುಗಳನ್ನು ಪುನರುಚ್ಚರಿಸಿದ್ದಾರೆ. ಖಂಡಿತವಾಗಿಯೂ ನಾನು ಹೇಳಿದ್ದು ಆಗಿಯೇ ಆಗುತ್ತದೆ ಎಂದಿದ್ದಾರೆ. ನಾವು ಬಿಜೆಪಿ ಅಜೆಂಡಾ ಮುಂದುವರಿಸುತ್ತೇವೆ. ನಮ್ಮ ಅಜೆಂಡಾದಿಂದಾಗಿಯೇ ಅಂದು ರಾಹುಲ್​ ಗಾಂಧಿ ಜನಿವಾರ ಹಾಕಿದ್ದು, ಅಖಿಲೇಶ್​ ಯಾದವ್​ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದು ಎಂದು ಸಚಿವರು ಹೇಳಿದ್ದಾರೆ. ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವವರು ರಾಮನ ಅಸ್ತಿತ್ವವನ್ನೇ ಒಪ್ಪಿಕೊಳ್ಳದೆ, ಅವನನ್ನು ಕಾಲ್ಪನಿಕ ಎಂದವರೆಲ್ಲ ಈಗ ಜನಿವಾರ ಧರಿಸುತ್ತಿದ್ದಾರೆ..ದೇಗುಲಗಳಿಗೆ ಭೇಟಿ ಕೊಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

2007ರ ಸೆಪ್ಟೆಂಬರ್​​ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್​ ಸರ್ಕಾರ, ಶ್ರೀರಾಮ ಮತ್ತು ರಾಮಾಯಣದಲ್ಲಿ ಬರುವ ಇತರರ ಅಸ್ತಿತ್ವವನ್ನು ಪ್ರಶ್ನಿಸಿತ್ತು. ಶ್ರೀರಾಮ ಇದ್ದ ಎಂಬುದಕ್ಕೆ ಐತಿಹಾಸಿಕವಾಗಿ ಯಾವುದೇ ಪುರಾವೆಗಳೂ ಇಲ್ಲ ಎಂದು ಸುಪ್ರಿಂಕೋರ್ಟ್​ಗೆ ಅಫಿಡಿವಿಟ್​ ಸಲ್ಲಿಸಿತ್ತು.  ಅದನ್ನೇ ಈಗ ಸಚಿವರು ಹೇಳಿದ್ದಾರೆ. ಅಸಾದುದ್ದೀನ್​ ಓವೈಸಿ ಬಿಜೆಪಿಯ ವಿರೋಧಕರು. ಅವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 100 ಕ್ಷೇತ್ರಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ ಅಯೋಧ್ಯೆಯಿಂದಲೇ ತಮ್ಮ ಪ್ರಚಾರವನ್ನು ಶುರು ಮಾಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಜನ್ಮದಿನ ಸಂಭ್ರಮ; 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸ್ಟಾರ್​ ನಟ