ಸಲ್ಮಾನ್​ ಖಾನ್​ ಜನ್ಮದಿನ ಸಂಭ್ರಮ; 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸ್ಟಾರ್​ ನಟ

Salman Khan Birthday: ಹಾವು ಕಚ್ಚಿದ ಬಳಿಕ ಪ್ರಥಮ ಚಿಕಿತ್ಸೆ ಪಡೆದಿರುವ ಸಲ್ಮಾನ್​ ಖಾನ್ ಅವರು ತಮ್ಮ ಫಾರ್ಮ್​ಹೌಸ್​ಗೆ ಮರಳಿದ್ದಾರೆ. ಅಲ್ಲಿಯೇ 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಸಲ್ಮಾನ್​ ಖಾನ್​ ಜನ್ಮದಿನ ಸಂಭ್ರಮ; 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸ್ಟಾರ್​ ನಟ
ಸಲ್ಮಾನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 27, 2021 | 8:44 AM

ನಟ ಸಲ್ಮಾನ್​ ಖಾನ್​ (Salman Khan) ಅವರು ಬಾಲಿವುಡ್​ನಲ್ಲಿ ಸ್ಟಾರ್​ ಆಗಿ ಮೆರೆಯುತ್ತಿದ್ದಾರೆ. ಪ್ರತಿ ವರ್ಷ ಅವರ ಹುಟ್ಟುಹಬ್ಬದ ಪಾರ್ಟಿ ಜೋರಾಗಿಯೇ ಇರುತ್ತದೆ. ಇಂದು (ಡಿ.27) ಸಲ್ಮಾನ್​ ಖಾನ್​ ಫಾರ್ಮ್​ ಹೌಸ್​ನಲ್ಲಿ ಬರ್ತ್​ಡೇ (Salman Khan Birthday) ಆಚರಣೆ ಮಾಡಿಕೊಂಡಿದ್ದಾರೆ. ಅವರ ಆಪ್ತರು, ಸ್ನೇಹಿತರು ಮತ್ತು ಅನೇಕ ಸೆಲೆಬ್ರಿಟಿಗಳು ಫಾರ್ಮ್​ ಹೌಸ್​ಗೆ (Salman Khan Farmhouse) ತೆರಳಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸೋಶಿಯಲ್​ ಮೀಡಿಯಾ ಮೂಲಕ ಸಲ್ಲುಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಸಲ್ಮಾನ್​ ಖಾನ್​ ಅವರು ಸದ್ಯ ತಮ್ಮ ಪನ್ವೇಲ್​ ಫಾರ್ಮ್​ಹೌಸ್​ನಲ್ಲಿ ಇದ್ದಾರೆ. ಅಲ್ಲಿಯೇ ಬರ್ತ್​ಡೇ ಪಾರ್ಟಿ ನಡೆದಿದೆ.

ಬಾಲಿವುಡ್​ನಲ್ಲಿ ಅನೇಕರ ಪಾಲಿಗೆ ಸಲ್ಮಾನ್​ ಖಾನ್​ ಅವರು ಗಾಡ್​ ಫಾದರ್​ ಆಗಿದ್ದಾರೆ. ಸಲ್ಲು ಸಿನಿಮಾಗಳು ಸೋತರೂ ಕೂಡ ಅವರಿಗೆ ಇರುವ ಡಿಮ್ಯಾಂಡ್​ ಕಮ್ಮಿ ಆಗಿಲ್ಲ. ಬಿಗ್​ ಬಾಸ್​ ನಿರೂಪಣೆ ಮಾಡುವ ಮೂಲಕ ಅವರು ಕಿರುತೆರೆ ಪ್ರೇಕ್ಷಕರನ್ನೂ ರಂಜಿಸುತ್ತಿದ್ದಾರೆ. ಪ್ರಸ್ತುತ ‘ಟೈಗರ್​ 3’ ಚಿತ್ರದ ಕೆಲಸಗಳಲ್ಲಿ ಸಲ್ಮಾನ್​ ಖಾನ್​ ತೊಡಗಿಕೊಂಡಿದ್ದಾರೆ. ಈ ವರ್ಷ ಅವರು ನಟಿಸಿದ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಹಾಗೂ ‘ಅಂತಿಮ್​: ದಿ ಫೈನಲ್​ ಟ್ರುಥ್​’ ಚಿತ್ರಗಳು ತೆರೆಕಂಡವು. ಆದರೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ.

ಹುಟ್ಟುಹಬ್ಬದ ಹೊಸ್ತಿಲಲ್ಲೇ ಹಾವು ಕಡಿತ!

ಸಲ್ಮಾನ್​ ಖಾನ್​ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನ ಅವರಿಗೆ ಹಾವು ಕಚ್ಚಿತ್ತು. ಫಾರ್ಮ್​ಹೌಸ್​ನಲ್ಲಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದ ಕೂಡಲೇ ಅಭಿಮಾನಿಗಳು ಆತಂಕಗೊಂಡಿದ್ದರು. ಭಾನುವಾರ (ಡಿ.26) ಮುಂಜಾನೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಹಾವು ಹೆಚ್ಚು ವಿಷಪೂರಿತ ಆಗಿರಲಿಲ್ಲ. ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಬಳಿಕ ಎಲ್ಲರೊಡನೆ ಸೇರಿ ಬರ್ತ್​ಡೇ ಆಚರಿಸಿದ್ದಾರೆ.

ಸೇಫ್​ ಆಗಿದ್ದಾರೆ ಸಲ್ಲು

ಸಲ್ಮಾನ್ ಖಾನ್​ ಆರೋಗ್ಯದ ಬಗ್ಗೆ ಅವರ ತಂದೆ ಸಲೀಮ್​ ಖಾನ್​ ಮಾಹಿತಿ ನೀಡಿದ್ದಾರೆ. ಈ ವಿಷಯ ಕೇಳಿದ ಬಳಿಕ ಅವರ ಫ್ಯಾನ್ಸ್​ ನಿಟ್ಟುಸಿರು ಬಿಟ್ಟಿದ್ದಾರೆ. ‘ಸಲ್ಮಾನ್​ ಖಾನ್​ಗೆ ಬೆಡ್​ ರೂಮ್​ನಲ್ಲಿಯೇ ಹಾವು ಕಚ್ಚಿತ್ತು. ಚಿತ್ರೀಕರಣ ಮುಗಿಸಿಕೊಂಡ ಬಂದು ಬೆಡ್​ ರೂಮ್​ಗೆ ತೆರಳಿದಾಗ ಈ ಘಟನೆ ನಡೆಯಿತು. ಈಗ ಸಲ್ಮಾನ್​ ಆರೋಗ್ಯ ಚೆನ್ನಾಗಿದೆ. ಫ್ಯಾನ್ಸ್​ ಆತಂಕ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇಂಥ ಕಡೆಗಳಲ್ಲಿ ಈ ರೀತಿಯ ಹಾವುಗಳು ಕಾಣಿಸಿಕೊಳ್ಳುವುದು ಸಹಜ’ ಎಂದು ಸಲೀಮ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ:

ಹಾವು ಕಚ್ಚಿದ ಬಳಿಕ ಆಸ್ಪತ್ರೆಯಲ್ಲಿ ಸಲ್ಮಾನ್​ ಖಾನ್​ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್​

ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್​ ಸಹಾಯ; ವಿಡಿಯೋ ವೈರಲ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ