AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಈ ಚಿತ್ರದಲ್ಲಿ ನಿಮಗೆ ಎಷ್ಟು ಕುದುರೆ ಕಾಣುತ್ತಿದೆ? ಸರಿಯಾದ ಉತ್ತರಕ್ಕಾಗಿ ತಲೆ ಕೆಡಿಸಿಕೊಂಡ ನೆಟ್ಟಿಗರು

ಈ ವೈರಲ್​ ಆದ ಫೋಟೋದಲ್ಲಿ ಮಿಶ್ರ-ಬಣ್ಣದ ಕುದುರೆಗಳು ಹಿಮಭರಿತ ಪರ್ವತಗಳ ಎದುರು ನಿಂತತ್ತೆ ಕಾಣುತ್ತದೆ. ಕುದುರೆಯ ಬಣ್ಣ ಮತ್ತು ಹಿಮಭರಿತ ಪರ್ವತದ ಬಣ್ಣ ಒಂದೇ ರೀತಿ ಇರುವುದೇ ಈಗ ನೆಟ್ಟಿಗರಲ್ಲಿ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ.

Viral Photo: ಈ ಚಿತ್ರದಲ್ಲಿ ನಿಮಗೆ ಎಷ್ಟು ಕುದುರೆ ಕಾಣುತ್ತಿದೆ? ಸರಿಯಾದ ಉತ್ತರಕ್ಕಾಗಿ ತಲೆ ಕೆಡಿಸಿಕೊಂಡ ನೆಟ್ಟಿಗರು
ಕುದುರೆ
Follow us
TV9 Web
| Updated By: Digi Tech Desk

Updated on:Dec 27, 2021 | 10:26 AM

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social media) ಒಂದಿಲ್ಲ ಒಂದು ವಿಷಯಗಳು ವೈರಲ್​ ಆಗುತ್ತಿರುತ್ತವೆ. ಅದರಂತೆ ವೈರಲ್​ ಆಗುವ ಸುದ್ದಿಗಳು, ವಿಡಿಯೋಗಳು ಮತ್ತು ಫೋಟೋಗಳು ಜನರನ್ನು ಆಕರ್ಷಿಸುತ್ತವೆ. ಕೆಲವೊಂದಿಷ್ಟು ವಿಷಯಗಳು ಕೇವಲ ಮನರಂಜನೆಯ ಭಾಗವಾಗಿದ್ದರೆ, ಇನ್ನೂ ಕೆಲವು ವಿಷಯಗಳು ಮಾಹಿತಿ ನೀಡುವ ಅಥವಾ ಒಂದೊಳ್ಳೆ ಟಾಸ್ಕ್​ ನೀಡುವ ರೀತಿಯಲ್ಲಿ ಇರುತ್ತದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಕೇಳುವ ಪ್ರಶ್ನೆಗಳಿಗೆ ನೆಟ್ಟಿಗರು ಕೂಡ ತುಂಬಾ ತಲೆ ಕೆಡಿಸಿಕೊಂಡು ಉತ್ತರ ಹುಡುಕುತ್ತಾರೆ. ಸದ್ಯ ಇಂತಹದ್ದೇ ಒಂದು ಫೋಟೋ ಪ್ರಶ್ನೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಸರಿಯಾದ ಉತ್ತರಕ್ಕಾಗಿ ಕಣ್ಣರಳಿಸಿ ನೋಡಿದ್ದಾರೆ ಮತ್ತು ಅತ್ಯಂತ ಕುತೂಹಲದಿಂದ ಸರಿಯಾದ ಉತ್ತರಕ್ಕೆ ಕಾಯುತ್ತಿದ್ದಾರೆ. ಈ ವೈರಲ್​ ಆದ ಫೋಟೋದಲ್ಲಿ ಮಿಶ್ರ-ಬಣ್ಣದ ಕುದುರೆಗಳು ಹಿಮಭರಿತ ಪರ್ವತಗಳ ಎದುರು ನಿಂತತ್ತೆ ಕಾಣುತ್ತದೆ. ಕುದುರೆಯ ಬಣ್ಣ ಮತ್ತು ಹಿಮಭರಿತ ಪರ್ವತದ ಬಣ್ಣ ಒಂದೇ ರೀತಿ ಇರುವುದೇ ಈಗ ನೆಟ್ಟಿಗರಲ್ಲಿ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ. ವೈರಲ್ ಆದ ಚಿತ್ರದಲ್ಲಿ ಹೆಚ್ಚಿನ ಜನರು ಐದು ಕುದುರೆಗಳನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ. ಆದರೆ ವಾಸ್ತವಾಗಿ ಈ ಫೋಟೋದಲ್ಲಿ ಏಳು ಕುದುರೆಗಳಿವೆ.

ಈ ಫೋಟೋವನ್ನು ಯುಎಸ್​ ವೆಬ್‌ಸೈಟ್ ಕಿಡ್ಸ್ ಎನ್ವಿರಾನ್‌ಮೆಂಟ್ ಕಿಡ್ಸ್ ಹೆಲ್ತ್‌ನಲ್ಲಿ ಹಂಚಿಕೊಂಡಿದೆ. ಈ ಫೋಟೋ ಜತೆಗೆ ಚಿತ್ರದಲ್ಲಿ ನೀವು ಎಷ್ಟು ಕುದುರೆಗಳನ್ನು ಕಾಣಬಹುದು? ಎಂಬ ಶೀರ್ಷಿಕೆ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಉತ್ತರಕ್ಕಾಗಿ ಕುತೂಹಲ ಹೆಚ್ಚಾಗಿದೆ.

ಈ ಪ್ರಶ್ನೆ ಸರಳವೆಂದು ತೋರುತ್ತದೆಯಾದರೂ, ನೆಟ್ಟಿಗರು ಒಂದೇ ಚಿತ್ರವನ್ನು ಎಷ್ಟು ಬಾರಿ ನೋಡಿದರೂ, ಅವರಿಗೆ ಕೇವಲ 5 ಕುದುರೆಗಳು ಮಾತ್ರ ಕಾಣಿಸಿಕೊಂಡವು. ಕೊನೆಗೆ ಗೊಂದಲದ ನಿವಾರಣೆಗೆ ಯುಎಸ್ ವೆಬ್‌ಸೈಟ್ ಕಿಡ್ಸ್ ಎನ್ವಿರಾನ್‌ಮೆಂಟ್ ಕಿಡ್ಸ್ ಹೆಲ್ತ್‌, ಕ್ಲೂ ಒಂದನ್ನೂ ಸಹ ಒದಗಿಸಿದೆ. ಕೆಲವು ಕುದುರೆಗಳ ತಲೆಯನ್ನು ಗುರುತಿಸುವಲ್ಲಿ ನೋಡಿ ಎಂದು ತಿಳಿಸಿದೆ.

ಅದರಂತೆ ಮಧ್ಯ ಭಾಗದಲ್ಲಿ ನಾಲ್ಕು ಕುದುರೆಗಳಿವೆ. ಫೋಟೋದ ಎಡಭಾಗದಲ್ಲಿ ಒಂದು ಕುದುರೆ ಓಡುವಂತೆ ಕಾಣುತ್ತದೆ. ಜತೆಗೆ ಕುದುರೆ ಗುಂಪಿನ ಮಧ್ಯಭಾಗದಲ್ಲಿ ಕಂದು ಮೂಗು ಕಾಣಿಸುತ್ತದೆ ಅದು ಹಿಂದೆ ಇರುವ ಕುದುರೆ (ಎಡದಿಂದ ಎರಡನೆಯದು). ನಂತರ ಬಲಕ್ಕೆ ಒಂದು ಸಣ್ಣ ಕುದುರೆ ಪಕ್ಕಕ್ಕೆ ನಿಂತಿದೆ ಮತ್ತು ಅದರ ಮೇಲೆ ಏಳನೆಯ ಕುದುರೆ ಇದೆ.  ಈ ಚಿತ್ರದಲ್ಲಿ ಏಳು ಕುದುರೆಗಳಿವೆ ಎಂದು ನೀವು ಇನ್ನೂ ತಿಳಿಯದಿದ್ದರೆ ಚಿಂತಿಸಬೇಡಿ ಎಂದು ವೆಬ್‌ಸೈಟ್ ಹೇಳಿದೆ.

ಪಿಂಟೋಸ್ ಎಂದು ಹೆಸರಿಸಿದ ಕಲಾವಿದ ಬೆವ್ ಡೂಲಿಟಲ್ ಪ್ರಕಾರ, ಕೇವಲ ಐದು ಕುದುರೆಗಳಿವೆ. ಆದಾಗ್ಯೂ, ಕೆಲವರು ಇನ್ನೂ ಹೆಚ್ಚಿನದನ್ನು ನೋಡಬಹುದು ಎಂಬ ಅಂಶವನ್ನು ತಳ್ಳಿ ಹಾಕುವಂತಿಲ್ಲ. ಇದು ಜನರ ಮೆದುಳು ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸುತ್ತದೆ.

ಇದನ್ನೂ ಓದಿ: ವೀಡಿಯೋ ಶೂಟಿಂಗ್​ ವೇಳೆ ಗಾಯಕಿಯ ಮುಖಕ್ಕೆ ಕಚ್ಚಿದ ಹಾವು: ವೀಡಿಯೋ ವೈರಲ್​

ನಾಯಿಯನ್ನು ಕ್ರಿಸ್​ಮಸ್​ ಗಿಫ್ಟ್​ನಂತೆ ಪ್ಯಾಕ್​ ಮಾಡಿದ ಮಾಲೀಕ: ಕ್ಯೂಟ್​ ಡಾಗ್​ ವೀಡಿಯೋ ವೈರಲ್​​

Published On - 8:55 am, Mon, 27 December 21

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ