ವೀಡಿಯೋ ಶೂಟಿಂಗ್​ ವೇಳೆ ಗಾಯಕಿಯ ಮುಖಕ್ಕೆ ಕಚ್ಚಿದ ಹಾವು: ವೀಡಿಯೋ ವೈರಲ್​

ವೀಡಿಯೋ ಶೂಟಿಂಗ್​ ವೇಳೆ ಗಾಯಕಿಯ ಮುಖಕ್ಕೆ ಕಚ್ಚಿದ ಹಾವು: ವೀಡಿಯೋ ವೈರಲ್​
ಗಾಯಕಿ ಮೆಟಾ

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೆಟಾ ಎಂಬ 21 ವರ್ಷದ ಯುವ ಗಾಯಕಿ ಬ್ಲಾಕ್ ಆ್ಯಂಡ್​ ವೈಟ್​ ಮೋಡ್​​ನಲ್ಲಿ ವೀಡಿಯೋ ಶೂಟ್​ ಮಾಡಿಸಿಕೊಳ್ಳುತ್ತಿದ್ದರು.

TV9kannada Web Team

| Edited By: Pavitra Bhat Jigalemane

Dec 26, 2021 | 5:19 PM

ಕೆಲವೊಮ್ಮೆ ಪ್ರಾಣಿಗಳ ಜತೆ ಶೂಟಿಂಗ್​ ಅಥವಾ ಫೋಟೋಶೂಟ್​ ಮಾಡಿಕೊಳ್ಳುವ ವೇಳೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಎಷ್ಟು ಮುನ್ನೆಚ್ಚರಿಕೆವಹಿಸಿದರೂ ಕಡಿಮೆಯೇ. ಇದೀಗ ಅದೇ ರೀತಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೆಟಾ ಎಂಬ 21 ವರ್ಷದ ಯುವ ಗಾಯಕಿ ಬ್ಲಾಕ್ ಆ್ಯಂಡ್​ ವೈಟ್​ ಮೋಡ್​​ನಲ್ಲಿ ವೀಡಿಯೋ ಶೂಟ್​ ಮಾಡಿಸಿಕೊಳ್ಳುತ್ತಿದ್ದರು. ಅದು ಹಾವನ್ನು ಮೈಮೇಲೆ ಬಿಟ್ಟುಕೊಂಡು ವೀಡಿಯೋ ಶೂಟ್​ ನಡೆಸುವ ವೇಳೆ ಹಾವು ಗಾಯಕಿಯ ಮುಖಕ್ಕೆ ಕಚ್ಚಿದೆ. ಅದೃಷ್ಟವಶಾತ್​ ಗಾಯಕಿಗೆ ಯಾವುದೇ ಅಪಾಯವಾಗಲಿಲ್ಲ. ಗಾಯಕಿ ಮೆಟಾ ವಿಡಿಯೋದ ತುಣುಕನ್ನು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೋದಲ್ಲಿ  ಬ್ಲಾಕ್​ ಆ್ಯಂಡ್​ ವೈಟ್​ ಮೂಡ್​ನಲ್ಲಿ ಕ್ಯಾಮಾರಾ ಆನ್​ ಆಗಿರುತ್ತದೆ.  ಕೆಳಗೆ ಮಲಗಿದ್ದ ಗಾಯಕಿ ಮೆಟಾ ಮೇಲೆ ಮೊದಲು ಕಪ್ಪು ಬಣ್ಣದ ಹಾವನ್ನು ಇರಿಸಲಾಗುತ್ತದೆ. ಬಳಿಕ ಕಪ್ಪು ಹಾವನ್ನು ಸರಿಸಿ ಬಿಳಿಯ ಹಾವನ್ನು ಆಕೆಯ ಮೈಮೇಲೆ ಬಿಡುವ ವೇಳೆ ಕಪ್ಪು ಹಾವು ಮೆಟಾ ಅವರ ಮುಖಕ್ಕೆ ಕಚ್ಚುತ್ತದೆ. ತಕ್ಷಣ ಅವರು ಹಾವಿನಿಂದ ಬಿಡಿಸಿಕೊಂಡು ಮಲಗಿದ್ದ ಜಾಗದಿಂದ ಏಳುತ್ತಾರೆ. ಈ ವಿಡಿಯೋವನ್ನು ಅವರು ತಮ್ಮ ಅಧಿಕೃತ ಇನ್ಸ್ಟಾ ಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

View this post on Instagram

A post shared by Maeta (@maetasworld)

ಸದ್ಯ ವೀಡಿಯೋ ಎಲ್ಲೆಡೆ ಸಖತ್​ ವೈರಲ್​ ಆಗಿದ್ದು 4 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಹಾವು ವಿಷಕಾರಿ ಅಲ್ಲದ ಕಾರಣ ಮೆಟಾ ಯಾವುದೇ ತೊಂದರೆಯಾಗದಂತೆ ಬಚಾವ್​ ಆಗಿದ್ದಾರೆ.  ಮೆಟಾ ಯುಎಸ್​ನ ಯುವ ಗಾಯಕಿಯಾಗಿದ್ದು, ರೋಕ್​ ನೇಷನ್​ಗೆ ಸಹಿ ಮಾಡುವ ಮೂಲಕ ಗಾಯನ ಲೋಕಕ್ಕೆ ಎಂಟ್ರಿಯಾಗಿದ್ದರು. ಹ್ಯಾಬಿಟ್ಸ್​ ಎನ್ನುವ ಮೊದಲ ಆಲ್ಬಂ ಅನ್ನು ಕೂಡ ಮೆಟಾ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:

Poisonous Creature: ಪ್ರಪಂಚದ ಅತ್ಯಂತ ವಿಷಕಾರಿ ಜೀವಿಗಳಾವುವು? ಇಲ್ಲಿದೆ ಕುತೂಹಲಕರ ಮಾಹಿತಿ

Follow us on

Related Stories

Most Read Stories

Click on your DTH Provider to Add TV9 Kannada