Year Ender 2021: ಟಿವಿ ಚಾನೇಲ್​ಗಳಲ್ಲಿ ಲೈವ್ ಇರುವಾಗಲೇ ನಡೆದ ತಮಾಷೆಯ ತುಣುಕುಗಳಿವು? ಮಿಸ್ ಮಾಡದೆ ನೋಡಿ

Year Ender 2021: ಟಿವಿ ಚಾನೇಲ್​ಗಳಲ್ಲಿ ಲೈವ್ ಇರುವಾಗಲೇ ನಡೆದ ತಮಾಷೆಯ ತುಣುಕುಗಳಿವು? ಮಿಸ್ ಮಾಡದೆ ನೋಡಿ
ತಮಾಷೆಯ ತುಣುಕು

ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಒಂದಷ್ಟು ಕಳೆದು ಹೋದ ದಿನಗಳನ್ನು ನೆನೆದು ಮುಂದಕ್ಕೆ ಸಾಗುವುದು ಅಭ್ಯಾಸ ಅಥವಾ ಅದೊಂದು ರೀತಿಯ ಖುಷಿಯನ್ನು ನೀಡುತ್ತದೆ. ಇಂತಹ ಖುಷಿಯ ಸಂದರ್ಭಕ್ಕೆ ಮತ್ತಷ್ಟು ಮೇರುಗು ನೀಡಲು ಈ ವರ್ಷ ಅಂದರೆ 2021ರಲ್ಲಿ ಟಿವಿ ಚಾನೇಲ್​ಗಳಲ್ಲಿ ಅದರಲ್ಲೂ ನೇರ ಪ್ರಸಾರದಲ್ಲಿರುವಾಗಲೇ ನಡೆದ ತಮಾಷೆಯ ಸಂಗತಿಗಳನ್ನು ನೆನಪು ಮಾಡಿಕೊಳ್ಳೊಣ.

TV9kannada Web Team

| Edited By: preethi shettigar

Dec 27, 2021 | 12:04 PM


ಜೀವನದಲ್ಲಿ ಎಲ್ಲವೂ ಯೋಜನೆಯ ಪ್ರಕಾರ ನಡೆಯುವುದಿಲ್ಲ. ನಾವೊಂದು ಯೋಚಿಸಿದರೆ ಅದನ್ನು ಕಾರ್ಯರೂಪಕ್ಕೆ ತರುವಾಗ ಬೇರೊಂದು ಸಂಭವಿಸುತ್ತದೆ. ಇದು ಟಿವಿ ಮಾಧ್ಯಮಗಳಿಗೂ ಅನ್ವಯವಾಗುತ್ತದೆ. ಕಾರ್ಯಕ್ರಮವೊಂದು ಚೆನ್ನಾಗಿ ಮೂಡಿ ಬರಬೇಕು ಎನ್ನುವಾಗಲೇ ಅಚಾನಕ್ ಆಗಿ​ ಬದಲಾವಣೆಯಾಗುತ್ತದೆ. ಇದು ಎಲ್ಲವನ್ನು ಹಾಳು ಮಾಡಬಹುದು ಅಥವಾ ನಗೆಪಾಟಲಿಗೆ ಗುರಿಯಾಗಿಸಬಹುದು. ಇಂತಹ ಅನೇಕ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್​ ಆಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರುತ್ತಿದೆ. ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಒಂದಷ್ಟು ಕಳೆದು ಹೋದ ದಿನಗಳನ್ನು ನೆನೆದು ಮುಂದಕ್ಕೆ ಸಾಗುವುದು ಅಭ್ಯಾಸ ಅಥವಾ ಅದೊಂದು ರೀತಿಯ ಖುಷಿಯನ್ನು ನೀಡುತ್ತದೆ. ಇಂತಹ ಖುಷಿಯ ಸಂದರ್ಭಕ್ಕೆ ಮತ್ತಷ್ಟು ಮೇರುಗು ನೀಡಲು ಈ ವರ್ಷ ಅಂದರೆ 2021ರಲ್ಲಿ ಟಿವಿ ಚಾನೇಲ್​ಗಳಲ್ಲಿ (TV Channel) ಅದರಲ್ಲೂ ನೇರ ಪ್ರಸಾರದಲ್ಲಿರುವಾಗಲೇ ನಡೆದ ತಮಾಷೆಯ ಸಂಗತಿಗಳನ್ನು ನೆನಪು ಮಾಡಿಕೊಳ್ಳೊಣ.

ಗ್ಲೋಬಲ್ ನ್ಯೂಸ್‌ನ ಮುಖ್ಯ ಹವಾಮಾನಶಾಸ್ತ್ರಜ್ಞ ಆಂಥೋನಿ ಫಾರ್ನೆಲ್ ಅವರು ನೇರ ಪ್ರಸಾರದಲ್ಲಿರುವಾಗಲೇ ಸ್ಕ್ರೀನ್​ ಮೇಲೆ ಅವರ ನಾಯಿ ಕಾಣಿಸಿಕೊಂಡಿದೆ. ಲೈವ್​ ಹೋಗುತ್ತಿದೆ ಎಂಬ ಅರಿವೇ ಇಲ್ಲದೆ ನಾಯಿ ಆ ಕಡೆಯಿಂದ ಈ ಕಡೆಗೆ ಓಡಾಡಿದೆ. ಈ ವೇಳೆ ಏನು ಮಾಡದ ಪರಿಸ್ಥಿತಿ ಎದುರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್​ ವೈರಲ್​ ಆಗಿತ್ತು. ಜತೆಗೆ ನೆಟ್ಟಿಗರು ಈ ವಿಡಿಯೋ ನೋಡಿ ಹಾಸ್ಯಲೋಕದಲ್ಲಿ ತೇಲಾಡಿದ್ದಾರೆ.

ಇಂತಹದೇ ಮತ್ತೊಂದು ಘಟನೆ ನಡೆದಿದ್ದು, ರಷ್ಯಾದ ಪತ್ರಕರ್ತೆ ನಡೆಜ್ಡಾ ಸೆರೆಜ್ಕಿನಾ, ಮಾಸ್ಕೋದಲ್ಲಿ ಹವಮಾನ ವರದಿಯನ್ನು ವಿವರಿಸುವ ವೇಳೆ ನಾಯಿಯೊಂದು ಅವಳ ಮೈಕ್​ ಕಿತ್ತುಕೊಂಡು ಓಡಿ ಹೋಗಿದೆ. ಲೈವ್​ನಲ್ಲಿರುವಾಗಲೇ ಈ ಘಟನೆ ನಡೆದಿದ್ದು, ತಕ್ಷಣಕ್ಕೆ ವರದಿಯನ್ನು ಆ್ಯಂಕರ್​ ಕಡೆಗೆ ಬದಲಾಯಿಸುವ ಪ್ರಯತ್ನ ನಡೆಯಿತಾದರೂ, ಈ ವಿಡಿಯೋ ನೆಟ್ಟಿಗರಿಗೆ ಒಂದು ತಮಾಷೆಯ ವಿಡಿಯೋ ಆಗಿ ಕಾಣಿಸಿಕೊಂಡಿತು.

ಬಿಬಿಸಿ ಪತ್ರಕರ್ತೆ ಕರೋಲ್ ಕಿರ್ಕ್‌ವುಡ್, ಲೈವ್ ಟೆಲಿಕಾಸ್ಟ್ ವೇಳೆಯೇ ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಇದಕ್ಕೆ ಕಾರಣ ಅವರ ನಾಯಿ. ನಾಯಿಯನ್ನು ಬೆಲ್ಟ್​ ಸಮೇತ ಹಿಡಿದಿದ್ದು, ಲೈವ್​ನಲ್ಲಿ ಆ್ಯಂಕರ್​ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ನಾಯಿ ಆಕೆಯನ್ನು ಜೋರಾಗಿ ಎಳೆದಿದೆ. ಹೀಗಾಗಿ ಪತ್ರಕರ್ತೆ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಈ ದೃಶ್ಯ ಕಂಡು ಸ್ವತಃ ಆ್ಯಂಕರ್​  ಕೂಡ ನಕ್ಕಿದ್ದಾರೆ.

ಫಾಕ್ಸ್ 9 ಚಾನೇಲ್​ನ ಹವಾಮಾನಶಾಸ್ತ್ರಜ್ಞೆ ಜೆನ್ನಿಫರ್ ಮ್ಯಾಕ್‌ಡರ್ಮೆಡ್ ಈ ವರ್ಷದ ಮೇ ತಿಂಗಳಲ್ಲಿ ವೈರಲ್ ಆಗಿದ್ದರು. ಇದಕ್ಕೆ ಕಾರಣ ಲೈವ್ ಇರುವಾಗ ತಾಂತ್ರಿಕ ಸಮಸ್ಯೆಯಿಂದಾಗಿ ಪರದೆಯ ಮೇಲೆ ಅವರ ಪ್ರತಿಬಿಂಬ ಕಾಣಲು ಪ್ರಾರಂಭವಾಯಿತು. ಗ್ರಾಫಿಕ್ಸ್ನಿಂದಾಗಿ ಜೆನ್ನಿಫರ್ ಮ್ಯಾಕ್‌ಡರ್ಮೆಡ್ ಸಂಚರಿಸಿದಂತೆಲ್ಲಾ ಅದು ಅವರ ಹತ್ತಾರು ಅವತಾರದಂತೆ ಕಾಣಿಸಿಕೊಳ್ಳಲು ಶುರುವಾಗಿದ್ದು, ನೆಟ್ಟಿಗರು ಕೂಡ ಈ ತುಣುಕು ಕಂಡು ಖುಷಿಪಟ್ಟಿದ್ದಾರೆ.

ಮೇ ತಿಂಗಳಲ್ಲಿ ಸಿಎನ್​ಎನ್​ ವರದಿಗಾರ ಮನು ರಾಜು ಅವರು ಲೈವ್​ನಲ್ಲಿರುವಾಗಲೇ ಹುಳವೊಂದು ಅವರ ಕುತಿಗೆ ಭಾಗಕ್ಕೆ ಬಂದು ಕಚ್ಚಿದೆ. ಇದರಿಂದ ಅವರು ಜೋರಾಗಿ ಕಿರುಚಾಡಿದ್ದಾರೆ. ಜತೆಗೆ ಲೈವ್​ನಲ್ಲಿದ್ದೇನೆ ಎನ್ನುವುದನ್ನು ಒಂದು ಕ್ಷಣಕ್ಕೆ ಅವರು ಮರೆತಿದ್ದಾರೆ.

ನ್ಯೂಜಿಲೆಂಡ್‌ನ ಸಾಮಾಜಿಕ ಅಭಿವೃದ್ಧಿಯ ಸಚಿವೆ ಕಾರ್ಮೆಲ್ ಸೆಪುಲೋನಿ, ಜೂಮ್​ ಮೀಟಿಂಗ್​ ಮೂಲಕ ನೇರ ಸಂದರ್ಶನದಲ್ಲಿದ್ದರು. ಈ ವೇಳೆ ಅವರ ಮಗ ಹಿಂಭಾಗದಿಂದ ಕ್ಯಾರೆಟ್​ ಹಿಡಿದು ಬಂದಿದ್ದಾನೆ. ಇದನ್ನು ಕಂಡ ಕಾರ್ಮೆಲ್ ಸೆಪುಲೋನಿ ಮಗನ ಕೈಯಿಂದ ಕ್ಯಾರೆಟ್​ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್‌ ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ಟಿವಿ ಚಾನೇಲ್​ನ ಆ್ಯಂಕರ್​ ಲೈವ್​ನಲ್ಲಿ ಹೇಳಿದ್ದಾರೆ. ಇದು ಅನೇಕರಲ್ಲಿ ಗೊಂದಲ ಸೃಷ್ಟಿ ಮಾಡಿತ್ತು. ಆದರೆ ಮತ್ತೊರ್ವ ವ್ಯಕ್ತಿಯ ಹೆಸರನ್ನು ಬಳಸಿ ಲೈವ್​ನಲ್ಲಿ ಮಾತನಾಡಬೇಕಾಗಿತ್ತು ಎನ್ನುವುದು ನಂತರ ತಿಳಿಯಿತಾದರೂ. ತಾನು ಗೊಂದಲದಲ್ಲಿರುವುದನ್ನು ಆಕೆ ಕೊನೆ ಕ್ಷಣದವರೆಗೆ ತೋರ್ಪಡಿಸಿಲ್ಲ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಇದನ್ನೂ ಓದಿ:
Year Ender 2021: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ 5 ವಿಲಕ್ಷಣ ಆಹಾರ ಸಂಯೋಜನೆ ಯಾವುದು ಗೊತ್ತಾ?

Viral Video: ಯುವತಿ ಮತ್ತು ಸಾಕು ನಾಯಿ ಮೇಲೆ ದಾಳಿ ಮಾಡಿದ ಪಿಟ್ ಬುಲ್; ಮುಂದೇನಾಯ್ತು ನೋಡಿ

Follow us on

Related Stories

Most Read Stories

Click on your DTH Provider to Add TV9 Kannada