Year Ender 2021: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ 5 ವಿಲಕ್ಷಣ ಆಹಾರ ಸಂಯೋಜನೆ ಯಾವುದು ಗೊತ್ತಾ?

ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಲಕ್ಷಣ ಆಹಾರ ಸಂಯೋಜನೆಗಳ ಬಗ್ಗೆಯೂ ನೆನಪು ಮಾಡಿಕೊಳ್ಳಬಹುದು. ನೆಟ್ಟಿಗರು ಮೆಚ್ಚಿಕೊಂಡ ಮತ್ತು ಮಗುಮುರಿದ ಆಹಾರಗಳ ಮೆಲುಕು ಇಲ್ಲಿದೆ ನೋಡಿ.

Year Ender 2021: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ 5 ವಿಲಕ್ಷಣ ಆಹಾರ ಸಂಯೋಜನೆ ಯಾವುದು ಗೊತ್ತಾ?
ವಿಲಕ್ಷಣ ಆಹಾರ
Follow us
TV9 Web
| Updated By: preethi shettigar

Updated on: Dec 25, 2021 | 3:50 PM

ಇನ್ನೇನು ಕೆಲವೇ ದಿನಗಳಲ್ಲಿ 2021 ಅಂತ್ಯಗೊಂಡು ಹೊಸ ವರ್ಷ ಶುರುವಾಗಲಿದೆ. ಆ ಮೂಲಕ ನಮ್ಮೆಲರ 2022ರ ಪಯಣ ಆರಂಭವಾಗಲಿದ್ದು, ವರ್ಷಾಂತ್ಯಕ್ಕೆ ಹಿಂದಿನ 365 ದಿನಗಳಲ್ಲಿ ಏನೆಲ್ಲಾ ನಡೆಯಿತು ಎಂಬ ಬಗ್ಗೆ ಒಂದೆಡೆ ಕುಳಿತು ಯೋಚಿಸುವುದು ಅನಿವಾರ್ಯ. ಅದರಲ್ಲೂ ಅನೇಕರಿಗೆ ಇದೊಂದು ಅಭ್ಯಾಸ. ಮುಂದಿನ ವರ್ಷಕ್ಕೆ ಕಾಲಿಡುವ ಮುನ್ನ ಹಳೆಯ ನೆನಪುಗಳನ್ನು ನೆನೆಯುವುದು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಫೋಟೋ, ವಿಡಿಯೋ ಮೂಲಕ ಒಂದು ವರ್ಷದ ಅನುಭವನ್ನು ನೆನೆಯುತ್ತಿದ್ದಾರೆ. ಹಾಗಿದ್ದರೆ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್​ ಆದ ವಿಲಕ್ಷಣ ಆಹಾರ (bizarre food)  ಸಂಯೋಜನೆಗಳ ಬಗ್ಗೆಯೂ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು. ನೆಟ್ಟಿಗರು ಮೆಚ್ಚಿಕೊಂಡ ಆಹಾರಗಳ ಮೆಲುಕು ಇಲ್ಲಿದೆ ನೋಡಿ.

ಹಸಿ ಮೆಣಸಿನಕಾಯಿ ಐಸ್​ ಕ್ರೀಮ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಖಾದ್ಯಗಳ ವಿಡಿಯೋ ಸಾಕಷ್ಟು ಹರಿದಾಡುತ್ತವೆ. ಅವುಗಳಲ್ಲಿ ಕೆಲವನ್ನು ಜನರು ಇಷ್ಟ ಪಟ್ಟಿದ್ದರೆ ಇನ್ನು ಕೆಲವು ವಿಲಕ್ಷಣ ಆಹಾರ ಸಂಯೋಜನೆಗಳು ಹೆಚ್ಚಿನ ಜನರಿಗೆ ಇಷ್ಟವಾಗುವುದಿಲ್ಲ. ಇಂತಹದ್ದೇ ಒಂದು ಹಸಿ ಮೆಣಸಿನಕಾಯಿ ಐಸ್​ ಕ್ರೀಮ್. ಸ್ಪೂನ್ಸ್ ಆಫ್ ಇಂದೋರ್ 2.0 ಎಂಬ ಯೂಟ್ಯೂಬ್ ಚಾನೆಲ್ ಬೀದಿ ಬದಿ ವ್ಯಾಪಾರಿಯೊಬ್ಬರು ಹಸಿ ಮೆಣಸಿನಕಾಯಿ ಐಸ್ ಕ್ರೀಮ್ ರೋಲ್ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ 76 ಲಕ್ಷಕ್ಕೂ ಹೆಚ್ಚು ವ್ಯೂವ್ಸ್​ ಪಡೆದು ಈ ವಿಡಿಯೋ ವೈರಲ್​ ಆಗಿದೆ. 55 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಇಂದೋರ್ ಮೂಲದ ವ್ಯಾಪಾರಿಯೊಬ್ಬರು ತನ್ನ ರಸ್ತೆಬದಿಯ ಅಂಗಡಿಯಲ್ಲಿ ಹಸಿ ಮೆಣಸಿನಕಾಯಿ ಮತ್ತು ಇತರ ಕೆಲವು ಪದಾರ್ಥಗಳೊಂದಿಗೆ ಐಸ್‌ಕ್ರೀಮ್ ಅನ್ನು ತಯಾರಿಸಿರುವುದನ್ನು ತೋರಿಸಿದೆ. ಈ ಹೊಸ ವಿಧಾನದ ವಿಲಕ್ಷಣ ಆಹಾರ ಸಂಯೋಜನೆಯನ್ನು ನೆಟ್ಟಿಗರು ಇಷ್ಟಪಟ್ಟಿಲ್ಲ. ಈ ತಿನಿಸು ನೋಡಿ ಹಲವರು ಅಸಾಮಾಧಾನ ಹೊರಹಾಕಿದ್ದಾರೆ.

ಫಾಂಟಾ ಆಮ್ಲೆಟ್ ಆಹಾರ ಮಳಿಗೆಗಳು ಮತ್ತು ರೆಸ್ಟೋರೆಂಟ್‌ಗಳು ದಿನದಿಂದ ದಿನಕ್ಕೆ ಹೊಸ ಸಂಯೋಜನೆಗಳನ್ನು ಅಥವಾ ಹೊಸ ಶೈಲಿಯ ಅಡುಗೆಯನ್ನು ತಯಾರಿಸಿ ಗ್ರಾಹಕರನ್ನು ಖುಷಿಪಡಿಸುವ ಪ್ರಯತ್ನ ಮಾಡಿತ್ತವೆ. ಅದರಂತೆ ಸೂರತ್​ನ ಫುಡ್‌ ಸ್ಟಾಲ್‌ ಒಂದರಲ್ಲಿ ಹೊಸ ಪಾಕವಿಧಾನವನ್ನು ಪ್ರಯೋಗಿಸಲಾಗಿದೆ. ಅದುವೆ ಫಾಂಟಾ ಆಮ್ಲೆಟ್​. ಸೂರತ್ ಫುಡ್ ಸ್ಟಾಲ್‌ನಲ್ಲಿ ಫಾಂಟಾ ಆಮ್ಲೆಟ್ ತಯಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬ್ಲಾಗರ್​ ಒಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋವನ್ನು 87,000 ಕ್ಕೂ ಹೆಚ್ಚು ಜನರು ವಿಕ್ಷಿಸಿದ್ದಾರೆ. ಆದರೆ ಇದನ್ನು ಕಂಡ ನೆಟ್ಟಿಗರು ಅಸಹ್ಯಪಟ್ಟುಕೊಂಡಿದ್ದಾರೆ.  ಈ ವಿಡಿಯೋದಲ್ಲಿನ ಅಂಗಡಿಯ ಮಾಲೀಕ ಮಾತ್ರ ಗ್ರಾಹಕರ ಬೇಡಿಕೆ ಮೇರೆಗೆ ಈ ರೀತಿ ಆಮ್ಲೆಟ್​ ಮಾಡಲಾಗುತ್ತಿದೆ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

ಒರಿಯೋ ಬಿಸ್ಕೆಟ್​ನಿಂದ​ ಪಕೋಡಾ ಗುಜರಾತ್​ನ ಅಹಮದಾಬಾದ್​ನಿಂದ ಒರಿಯೋ ಬಿಸ್ಕೆಟ್ ರೆಸಿಪಿ ವೈರಲ್ ಆಗಿದ್ದು, ಇದನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಮೂರು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಕೆಲವರು ತಮಾಷೆ ಮಾಡಿದ್ದರೆ ಇನ್ನು ಕೆಲವರು ವಿಲಕ್ಷಣ ಆಹಾರ ಸಂಯೋಜನೆ ಕಂಡು ಮೂಗು ಮುರಿದಿದ್ದಾರೆ. ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ ಏನೋ ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದರೆ, ಇನ್ನು ಕೆಲವರು ಅಹಮದಾಬಾದ್​ನ ಯಾವ ಸ್ಥಳದಲ್ಲಿ ಮಾರಾಟ ಮಾಡಲಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.  ಆಲೂಗಡ್ಡೆ, ಮೆಣಸು, ಈರುಳ್ಳಿಯಲ್ಲಿ ಪಕೋಡಾ ತಿಂದಿರಬಹುದು. ಆದರೆ ಎಂದಾದರೂ ಒರಿಯೋ ಬಿಸ್ಕೆಟ್​ನಿಂದ ತಯಾರಿಸಿದ ಪಕೋಡಾ ಸವಿದಿದ್ದೀರಾ?  ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿಯಲ್ಲಿದೆ ಒರಿಯೋ ಪಕೋಡ. ವಿಡಿಯೋದಲ್ಲಿ ಗಮನಿಸುವಂತೆ ವ್ಯಾಪಾರಿಯು ಒರಿಯೋ ಪ್ಯಾಕೇಟ್ ತೆಗೆದು ಬಿಸ್ಕೆಟ್​ಗಳನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಬಿಟ್ಟಿದ್ದಾರೆ. ಕಾದ ಎಣ್ಣೆಯಲ್ಲಿ ಕರಿದ ನಂತರ ಬಾಣಲೆಯಿಂದ ತೆಗೆದು ಗ್ರಾಮಹರಿಗೆ ನೀಡಿದ್ದಾನೆ.

ಮಿರಿಂಡಾ ಗೋಲ್​ಗಪ್ಪ ಇದೀಗ ಮಿರಿಂಡಾ ಗೋಲ್​ಗಪ್ಪ ಸರದಿ. ಹೌದು ಸಾಮಾನ್ಯವಾಗಿ ನಾವು ಗೋಲ್​ಗಪ್ಪವನ್ನು ಬೇಯಿಸಿದ ಆಲೂಗೆಡ್ಡೆ, ಈರುಳ್ಳಿ ಮೊದಲಾದವನ್ನು ಹದವಾಗಿ ಬೆರೆಸಿ ತಯಾರಿಸಿದ ರುಚಿಕರ ಮಿಶ್ರಣವನ್ನು ಖಡಕ್ ಪಾನಿಯೊಂದಿಗೆ ಸೇವಿಸಿ ಬಾಯಿ ಚಪ್ಪರಿಸುತ್ತಿದ್ದೆವು. ಆದರೆ ಈಗ ಇದರಲ್ಲೇ ಹೊಸದನ್ನು ಆಹಾರ ಪ್ರಿಯರು ಪ್ರಯತ್ನಿಸಿದ್ದಾರೆ. ಇನ್ಸ್​ಸ್ಟಾಗ್ರಾಮ್​ನಲ್ಲಿ @chatore_broothers ಎಂಬ ಖಾತೆಯಿಂದ ಜೈಪುರದಲ್ಲಿ ಸೆರೆಹಿಡಿಯಲಾದ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮಿರಿಂಡಾ ಗೋಲ್​ಗಪ್ಪ ತಯಾರಿಸಲಾಗಿದೆ. ವಿಡಿಯೋದಲ್ಲಿ ಮಿರಿಂಡಾವನ್ನು ಪಾನಿಯ ಬದಲಿ ಪಾತ್ರೆಯಲ್ಲಿ ಹಾಕುವುದನ್ನು ಕಾಣಬಹುದು. ನಂತರ ಅದರಿಂದಲೇ ಗೋಲ್​ಗಪ್ಪ ತಯಾರಿಸಿ, ನೀಡಲಾಗಿದೆ. ಈ ವಿಡಿಯೋಗೆ ಸುಮಾರು 2.9 ಮಿಲಿಯನ್ ವೀಕ್ಷಣೆಗಳು ಸಿಕ್ಕಿವೆ.

ಟಿಕ್ಕಿ ರಸಗುಲ್ಲಾ ಚಾಟ್ ಬ್ಲಾಗರ್ ಒಬ್ಬಳು ಟಿಕ್ಕಿ ರಸಗುಲ್ಲಾ ಚಾಟ್​ನಾ ರುಚಿ ನೋಡುವ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಬ್ಲಾಗರ್, ಸೇವ್, ಮೊಸರು ಮತ್ತು ಚಟ್ನಿಗಳೊಂದಿಗೆ ಟಿಕ್ಕಿ ರಸಗುಲ್ಲಾ ಚಾಟ್‌ನ ತಟ್ಟೆ ಹಿಡಿದಿರುವುದನ್ನು ಕಾಣಬಹುದು. ಬ್ಲಾಗರ್ ಅಂಜಲಿ ಧಿಂಗ್ರಾ ವಿಲಕ್ಷಣ ಆಹಾರ ಸಂಯೋಜನೆಯನ್ನು ವಿವರಿಸುತ್ತಾ ಈ ವಿಡಿಯೋ ಮಾಡಿದ್ದಾರೆ. ಇನ್ಸ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಆಹಾರವನ್ನು ತಿಂದ ಕೂಡಲೇ ಚೆನ್ನಾಗಿಲ್ಲ ಎನ್ನುವಂತೆ ವರ್ತಿಸಿದ್ದು, ಕಾಣುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್​ ಆಗಿದೆ.

View this post on Instagram

A post shared by Anjali Dhingra (@sooosaute)

ಇದನ್ನೂ ಓದಿ: Top Viral Videos of 2021: ಮನಿಕೆ ಮಾಗೆ ಹಿತೆ ಸೇರಿದಂತೆ 2021ರಲ್ಲಿ ವೈರಲ್​ ಆದ ವೀಡಿಯೋಗಳು ಇಲ್ಲಿವೆ

WhatsApp Year-in-Review 2021: ಈ ವರ್ಷ ವಾಟ್ಸ್​ಆ್ಯಪ್​ ಪರಿಚಯಿಸಿದ ಫೀಚರ್ಸ್ ಯಾವುವು?: ಮುಂದಿನ ವರ್ಷದ ಟಾರ್ಗೆಟ್ ಏನು?