Skin Care Tips: ವಯಸ್ಸಾದಂತೆ ಕಾಣುವ ಚರ್ಮದ ಆರೈಕೆಯ ಬಗ್ಗೆ ಗಮನವಿರಲಿ: ಯಾವ ವಯಸ್ಸಿನವರು ಯಾವ ರೀತಿಯ ಕ್ರಮಗಳನ್ನು ಪಾಲಿಸಬೇಕು? ಇಲ್ಲಿದೆ ಮಾಹಿತಿ

ದಿನಚರಿಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ನಿಮ್ಮ ಚರ್ಮದ ಸಮಸ್ಯೆ ಪರಿಹಾರವಾಗುತ್ತದೆ.  ಇದಕ್ಕೆ ಸೂರತ್​ ನ ವೈದ್ಯರೊಬ್ಬರು ಯಾವ ವಯಸ್ಸಿನವರು  ಯಾವ ರೀತಿಯಲ್ಲಿ ಚರ್ಮವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು ಎಂದು ಮಾಹಿತಿ  ನೀಡಿದ್ದಾರೆ.

Skin Care Tips: ವಯಸ್ಸಾದಂತೆ ಕಾಣುವ ಚರ್ಮದ ಆರೈಕೆಯ ಬಗ್ಗೆ ಗಮನವಿರಲಿ: ಯಾವ ವಯಸ್ಸಿನವರು ಯಾವ ರೀತಿಯ ಕ್ರಮಗಳನ್ನು ಪಾಲಿಸಬೇಕು? ಇಲ್ಲಿದೆ ಮಾಹಿತಿ
ಸಂಗ್ರಹ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Dec 25, 2021 | 11:24 AM

ದಿನನಿತ್ಯದ ಕೆಲಸದ ಒತ್ತಡ, ಧೂಳು, ಬಿಸಿಲಿಗೆ ಮಖವನ್ನು ಒಡ್ಡಿಕೊಳ್ಳುವುದು, ಟೆನ್ಶನ್​ಗಳಿಂದ ಇತ್ತೀಚಿನ ದಿನಗಳಲ್ಲಿ  ಯುವಜನತೆಯ ಚರ್ಮ ಸಮಸ್ಯೆ ಎದುರಿಸುತ್ತಿದ್ದಾರೆ. ಮುಖದ ಮೇಲೆ ಸೂಕ್ಷ್ಮ ಗೆರೆಗಳು, ಪಿಗ್ಮೆಂಟೇಶನ್​ನಂತಹ ಸಮಸ್ಯೆಗಳು ಎದುರಾಗುತ್ತಿವೆ. 25 ವರ್ಷಕ್ಕೆ ಮುಖದ ಚರ್ಮ 70 ವರ್ಷದವರ ಹಾಗೆ ಕಾಣುತ್ತದೆ. ಹೀಗಾಗಿ ಇದನ್ನು ತಡೆಯಲು ನೀವು ಒಂದಷ್ಟು ತ್ಚಚೆಯ ಬಗ್ಗೆ ಕಾಳಜಿವಹಿಸಲೇಬೇಕು. ಜತೆಗೆ ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ನಿಮ್ಮ ಚರ್ಮದ ಸಮಸ್ಯೆ ಪರಿಹಾರವಾಗುತ್ತದೆ. ಇದಕ್ಕೆ ಸೂರತ್​ ನ ವೈದ್ಯರೊಬ್ಬರು ಯಾವ ವಯಸ್ಸಿನವರು  ಯಾವ ರೀತಿಯಲ್ಲಿ ಚರ್ಮವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು ಎಂದು ಮಾಹಿತಿ  ನೀಡಿದ್ದಾರೆ.

20 ವರ್ಷ ವಯಸ್ಸಿನವರು ಸಾಮಾನ್ಯವಾಗಿ 20ರ ಹರೆಯದಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಅದರ ಬಗ್ಗೆ ಚಿಂತಿಸುವುದಕ್ಕಿಂತ ತಡೆಗಟ್ಟುವ ಕುರಿತು ಯೋಚಿಸಿ. ಈ ವಯಸ್ಸಿನಲ್ಲಿ ಮೊಡವೆಗಳು, ಧೂಳಿನಿಂದ ಕಾಂತಿ ಕಳೆದುಕೊಂಡ ಚರ್ಮ,ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇವು ಹಾರ್ಮೋನ್​ಗಳ ಬದಲಾವಣೆಯಿಂದಲೂ ಆಗಿರಬಹುದು. ಹೀಗಾಗಿ ಆರೋಗ್ಯಯುತ ಆಹಾರ ಸೇವನೆ ಅಭ್ಯಾಸ ಮಾಡಿಕೊಳ್ಳಿ. ಮಲಗುವ ಮೊದಲು ನಿಮ್ಮ ಮೇಕ್​ ಅಫ್​ಅನ್ನು ತೆಗೆಯಿರಿ. ಬಳಿಕ ಮುಖವನ್ನು ಸ್ವಚ್ಛಗೊಳಿಸಿ ಎಣ್ಣೆಯಿಂದ ಮಸಾಜ್​ ಮಾಡಿಕೊಳ್ಳಿ. ಬಿಸಿಲಿಗೆ ಮುಖವನ್ನು ಒಡ್ಡಿಕೊಂಡಾಗ ಟ್ಯಾನಿಂಗ್​, ದದ್ದು, ತುರಿಕೆಯಂತಹ ಸಮಸ್ಯೆ ಕಾಡಬಹುದು. ಹೀಗಾಗಿ ಮನೆಯಿಂದ  ಹೊರಗೆ ಹೋಗುವಾಗ ತಪ್ಪದೇ ಸನ್​ ಸ್ಕ್ರೀನ್​ ಬಳಸಿ. ಆದರೆ ನೆನಪಿಡಿ ನೀವು ಬಳಸುವ ಸನ್​ ಸ್ಕ್ರೀನ್​ ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ಈ ವಯಸ್ಸಿನಲ್ಲಿ ಚರ್ಮದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಕಾಳಜಿಯಿಂದಲೂ ಚರ್ಮದ ಸಮಸ್ಯೆ ಸರಿಹೋಗದಿದ್ದರೆ ಸ್ಕಿನ್​ ಕೇರ್​ ವೈದ್ಯರನ್ನ ಸಂಪರ್ಕಿಸಿ. ದಿನಕ್ಕೆ 2-3 ಲೀ ನೀರು ಕುಡಿಯಿರಿ. ನೀರು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.

30 ವರ್ಷದವರು ಚರ್ಮಕ್ಕೆ ಸಂಬಂಧಿಸಿದ  ತೊಂದರೆಗಳು ಈ ವಯಸ್ಸಿನಲ್ಲಿ ಹೆಚ್ಚಾಗಿ ಕಾಣಿಸಕೊಳ್ಳುತ್ತದೆ. ದೇಹದಲ್ಲಿ ಚಯಾಪಚಯಗಳು ನಿಧಾಗೊಳ್ಳುತ್ತವೆ ಹೀಗಾಗಿ ನೀವು ಸರಿಯಾದ ಪೋಷಣೆಯಿರುವ ಆಹಾರದ ಸೇವನೆಯನ್ನು ಅಭ್ಯಸಿಸಿಕೊಳ್ಳಿ. ಈ ವಯಸ್ಸಿನಲ್ಲಿ ನಿಮ್ಮ ದೇಹಕ್ಕೆ ಹೆಚ್ಚು ಪೋಷಕಾಂಶವುಳ್ಳ ಆಹಾರ ಅಗತ್ಯ. ಆದ್ದರಿಂದ ಸೊಪ್ಪು, ತರಕಾರಿ, ಕಾಳುಗಳನ್ನು ಹೆಚ್ಚು ಸೇವಿಸಿ. ಇವು ನಿಮ್ಮ ತ್ವಚೆಯ ಆರೋಗ್ಯವನ್ನೂ ಉತ್ತಮಗೊಳಿಸುತ್ತವೆ. ಆದಷ್ಟು ಸ್ಕಿನ್​ ಕೇರ್​ ವೈದ್ಯರೊಂದಿಗೆ ಸಂಪರ್ಕದಲ್ಲಿರಿ. ಇದರಿಂದ ನಿಮ್ಮ ಚರ್ಮ ಸುಕ್ಕುಗಟ್ಟುವಿಕೆ ಅಥವಾ ನೆರಿಗೆಗಳು ಮೂಡದಂತೆ ತಪ್ಪಿಸಬಹುದು. ನಿಯಮಿತವಾಗಿ ಫೇಸ್​ ಪ್ಯಾಕ್​ ಅಥವಾ 15 ದಿನಕ್ಕೆ ಒಮ್ಮೆಯಾದರೂ ಫೇಸ್​ ಸ್ಕೃಬ್​ ಮಾಡುತ್ತಿರಿ.

40 ವರ್ಷದವರು ಚರ್ಮ ಸುಕ್ಕುಗಟ್ಟುವಿಕೆ, ಮುಖದ ಕಾಂತಿ ಕಡಿಮೆಯಾಗುವ ವಯಸ್ಸು 40ರ ಹರೆಯ. ಹೀಗಾಗಿ ದೇಹದ ತೂಕದ ಕಡೆಗೆ ಹೆಚ್ಚು ಗಮನ ನೀಡಿ. ಇದು ನಿಮ್ಮ ಚರ್ಮವನ್ನು ಆರೋಗ್ಯಯುತವಾಗಿಡುವಂತೆ ಮಾಡುತ್ತದೆ. ಈ ವಯೋಮಾನದಲ್ಲಿ ಧನಾತ್ಮಕ ಚಿಂತನೆಯೂ ಅಗತ್ಯ. ಹೀಗಾಗಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ತಿಂಗಳಿಗೊಮ್ಮೆಯಾದರೂ ಸ್ಕಿನ್​ ವೈದ್ಯರನ್ನು ಭೇಟಿ ಮಾಡಿ. ಅಗತ್ಯವಿದ್ದರೆ ಚರ್ಮಕ್ಕೆ ಸಂಬಂಧಿಸಿದ ಕೆಲವು ಚಿಕಿತ್ಸೆಗಳಿಗೆ ಒಳಗಾಗಿ. ಜತೆಗೆ ಹಸಿರು ತರಕಾರಿ, ಸೊಪ್ಪು, ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿ. ಹೆಚ್ಚು ನೀರನ್ನು ಕುಡಿಯಿರಿ.

ಇದನ್ನೂ ಓದಿ:

ಡಯಟ್​ ನೆಪದಲ್ಲಿ ಅನ್ನ ಸೇವಿಸುವುದನ್ನು ಕಡಿಮೆ ಮಾಡಿದ್ದೀರಾ? ಇಂದೇ ಈ ತಪ್ಪು ಕಲ್ಪನೆಯನ್ನು ದೂರ ಮಾಡಿ

Published On - 11:20 am, Sat, 25 December 21