Year Ender 2021: ಈ ವರ್ಷ ಅತಿ ಹೆಚ್ಚು ಬಳಕೆಯಾದ ಎಮೋಜಿಗಳು ಯಾವೆಲ್ಲಾ ಗೊತ್ತಾ? ಇಲ್ಲಿದೆ ಸ್ಟೋರಿ
ಯುನಿಕೊಡ್ ಕನ್ಸೋರ್ಟಿಯಮ್ ಎನ್ನುವ ಸಂಸ್ಥೆ 2021ರಲ್ಲಿ ಅತಿ ಹೆಚ್ಚು ಬಳಕೆಯಾದ ಎಮೋಜಿ ಯಾವುದೆಂದು ಸರ್ವೆಯೊಂದನ್ನು ಕೈಗೊಂಡಿತ್ತು. ಜನ ಹೆಚ್ಚು ಬಳಕೆ ಮಾಡಿದ ಎಮೋಜಿಗಳನ್ನು ಪಟ್ಟಿಮಾಡಿದೆ.
2021 ಮುಗಿಯುತ್ತಿದೆ. ಇನ್ನು ಬೆರಳೆಣಿಕೆಯಷ್ಟು ದಿನ ಕಳೆದರೆ 2022 ಹೊಸ್ತಿಲಲ್ಲಿ ನಾವೆಲ್ಲ ಇರುತ್ತೇವೆ. ಈ ವರ್ಷ ಕೊರೋನಾ ಕಾರಣದಿಂದ ಅರ್ಧ ವರ್ಷ ಮನೆಯಲ್ಲಿಯೇ ಕಳೆದಿದ್ದಾಗಿದೆ. ಹೀಗಿದ್ದಾಗ ಮೊಬೈಲ್, ಸಾಮಾಜಿಕ ಜಾಲತಾಣಗಳನ್ನು ತುಸು ಹೆಚ್ಚಾಗಿಯೇ ಬಳಸಿದ್ದೇವೆ. ಹೀಗೆ ಫೋನ್ ಕಾಲ್ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮವರನ್ನು ಸಂಪರ್ಕಿಸಿದ್ದೇವೆ, ಮಾತನಾಡಿದ್ದೇವೆ, ವಿಷಯ, ವಿಚಾರಗಳನ್ನು ಹಂಚಿಕೊಂಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವಾಗ ಹೆಚ್ಚು ಎಮೋಜಿಗಳನ್ನು ಬಳಸುತ್ತೇವೆ. ಎಮೋಜಿಗಳು ನಮ್ಮ ದೈನಂದಿನ ಜೀವನದ ಒಂದು ಭಾಗವೇ ಆಗಿ ಹೋಗಿವೆ. ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ ಆಫ್, ಟ್ವಿಟರ್ ಹೀಗೆ ಹಲವು ತಾಣಗಳನ್ನು ಪ್ರತಿದಿನ ಬಳಸುತ್ತೇವೆ. ಸಂದೇಶ ಕಳುಹಿಸುವಾಗ ನಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಎಮೋಜಿಗಳನ್ನು ಬಳಸುತ್ತೇವೆ. ಆದ್ದರಿಂದ ಚಾಟಿಂಗ್ ವೇಳೆ ಎಮೋಜಿಗಳ ಪಾತ್ರ ದೊಡ್ಡದೇ ಆಗಿದೆ.
ಯುನಿಕೊಡ್ ಕನ್ಸೋರ್ಟಿಯಮ್ ಎನ್ನುವ ಸಂಸ್ಥೆ 2021ರಲ್ಲಿ ಅತಿ ಹೆಚ್ಚು ಬಳಕೆಯಾದ ಎಮೋಜಿ ಯಾವುದೆಂದು ಸರ್ವೆಯೊಂದನ್ನು ಕೈಗೊಂಡಿತ್ತು. ಈ ಸಂಸ್ಥೆಯು ಇಂಟರ್ನ್ಯಾಷನಲ್ ಬೈ ಡೈರೆಕ್ಷನ್ ಫಾರ್ ಆಲ್ಗರಿದಮ್ ಫಾರ್ ಲ್ಯಾಂಗ್ವೇಜ್ ಕೋಡಿಂಗ್ಸಿಸ್ಟಮ್ಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಮಾಡುತ್ತದೆ. ಹೀಗಾಗಿ ಈ ಸಂಸ್ಥೆ 2021ರಲ್ಲಿ ಜನ ಹೆಚ್ಚು ಬಳಕೆ ಮಾಡಿದ ಎಮೋಜಿಗಳನ್ನು ಪಟ್ಟಿಮಾಡಿದೆ. ಅದರಲ್ಲಿ ಸಂತೋಷದ ಕಣ್ಣೀರಿನ ಎಮೋಜಿಗೆ ಮೊದಲ ಸ್ಥಾನ ದೊರಕಿದ್ದು, ಹೃದಯದ ಎಮೋಜಿಗೆ ಎರಡನೇ ಸ್ಥಾನ ದೊರಕಿದೆ.
ಯುನಿಕೊಡ್ ಕನ್ಸೋರ್ಟಿಯಮ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ 2021ರಲ್ಲಿ ಅತಿ ಹೆಚ್ಚು ಮಂದಿ ಸಂತೋಷದ ಕಣ್ಣೀರಣ ಎಮೋಜಿಯನ್ನು ಬಳಸಿದ್ದಾರಂತೆ . ಇನ್ನು ಹೃದಯದ ಎಮೋಜಿ ಎರಡನೇ ಸ್ಥಾನದಲ್ಲಿದೆ. ನೆಲದ ಮೇಲೆ ಬೀಳುತ್ತಾ ನಗುವುದು, ಥಂಬ್ಸ್ ಅಫ್ ಎಮೋಜಿಗಳು ನಂತರದ ಸ್ಥಾನದಲ್ಲಿದೆ. ಹೃದಯದಿಂದ ನಗುತ್ತಿರುವ ಮುಖ,ಹೊಳೆಯುವ ಕಣ್ಣುಗಳನ್ನುಹೊಂದಿರುವ ಎಮೋಜಿಗಳು ನಂತರದ ಸ್ಥಾನದಲ್ಲಿದೆ. ಪುಷ್ಪಗುಚ್ಚದ ಎಮೋಜಿಯೂ ಮುಂಚೂಣಿಯಲ್ಲಿದ್ದು, ಚಿಟ್ಟೆ ಎಮೋಜಿಯನ್ನು ಬಳಕೆದಾರರು ಹೆಚ್ಚು ಬಳಸಿದ್ದಾರೆ. ಇನ್ನು ಬರ್ತಡೇ ಕೇಕ್, ಬಲೂನ್ ಮತ್ತು ಕೋತಿಯ ಎಮೋಜಿಯನ್ನು ಜನ ಹೆಚ್ಚು ಬಳಸಿದ್ದಾರೆ ಎಂದು ವರದಿಯಲ್ಲಿ ಕಂಡುಬಂದಿದೆ.
ಸಂದೇಶಗಳಲ್ಲಿ ಎಮೋಜಿಗಳಿಂದ ಹೆಚ್ಚಿನ ಭಾವನೆಯನ್ನು ವ್ಯಕ್ತಪಡಿಸಬಹುದಾಗಿದೆ. ಹೀಗಾಗಿ ಬಳಕೆದಾರರು ಮಾತಿಗಿಂತ ಎಮೋಜಿಗಳನ್ನೇ ಹೆಚ್ಚು ಬಳಕೆ ಮಾಡಿ ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ದಿನದಿಂದ ಜಾಲತಾಣಗಳೂ ಕೂಡ ಹೊಸ ಹೊಸ ಅಪ್ಡೇಟ್ ಬಿಡುವ ಮೂಲಕ ನೂರಾರು ಎಮೋಜಿಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಹೀಗಾಗಿ ಬಳಕೆದಾರರು ತಾವಂದುಕೊಂಡಿದ್ದನ್ನು ಹೇಳುವ ಪ್ರತೀ ಸಂದೇಶಕ್ಕೂ ಎಮೋಜಿಗಳನ್ನು ಸೇರಿಸಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ:
ಪಂಜಾಬಿ ಹಾಡಿಗೆ ಹೆಜ್ಜೆ ಹಾಕಿದ ನವದಂಪತಿ; ವಿಡಿಯೋ ವೈರಲ್
Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು; ಈ ವರ್ಷ ಗೆದ್ದವರು ವಿರಳ, ಸೋತವರು ಬಹಳ