Marriage Tips: ಸುಂದರ ದಾಂಪತ್ಯ ಬದುಕಿಗೊಂದಿಷ್ಟು ಸಿಂಪಲ್ ಟಿಪ್ಸ್
ನಿಮ್ಮ ಸಂಗಾತಿಯೊಂದಿಗಿನ ಬದುಕು ಮತ್ತಷ್ಟು ಸುಂದರವಾಗಿರಬೇಕು ಎಂದರೆ ನೀವು ಕೆಲವು ಅಂಶಗಳನ್ನು ನಿಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲಿವೆ ನೋಡಿ ಕೆಲವು ಟಿಪ್ಸ್ಗಳು.
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಘಟಿಸುವ ಸುಂದರ ಕ್ಷಣ. ಒಂಟಿತನದ ಬದುಕಿಗೊಂದು ಅಲ್ಪವಿರಾಮ ನೀಡಿ ಸಂಗಾತಿಯೊಂದಿಗೆ ಜೀವನ ಹಂಚಿಕೊಂಡು ಮುಂದೆ ಸಾಗುವ ಹಂತ. ಹೀಗಾಗಿ ಹೊಸ ಬದುಕು, ಹೊಸ ಜನರ ಪರಿಸರಕ್ಕೆ ಹೊಂದಿಕೊಳ್ಳುವುದು ಇಬ್ಬರಿಗೂ ಸ್ವಲ್ಪ ಸಮಯಗಳ ಕಾಲ ಸವಾಲಿನ ವಿಷಯವೇ ಸರಿ. ಆದರೆ ಆ ಹೊಂದಾಣಿಕೆಯಲ್ಲೇ ನಿಜವಾದ ಖುಷಿ ಅಡಗಿರುವುದು. ಒಬ್ಬರ ನೋವು, ಖುಷಿ, ಯೋಚನೆಯನ್ನು ಇನ್ನೊಬ್ಬರು ಹಂಚಿಕೊಂಡು, ಅರ್ಥಮಾಡಿಕೊಂಡರೆ ಲೈಫ್ ಈಸ್ ಬ್ಯೂಟಿಫುಲ್ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ನೆನಪಿಡಿ ಇಬ್ಬರಿಗೂ ಹೊಸ ಬದುಕಿನ ಆರಂಭವಾಗಿರುತ್ತದೆ. ದಾಂಪತ್ಯ ಖುಷಿಯಿಂದ ನಡೆಯಬೇಕಾದರೆ ನೀವು ಒಂದಷ್ಟು ತ್ಯಾಗಗಳಿಗೆ, ಹೊಂದಾಣಿಕೆಗೆ ಒಡ್ಡಿಕೊಳ್ಳಲೇಬೇಕು. ವಯಸ್ಸು ಮಾಗಿದರೂ ನಿಮ್ಮಿಬ್ಬರ ಸಂಬಂಧ ಹೊಸದರಂತೆ ಇಟ್ಟುಕೊಳ್ಳಲು ಸಾಧ್ಯವಾಗುವುದೇ ಹೊಂದಾಣಿಕೆಯಿಂದ. ಹೀಗಾಗಿ ನಿಮ್ಮ ಸಂಗಾತಿಯೊಂದಿಗಿನ ಬದುಕು ಮತ್ತಷ್ಟು ಸುಂದರವಾಗಿರಬೇಕು ಎಂದರೆ ನೀವು ಕೆಲವು ಅಂಶಗಳನ್ನು ನಿಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲಿವೆ ನೋಡಿ ಕೆಲವು ಟಿಪ್ಸ್ಗಳು.
ಮನೆಯಿಂದ ಹೊರಹೊರಡುವಾಗ ತಪ್ಪದೇ ಬಾಯ್ ಹೇಳಿ ಸಂಗಾತಿಯ ಸನಿಹ ಇದ್ಷ್ಟೂದ ಸಾಲದು. ಹೀಗಾಗಿ ನೀವು ಮನೆಯಿಂದ ಹೊರಹೊರಟ ವೇಳೆ ಬೇಸರವಾಗುವುದು ಸಹಜ. ಆಗ ನೀವು ಒಂದು ಪ್ರೀತಿಯ ಅಪ್ಪುಗೆಯನ್ನು ನೀಡಲು ಮರೆಯದಿರಿ. ಇದಕ್ಕೆ ಹೆಚ್ಚೇನು ಸಮಯ ವ್ಯಯಿಸಬೇಕೆಂದಿಲ್ಲ. ಒಂದು ಮುಗಳ್ನಗೆ, ಒಂದು ಅಪ್ಪುಗೆ, ಒಂದು ಸಿಹಿ ಮುತ್ತಿನೊಂದಿಗೆ ಬಾಯ್ ಹೇಳಿ ಹೊರಟರೆ ಅದು ಇಡೀ ದಿನದ ಖುಷಿಗೆ ಕಾರಣವಾಗುತ್ತದೆ. ನಿಮಗೂ ನಿಮ್ಮ ಸಂಗಾತಿಯ ಮುಖದಲ್ಲಿನ ನಗು ಕೆಲಸ ಮಾಡಲು ಹೊಸ ಹುರುಪು ನೀಡುತ್ತದೆ.
ಸಂಗಾತಿಯ ಮಾತುಗಳನ್ನು ಗೌಪ್ಯವಾಗಿಟ್ಟುಕೊಳ್ಳಿ ನಿಮ್ಮ ಸಂಗಾತಿ ನಿಮ್ಮೊಂದಿಗೆ ಹಂಚಿಕೊಂಡ ವಿಷಯ ಎಷ್ಟೇ ಚಿಕ್ಕದಾಗಿರಲಿ. ಅದನ್ನು ಗೌಪ್ಯವಾಗಿಟ್ಟುಕೊಳ್ಳಿ. ಯಾಕೆಂದರೆ ನಿಮಗೆ ಸಿಲ್ಲಿ ಎನಿಸಿದ ವಿಷಯಗಳು ಅವರ ಪಾಲಿಗೆ ಗಂಭೀರವಾಗಿರಬಹದು. ಹೀಗಾಗಿ ಸಾರ್ವಜನಿಕವಾಗಿ ಮಾತನಾಡುವಾಗ ಅವುಗಳ ಬಗ್ಗೆ ಗಮನವಿರಲಿ. ನೀವು ಅವರ ವಿಷಯಗಳನ್ನು ಗೌಪ್ಯವಾಗಿಟ್ಟುಕೊಂಡರೆ ನಿಮ್ಮ ಮೇಲಿನ ನಂಬಿಕೆ ಇಮ್ಮಡಿಗೊಳ್ಳುತ್ತದೆ. ನಿಮ್ಮ ದಾಂಪತ್ಯವೂ ಸುಂದರವಾಗಿರುತ್ತದೆ.
ತಪ್ಪುಗಳನ್ನು ಹೇಳುವಾಗ ತಾಳ್ಮೆವಹಿಸಿ ತಪ್ಪು ಮಾಡುವುದು ಮಾನವ ಸಹಜ ಗುಣ. ಹೀಗಾಗಿ ನಿಮ್ಮ ಸಂಗಾತಿಯಿಂದ ತಪ್ಪಾಗಿದ್ದರೆ ಅದನ್ನು ತಾಳ್ಮೆಯಿಂದ ತಿಳಿ ಹೇಳಿ. ಅವರ ಒಳ್ಳೆಯ ಗುಣಗಳನ್ನು ಮೊದಲು ಹೇಳಿಕೊಳ್ಳಿ ನಂತರ ಅವರ ತಪ್ಪನ್ನು ನಿಧಾನವಾಗಿ ಅರ್ಥೈಸಿ. ಆಗ ಅನಗತ್ಯವಾದ ಜಗಳಕ್ಕೆ ಬ್ರೆಕ್ ಬೀಳುತ್ತದೆ. ನಿಮ್ಮ ತಾಳ್ಮೆವಹಿಸಿದಷ್ಟು ನಿಮ್ಮ ಸಂಗಾತಿಗೆ ತಿಳಿ ಹೇಳಬಹುದು.
ಡೇಟಿಂಗ್ ಹೋಗುವುದನ್ನೂ ಎಂದಿಗೂ ನಿಲ್ಲಿಸಬೇಡಿ ಮದುವೆಗೂ ಮೊದಲು ಡೇಟಿಂಗ್ ಹೋಗುವುದು ಸಹಜ. ಒಬ್ಬಿರಿಗೊಬ್ಬರು ಅರ್ಥಮಾಡಿಕೊಳ್ಳಲು, ಯೋಚನೆ, ಭವಿಷ್ಯದ ಚಿಂತನೆ ಎಲ್ಲವನ್ನೂ ಚರ್ಚಿಸಲು ಡೇಟಿಂಗ್ ಉತ್ತಮ ಸಮಯ. ಹೀಗಾಗಿ ಇದು ಮದುವೆಯಾದ ಮೇಲೂ ಮುಂದುವರೆದರೆ ಒಳ್ಳೆಯದು. ಡೇಟಿಂಗ್ ಹೋಗುವುದರಿಂದ ನಿಮಗೆ ಹೆಚ್ಚಿನ ಪ್ರೈವಸಿ ಇರುತ್ತದೆ. ಅಲ್ಲಿ ನೀವಿಬ್ಬರೇ ಇರುವ ಕಾರಣ, ಇಬ್ಬರ ನಡುವೇಯೇ ಸಂಭಾಷಣೆ ನಡೆಯುತ್ತದೆ. ಇದರಿಂದ ನಿಮ್ಮ ನಡುವೆ ಬೆಳೆದ ಮನಸ್ತಾಪಗಳು, ಭವಿಷ್ಯದ ಚಿಂತನೆಗಳು ತೆರೆದುಕೊಂಡು ಮನಸ್ಸು ತಿಳಿಯಾಗುತ್ತದೆ.
ಕೋಪಗೊಂಡಾಗ ತಕ್ಷಣ ಪ್ರತಿಕ್ರಿಯಿಸಬೇಡಿ ದಾಂಪತ್ಯದಲ್ಲಿ ಸಿಟ್ಟು, ಜಗಳ ಎಲ್ಲವೂ ಇರುವಂತದ್ದೇ. ಹಾಗೆಂದ ಮಾತ್ರಕ್ಕೆ ನೀವು ಕೋಪದಿಂದ ಇರುವಾಗ ತಕ್ಷಣ ಪ್ರತಿಕ್ರಯಿಸಬೇಡಿ. ಇದನ್ನು ನಿಮ್ಮ ಸಂಗಾತಿಗೆ ಹರ್ಟ್ ಮಾಡಬಹುದು. ಸಿಟ್ಟನ್ನು ಕಂಟ್ರೋಲ್ ಮಾಡಿ ಯೋಚಿಸಿ ಮಾತನಾಡಿ. ಅಸಮಧಾನ ಅಥವಾ ಜಗಳವಾದಾಗ ಕೋಪಗೊಂಡು ಮಾತನಾಡುವ ಬದಲು ಆ ಸ್ಥಳದಿಮದ ಎದ್ದು ಹೋಗಿ. ಮನಸ್ಸು ತಿಳಿಯಾದ ಮೇಲೆ ಮತ್ತೆ ನಿಧಾನವಾಗಿ ಕುಳಿತು ನಡೆದ ಘಟನೆಯ ಬಗ್ಗೆ ಮಾತನಾಡಿಕೊಳ್ಳಿ. ಕೋಪದ ಸಂಭಾಷಣೆ ನಿಮ್ಮ ಸಂಬಂಧವನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಆದ್ದರಿಂದ ಆದಷ್ಟು ಚರ್ಚಿಸುವಾಗ ಕೂಲ್ ಆಗಿರಿ.
ಸಂಗಾತಿಯನ್ನು ಬದಲಾಯಿಸಲು ಪ್ರಯತ್ನಿಸಬೇಡಿ ಮತ್ತು ಅವರೇ ನಿಮ್ಮ ಮೊದಲ ಆದ್ಯತೆಯಾಗಿರಲಿ ಜೀವನದ ಮಧ್ಯೆ ನಿಮ್ಮ ಸಂಗಾತಿ ಜತೆಯಾಗುತ್ತಾರೆ. ಅಷ್ಟರೊಳಗೆ ಅವರು ಅವರ ವ್ಯಕ್ತಿತ್ವನ್ನು ರೂಪಿಸಿಕೊಂಡಿರುತ್ತಾರೆ. ಹೀಗಾಗಿ ಮದುವೆಯ ಬಳಿಕ ಅವರನ್ನು ಬದಲಾಯಿಸಲು ಪ್ರಯತ್ನಿಸಬೇಡಿ. ಅದುಅವರಿಗೆ ಕಿರಿಕಿರಿಯಾಗಬಹುದು. ಅವರ ಇಷ್ಟದಂತೆ ಅವರಿಗೆ ಇರಲು ಬಿಡಿ. ಇನ್ನೊಂದು ಮುಖ್ಯ ಅಂಶವೆಂದರೆ ನಿಮ್ಮ ಸಂಗಾತಿ ನಿಮ್ಮ ಮೊದಲ ಆದ್ಯತೆಯಾಗಿರಲಿ. ನಿಮ್ಮ ಯಾವುದೇ ಯೋಚನೆಗಳ ಬಗ್ಗೆ ಅವರಿಗೆ ಮೊದಲು ತಿಳಿಸಿ. ನಿಮ್ಮ ಕೆಲಸದ ಒತ್ತಡದಲ್ಲೂ ಅವರಿಗೆ ಒಂದಷ್ಟು ಸಮಯ ಮೀಸಲಿಡಿ. ಇದರಿಂದ ನಿಮ್ಮ ಸಂಗಾತಿಗೆ ಇನ್ ಸೆಕ್ಯೂರಿಟಿ ಫೀಲ್ ಆಗುವುದಿಲ್ಲ. ಸಂಗಾಂತಿ ಸದಾ ನಮ್ಮೊಂದಿಗೆ ಇರುತ್ತಾರೆ ಎನ್ನುವ ನಂಬಿಕೆ ಅವರಿಗೂ ಮೂಡುತ್ತದೆ.
ಡಿವೋರ್ಸ್ ವಿಚಾರ ಎತ್ತಲೇಬೇಡಿ, ಕನಸುಗಳಿಗೆ ಉಸಿರಾಗಿರಿ ದಾಂಪತ್ಯದಲ್ಲಿ ತಮಾಷೆಗೂ ವಿಚ್ಛೇದನದ ವಿಚಾರ ಬರದಿರಲಿ. ಇದು ನಿಮ್ಮ ಸಂಬಂಧದಲ್ಲಿ ಬಿರುಗಳಿಯನ್ನೇ ಎಬ್ಬಿಸಬಹುದು. ನಿಮ್ಮ ನಡುವಿನ ಸಣ್ಣ ಪುಟ್ಟ ವಿಚಾರಗಳಿಗೂ ವಿಚ್ಚೇದನ ನೀಡುತ್ತೆನೆ ಎಂದು ಹೆದರಿಸುವುದು ಒಳ್ಳೆಯದಲ್ಲ. ಅದರ ಬದಲು ಬೇರೆ ಯಾವ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಕುಳಿತು ಯೋಚಿಸಿ. ನಿಮ್ಮ ಸಂಗಾತಿಯ ಕನಸುಗಳನ್ನು ಪ್ರೋತ್ಸಾಹಿಸಿ. ಸಾಧನೆಯ ಹಾದಿಗೆ ನೆರವಾಗಿರಿ. ಇದು ನಿಮ್ಮ ಜೀವನವನ್ನು ಮತ್ತಷ್ಟು ಉತ್ತಮ ಹಂತಕ್ಕೆ ಕರೆದೊಯ್ಯತ್ತದೆ.
ಇದನ್ನೂ ಓದಿ:
Published On - 12:43 pm, Sat, 25 December 21