AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ಸಂಗಾತಿಯೊಂದಿಗಿನ ಸುಂದರ ಬದುಕಿನ ಪುಸ್ತಕಕ್ಕೆ ಈ ಅಂಶಗಳನ್ನು ಸೇರಿಸಿಕೊಳ್ಳಿ:ಖುಷಿಯ ದಿನಗಳನ್ನು ವೆಲ್​ಕಮ್​ ಮಾಡಿ

ಸಂಗಾತಿಯೊಂದಿಗೆ ಆಗಾಗ ಮನಸ್ಥಾಪಗಳು ಬರುವುದು ಸಹಜ ಅದನ್ನು ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ನಿಮ್ಮಲ್ಲಿರಬೇಕು. ಆಗ ಮಾತ್ರ ಬದುಕಿನ ಖುಷಿಯ ಬಾಗಿಲು ತೆರೆದುಕೊಳ್ಳುತ್ತದೆ.

Relationship Tips: ಸಂಗಾತಿಯೊಂದಿಗಿನ ಸುಂದರ ಬದುಕಿನ ಪುಸ್ತಕಕ್ಕೆ ಈ ಅಂಶಗಳನ್ನು ಸೇರಿಸಿಕೊಳ್ಳಿ:ಖುಷಿಯ ದಿನಗಳನ್ನು ವೆಲ್​ಕಮ್​ ಮಾಡಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Dec 24, 2021 | 9:06 AM

Share

ಸಂಬಂಧಗಳು ನೀರಿನ ಮೇಲಿನ ಗುಳ್ಳೆಗಳಿದ್ದಂತೆ. ಒಂದು ಬಾರಿ ಒಡೆದರೆ ಸರಿಪಡಿಸಲಾಗದಷ್ಟು ಅನರ್ಥಗಳಾಗುತ್ತವೆ. ಒಂದು ಸಣ್ಣ ತಪ್ಪು ತಿಳುವಳಿಕೆ ಜೀವನದ ಅಡಿಪಾಯನ್ನೇ ಅಲುಗಾಡಿಸಬಹುದು. ಹೀಗಾಗಿ ಸಂಗಾತಿಯೊಂದಿಗಿನ ಸಂಬಂಧವನ್ನು ಜತನವಾಗಿ ಕಾಪಿಟ್ಟುಕೊಳ್ಳುವತ್ತ ಹೆಚ್ಚಿನ ಗಮನ ನೀಡಿ. ಬದುಕಿನ ಭಾಗವಾಗಿರುವ ನಿಮ್ಮ ಸಂಗಾತಿಯ ಮನಸ್ಥಿತಿಯನ್ನು ಅರಿತುಕೊಳ್ಳಿ, ನಂಬಿಕೆಯನ್ನು ಗಳಿಸಿ ಇದು ನಿಮ್ಮ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇಬ್ಬರ ನಡುವೆ ಪ್ರೀತಿಯ ಬುನಾದಿ ಗಟ್ಟಿಯಾಗಿದ್ದರೆ ಎಂತಹದ್ದೇ ಸಂದರ್ಭ ಬಂದರೂ ಎದುರಿಸಿ ಸರಿಪಡಿಸಿಕೊಳ್ಳಬಹುದು. ಬದುಕು ಒಂದು ಸುಂದರ ಪಯಣ. ಆದರೆ ಅದನ್ನು ನೋಡುವ ರೀತಿ ಬೇರೆ ಬೇರೆ ಅಷ್ಟೆ. ಹೀಗಾಗಿ ಧನಾತ್ಮಕ ಚಿಂತನೆಗಳೊಂದಿಗೆ ಜೀವನ ನಡೆಸಿ. ಗಂಡ ಹೆಂಡತಿ ಎಂದರೆ ಚಕ್ಕಡಿ ಗಾಡಿಯ ಎತ್ತುಗಳಿದ್ದಂತೆ. ಇಬ್ಬರ ನಡುವಿನ ಯೋಚನಾ ಲಹರಿ ಸರಿಯಾದ ರೀತಿಯಲ್ಲಿ, ಸರಿಯಾದ ದಾರಿಯಲ್ಲಿ ಸಾಗಿದರೆ ಮಾತ್ರ ಗುರಿಯನ್ನು ತಲುಪಬಲ್ಲವು. ಲಗಾಮಿಲ್ಲದ ಬದುಕಾದರೆ ಬಿರುಕು ಸಹಜ. ಸಂಗಾತಿಯೊಂದಿಗೆ ಆಗಾಗ ಮನಸ್ಥಾಪಗಳು ಬರುವುದು ಸಹಜ ಅದನ್ನು ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ನಿಮ್ಮಲ್ಲಿರಬೇಕು. ಆಗ ಮಾತ್ರ ಬದುಕಿನ ಖುಷಿಯ ಬಾಗಿಲು ತೆರೆದುಕೊಳ್ಳುತ್ತದೆ. ಹಾಗಾದರೆ ಸಂಗಾತಿಯೊಂದಿಗಿನ ಸುಂದರ ಬದುಕು ಸಾಗಿಸಬೇಕು ಎಂದುಕೊಳ್ಳುತ್ತಿರುವವರು ಈ ಟಿಪ್ಸ್​ಗಳನ್ನು ಫಾಲೋ ಮಾಡಿ.

ಅಭಿನಂದಿಸುವುದನ್ನು ಅಭ್ಯಸಿಸಿಕೊಳ್ಳಿ ಇಬ್ಬರಲ್ಲೂ ಒಬ್ಬರಿಗೊಬ್ಬರನ್ನು ಅಭಿನಂದಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮಿಬ್ಬರ ನಡುವಿನ ಖುಷಿ ಹೆಚ್ಚಿಸುತ್ತದೆ. ಸಂಗಾತಿಯ ಕೆಲಸಗಳನ್ನು ಗುರುತಿಸಿ ಶ್ಲಾಘಿಸಿದರೆ ಅವರ ಖುಷಿ ಇಮ್ಮಡಿಗೊಳ್ಳುತ್ತದೆ. ನಿಮ್ಮ ಒಂದು ಅಭಿನಂದನೆ ಅಥವಾ ಧನ್ಯವಾದ ಅವರನ್ನು ಹೊಸ ಉತ್ಸಾಹಕ್ಕೆ ಕರೆದೊಯ್ಯತ್ತದೆ. ಅಲ್ಲದೆ ನಿಮ್ಮಿಬ್ಬರ ನಡುವಿನ ನಂಬಿಕೆ ಗಟ್ಟಿಗೊಳ್ಳುತ್ತದೆ.

ಮುಕ್ತವಾಗಿ ಚರ್ಚಿಸಿ ಸಂಬಂಧಗಳ ನಡುವೆ ಮುಕ್ತ ಚರ್ಚೆಗೆ ಅವಕಾಶವಿರಬೇಕು. ಆಗ ಮಾತ್ರ ದೃಢವಾದ ನಂಬಿಕೆ ಬೆಳೆಯುತ್ತದೆ. ಯಾವುದೇ ವಿಚಾರಗಳಿರಲಿ ಅದರ ಬಗ್ಗೆ ನೀವು ಅಂದುಕೊಂಡಷ್ಟನ್ನೂ ನಿಮ್ಮ ಸಂಗಾತಿಯೆದುರು ತೆರೆದಿಡಿ. ಸಂಗಾತಿ ನಿಮ್ಮ ಜೀವನದ ಕನ್ನಡಿಯಾಗಿರುತ್ತಾರೆ. ನಿಮ್ಮಲ್ಲಿನ ನೋವು, ಖುಷಿ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳಿ. ವಿಷಯ ಎಷ್ಟೇ ಚಿಕ್ಕದಿರಲಿ ಅದನ್ನು ಮುಕ್ತವಾಗಿ ಚರ್ಚಿಸಿ, ಗೊತ್ತಿಲ್ಲದ್ದನ್ನು ತಿಳಿಸಿ ಹೇಳಿ ಅಥವಾ ಅವರಿಂದ ತಿಳಿದುಕೊಳ್ಳಿ. ಆಗ ಮನಸ್ಥಾಪಗಳಿಗೆ ಅವಕಾಶವೇ ಇರುವುದಿಲ್ಲ.

ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಿ ನಿಮ್ಮ ಜೀವನದಲ್ಲಿ ಸಂಗಾತಿಯೊಂದಿಗೆ ನೀವು ತೆರೆದ ಪುಸ್ತಕದಂತಿರಬೇಕು. ಆಗ ಮಾತ್ರ ಬದುಕ ಬಂಡಿ ಸುಲಲಿತವಾಗುವುದು. ನೀವು ಮಾಡಿದ ಅಥವಾ ಮಾಡುವ ಯಾವುದೇ ಕೆಲಸಗಳಿರಲಿ ಅಥವಾ ಮುಂದೆ ಮಾಡಬೇಕೆಂದಿರುವ ಯೋಜನೆಗಳಿರಲಿ ಅದರ ಬಗ್ಗೆ ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಿ. ಕೆಲವೊಮ್ಮೆ ನೀವು ನೋಡುವ ದೃಷ್ಟಿ ಕೋನಕ್ಕೂ, ವಿಷಯದ ಬಗೆಗೆ ನಿಮ್ಮ ಸಂಗಾತಿ ನೋಡುವ ದೃಷ್ಟಿಕೋನಕ್ಕೂ ವ್ಯತ್ಯಾಸವಿರಬಹುದು. ಚರ್ಚಿಸಿದಾಗ ಅದು ತಿಳಿಯುತ್ತದೆ. ಇದರಿಂದ ನಿಮ್ಮ ಯೋಜನೆಗಳಿಗೆ ಇನ್ನಷ್ಟು ಪುಷ್ಟಿ ನೀಡುವ ಅಂಶಗಳು ದೊರೆಯಬಹುದು. ಅಲ್ಲದೆ ಅಭಿಪ್ರಾಯ ಅಥವಾ ಸಲಹೆಗಳನ್ನು ಕೇಳುವುದರಿಂದ ಅವರಿಗೂ ಪ್ರಾಮುಖ್ಯತೆ ನೀಡಿದಂತಾಗುತ್ತದೆ.

ಮನೆಕೆಲಸಗಳಲ್ಲಿ ನೆರವಾಗಿ ಇತ್ತೀಚಿನ ಅಧ್ಯಯನಗಳ ಪ್ರಕಾರ ದಂಪತಿಯ ನಡುವೆ ಮನಸ್ಥಾಪಗಳು ಹುಟ್ಟಿಕೊಳ್ಳುವುದೇ ಮನೆಕೆಲಸಗಳ ಅಥವಾ ಮನೆಯ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ. ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಅಗತ್ಯ. ಯಾವ ಕೆಲಸವೂ ಯಾರೊಬ್ಬರಿಗೇ ಸೀಮಿತವಲ್ಲ. ಹೀಗಾಗಿ ಮನೆಯ ಕೆಲಸಗಳಲ್ಲಿ ನೆರವಾಗಿ. ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳಿ. ಮುಕ್ತವಾಗಿ, ಬಿಗುಮಾನವಿಲ್ಲದೆ ಮಾತನಾಡಿದರೆ ಎಲ್ಲಾ ವಿಷಯಗಳ ನಡುವೆ ಆದ ಮನಸ್ಥಾಪಗಳಿಗೆ ಅಂತ್ಯಹಾಡಬಹುದು.

Published On - 8:30 am, Fri, 24 December 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್