ನಾಯಿಯನ್ನು ಕ್ರಿಸ್​ಮಸ್​ ಗಿಫ್ಟ್​ನಂತೆ ಪ್ಯಾಕ್​ ಮಾಡಿದ ಮಾಲೀಕ: ಕ್ಯೂಟ್​ ಡಾಗ್​ ವೀಡಿಯೋ ವೈರಲ್​​

ನಾಯಿಯೊಂದನ್ನು ಕ್ರಿಸ್​ಮಸ್​ ಗಿಫ್ಟ್​ ರೀತಿ ವ್ಯಕ್ತಿಯೊಬ್ಬ ಸುತ್ತುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಟಿಕ್ ಟಾಕ್​ ವೀಡಿಯೋವನ್ನು ಸ್ಕೂಟಿ ಬಗ್​ ಎನ್ನುವ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ನಾಯಿಯನ್ನು ಕ್ರಿಸ್​ಮಸ್​ ಗಿಫ್ಟ್​ನಂತೆ ಪ್ಯಾಕ್​ ಮಾಡಿದ ಮಾಲೀಕ: ಕ್ಯೂಟ್​ ಡಾಗ್​ ವೀಡಿಯೋ ವೈರಲ್​​
ಗ್ರೇಸಿ ಎನ್ನುವ ನಾಯಿ
Follow us
TV9 Web
| Updated By: Pavitra Bhat Jigalemane

Updated on: Dec 25, 2021 | 3:06 PM

ಕ್ರಿಸ್​ಮಸ್​  ಎಲ್ಲೆಡೆ ಹೊಸ ಸಂಭ್ರಮವನ್ನು ತುಂಬಿದೆ. ಕ್ರಿಶ್ಚಿಯನ್​ ಸಮುದಾಯದ ವಿಶೇಷ ದಿನವಾದ ಕ್ರಿಸ್​ಮಸ್​ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಪರಸ್ಪರ ಆಶೀರ್ವಾದ ಪಡೆದುಕೊಳ್ಳುವ ಸಮಯ. ಈ ಶುಭ ಸಮಯದಲ್ಲಿ ನಾಯಿಯೊಂದನ್ನು ಕ್ರಿಸ್​ಮಸ್​ ಗಿಫ್ಟ್​ ರೀತಿ ವ್ಯಕ್ತಿಯೊಬ್ಬ ಸುತ್ತುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಟಿಕ್ ಟಾಕ್​ ವೀಡಿಯೋವನ್ನು ಸ್ಕೂಟಿ ಬಗ್​ ಎನ್ನುವ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಮುದ್ದಾದ ನಾಯಿ ಗಿಫ್ಟ್​ ಪ್ಯಾಕ್​ ಮಾಡುವ ರೀತಿ ಪೇಪರ್​ ಅನ್ನು ಅದರ ಮೈಗೆ ಸುತ್ತಿದರೂ ಸುಮ್ಮನೆ ಮಲಗಿಕೊಳ್ಳುವುದನ್ನು ಕಂಡು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ವೀಡಿಯೋ  40 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದ್ದು, 4.7 ಮಿಲಿಯನ್​ ಲೈಕ್ಸ್​ ಅನ್ನು ಪಡೆದಿದೆ.

ನಾಯಿಯ ಮಾಲೀಕ ಸ್ಕಾಟ್​ ಹಬಾರ್ಡ್​ ಎನ್ನುವವರು ಈ ವಿಡೀಯೊವನ್ನು ಹಂಚಿಕೊಂಡಿದ್ದಾರೆ. ಗ್ರೇಸಿ ಎಂದು ಹೆಸರಿಟ್ಟಿರುವ ಈ ನಾಯಿಗೆ 8 ವರ್ಷ.   ವೀಡಿಯೋದಲ್ಲಿ ಮೊದಲು ಬಣ್ಣದ ಚಿತ್ರವಿರುವ ಪೇಪರ್​ ಗಮ್​ಟೇಪ್​, ಕತ್ತರಿ ಮತ್ತು ಕೆಂಪು ಬಣ್ಣದ ಹೂಗಳನ್ನು ನೆಲಕ್ಕೆ ಹಾಕಲಾಗುತ್ತದೆ. ಅದಕ್ಕೆ ನಾಯಿ ಮುದ್ದಗಿ ನಗುವನ್ನು ಬೀರುತ್ತದೆ. ನಂತರ ನಾಯಿಯನ್ನು ನೆಲಕ್ಕೆ ಮಲಗಿಸಿಕೊಂಡು ಪೇಪರ್​ನಲ್ಲಿ ಸುತ್ತುತ್ತಾರೆ. ಬಳಿಕ ಅದಕ್ಕೆ ಗಪ್​ಟೇಪ್​ ಹಚ್ಚಲಾಗುತ್ತದೆ. ನಂತರ ಕೊನೆಯದಾಗಿ ಕೆಮಪು ಬಣ್ಣದ ಹೂವನ್ನು ನಾಯಿಯ ತಲೆಯ ಮೇಲೆ ಇರಿಸಲಾಗುತ್ತದೆ. ಇಷ್ಟೇಲ್ಲಾ ಮಾಡುವಾಗಲೂ ನಾಯಿ ಮುದ್ದಾಗಿ ಮಲಗಿಕೊಂಡಿರುವುದು ನೋಡುಗರ ಮನಗೆದ್ದಿದೆ. ನಾಯಿಯ ಮಾಲೀಕರು ಪ್ರತೀ ವರ್ಷದಂತೆ ಈ ವರ್ಷವೂ ಗ್ರೇಸಿಯನ್ನು ಗಿಫ್ಟ್​ ಪ್ಯಾಕ್​ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ.

ನಾಯಿಯ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ. ಆದರೆ ಕ್ರಿಸ್​​ಮಸ್​ ಸಮಯದಲ್ಲಿ ನಾಯಿಯನ್ನೇ ಗಿಫ್ಟ್​ ಮಾಡಿದ ವೀಡಿಯೋ ಈಗ ಎಲ್ಲರ ಮನ ಗದ್ದಿದ್ದೆ.