ಕರ್ನಾಟಕದಲ್ಲಿ ಸರ್ಕಾರವೇ ಇಲ್ಲ; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
ಬಿಜೆಪಿ ಅಂದ್ರೆ ಸುಳ್ಳು, ಅಲ್ಲಿನ ನಾಯಕರು ಎಲ್ಲಾ ಸುಳ್ಳು. ಕಮಿಷನ್ ಬಗ್ಗೆ ಗುತ್ತಿಗೆದಾರರು ಪತ್ರವನ್ನು ಬರೆದಿದ್ದರು. ಆದರೆ ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಂಡಿಲ್ಲ ಅಂತ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಸಿಎಂ ಬೊಮ್ಮಾಯಿ (Basavaraj Bommai) ಬದಲಾವಣೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಸರ್ಕಾರ ಇದ್ದರೆ ತಾನೇ ಅಧಿಕಾರಿಗಳು ಮಾತು ಕೇಳುವುದು. ಅಧಿಕಾರಿಗಳಿಗೆ ಈ ಸರ್ಕಾರ ತೊಲಗಿದರೆ ಸಾಕು ಎಂಬಂತಾಗಿದೆ ಅಂತ ಅಭಿಪ್ರಾಯಪಟ್ಟರು. ಈ ಸರ್ಕಾರದಲ್ಲಿ ಭ್ರಷ್ಟಾಚಾರ, ಲಂಚಾವತಾರ ತಾಂಡವವಾಡುತ್ತಿದೆ. ಈ ಸರ್ಕಾರ ತೊಲಗಿದರೆ ಸಾಕೆಂದು ಅಧಿಕಾರಿಗಳು ಕಾಯುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಅಂದ್ರೆ ಸುಳ್ಳು, ಅಲ್ಲಿನ ನಾಯಕರು ಎಲ್ಲಾ ಸುಳ್ಳು. ಕಮಿಷನ್ ಬಗ್ಗೆ ಗುತ್ತಿಗೆದಾರರು ಪತ್ರವನ್ನು ಬರೆದಿದ್ದರು. ಆದರೆ ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಂಡಿಲ್ಲ. ಇನ್ನೊಂದು ವಾರ ಅಧಿವೇಶನ ಮುಂದುವರಿಸಿ ಅಂದ್ರೆ ಮಾಡಿಲ್ಲ ಅಂತ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ನೈಟ್ ಕರ್ಫ್ಯೂನಿಂದ ಕಾಂಗ್ರೆಸ್ ಪಾದಯಾತ್ರೆಗೆ ಸಮಸ್ಯೆಯಾಗಲ್ಲ. ಕಾಂಗ್ರೆಸ್ ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ. ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪಾದಯಾತ್ರೆ ಮಾಡುತ್ತೇವೆ. ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಱಲಿ ಮಾಡಿದ್ದಾರೆ. ಅವರು ಕಾರ್ಯಕ್ರಮ ಮಾಡಬಹುದು, ನಾವು ಮಾಡಬಾರದಾ? ಅವರಿಗೊಂದು ಕಾನೂನು, ವಿಪಕ್ಷಗಳಿಗೊಂದು ಕಾನೂನು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
ಇದೇ ವೇಳೆ ಮತಾಂತರ ನಿಷೇಧ ಬಿಲ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಹುಡುಗ, ಹುಡುಗಿ ಮದುವೆಯಾಗುವುದು ಮತಾಂತರನಾ? ಪ್ರೀತಿ ಮಾಡಿ ಮದುವೆಯಾಗುವುದು ನಮ್ಮ ಹಕ್ಕು. ಮತಾಂತರ ನಿಷೇಧ ಬಿಲ್ ಸಂವಿಧಾನ ಬಾಹಿರ. ಬಿಜೆಪಿ ನಾಯಕರ ಉದ್ದೇಶ ಕೇವಲ ವೋಟ್ ಬ್ಯಾಂಕ್ ಅಷ್ಟೇ. ಭಾವನಾತ್ಮಾಕ ವಿಷಯಗಳನ್ನು ಇಟ್ಕೊಂಡು ದಾರಿ ತಪ್ಪಿಸುತ್ತಾರೆ. ಬಿಜೆಪಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ನಿರುದ್ಯೋಗ, ನೆರೆ, ಪರಿಹಾರ ಸಮಸ್ಯೆ ಡೈವರ್ಟ್ ಮಾಡುತ್ತಿದ್ದಾರೆ ಅಂತ ಹೇಳಿದರು.
ಇದನ್ನೂ ಓದಿ
7 ಸಾವಿರ ಕೋಟಿ ದಾಟಿದ ‘ಸ್ಪೈಡರ್ ಮ್ಯಾನ್’ ಕಲೆಕ್ಷನ್; ಭಾರತದಲ್ಲೂ ಮ್ಯಾಜಿಕ್ ಮಾಡಿದ ಸಿನಿಮಾ
CM Basavaraj Bommai: ಮಂಡಿ ನೋವಿಗೆ ನಾಟಿ ಚಿಕಿತ್ಸೆ ಪಡೆದ ಸಿಎಂ ಬಸವರಾಜ ಬೊಮ್ಮಾಯಿ