CM Basavaraj Bommai: ಮಂಡಿ ನೋವಿಗೆ ನಾಟಿ ಚಿಕಿತ್ಸೆ ಪಡೆದ ಸಿಎಂ ಬಸವರಾಜ ಬೊಮ್ಮಾಯಿ
ಇಂದು ಬಸವರಾಜ ಬೊಮ್ಮಾಯಿ ವನಸ್ಪತಿ ಔಷಧಿ ಚಿಕಿತ್ಸೆ ಕೈಗೊಂಡಿದ್ದಾರೆ. ನಾಟಿ ವೈದ್ಯ ಲೋಕೇಶ್ ಸಿಎಂ ಬೊಮ್ಮಾಯಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ.
ಬೆಳಗಾವಿ: ಮಂಡಿ ನೋವಿನಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ನಾಟಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ್ ಟೇಕಲ್‌ರಿಂದ ಚಿಕಿತ್ಸೆ ಪಡೆದಿದ್ದಾರೆ.
ನಾಟಿ ವೈದ್ಯ ಲೋಕೇಶ್ ಈ ಹಿಂದೆ ಚರ್ಮರೋಗದಿಂದ ಬಳಲುತ್ತಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೂ ಚಿಕಿತ್ಸೆ ನೀಡಿದ್ದರು. ಈ ವೇಳೆ ಲಕ್ಷ್ಮಣ ಸವದಿ ಚರ್ಮರೋಗದಿಂದ ಗುಣಮುಖರಾಗಿದ್ದರು. ಅಧಿವೇಶನದ ವೇಳೆ ಲಕ್ಷ್ಮಣ ಸವದಿ, ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನಾಟಿ ವೈದ್ಯ ಲೋಕೇಶ್ ಟೇಕಲ್ ಪರಿಚಯ ಮಾಡಿಕೊಟ್ಟಿದ್ದರು. ಸದ್ಯ ಇಂದು ಬಸವರಾಜ ಬೊಮ್ಮಾಯಿ ವನಸ್ಪತಿ ಔಷಧಿ ಚಿಕಿತ್ಸೆ ಕೈಗೊಂಡಿದ್ದಾರೆ. ನಾಟಿ ವೈದ್ಯ ಲೋಕೇಶ್ ಸಿಎಂ ಬೊಮ್ಮಾಯಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ.
ಬೆಂಗಳೂರಿನಲ್ಲಿ ಇಲೆಕ್ಟ್ರಿಕ್, ಬಿಎಸ್-VI ಬಸ್ ಕಾರ್ಯಾರಂಭ; ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು: ಇಂದಿನಿಂದ ನಗರದಲ್ಲಿ ಇಲೆಕ್ಟ್ರಿಕ್ ಹಾಗೂ ಬಿಎಸ್-VI ಬಸ್ ಸಂಚಾರ ಆರಂಭವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಧಾನಸೌಧದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. 90 ಇಲೆಕ್ಟ್ರಿಕ್ ಹಾಗೂ 265 ಬಿಎಸ್-VI ಬಸ್ ಇಂದಿನಿಂದ ಸಂಚರಿಸುತ್ತಿವೆ. ಒಂದೂವರೆ ಗಂಟೆ ಚಾರ್ಜ್ ಮಾಡಿದರೆ 180 ಕಿಲೋಮೀಟರ್ ವರೆಗೆ ಬಸ್ ಸಂಚರಿಸುತ್ತದೆ. ಧ್ವನಿವರ್ದಕ, ಸಿಸಿಟಿವಿ ವ್ಯವಸ್ಥೆಯನ್ನೂ ಬಸ್ ಹೊಂದಿದೆ.
ಮಾಲಿನ್ಯ ಸಮಸ್ಯೆ ಕಡಿವಾಣ ಹಾಕಲು ಇಲೆಕ್ಟ್ರಿಕ್ ಬಸ್ಗೆ ಚಾಲನೆ ನೀಡಲಾಗಿದೆ. ಮೆಟ್ರೋ ಫೀಡರ್ ಸೇರಿದಂತೆ ಕೆಂಗೇರಿ, ಯಶವಂತಪುರ, ಕೆ ಆರ್ ಪುರಂ ಘಟಕದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಬಿಎಸ್-VI ಡೀಸೆಲ್ ಬಸ್ ರಾಜ್ಯಕ್ಕೆ ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದ್ದು, ಬಸ್ ಅತಿ ಕಡಿಮೆ ಹೊಗೆ ಹೊರಸೂಸುತ್ತದೆ.
ಬಿಎಂಟಿಸಿಯ ಬಹು ವರ್ಷಗಳ ಕನಸು ಇಂದು ನನಸಾಗಿದ್ದು, ಈ ಮೂಲಕ ನಗರದ ಮಾಲಿನ್ಯ ನಿಯಂತ್ರಣಕ್ಕೆ ಬಿಎಂಟಿಸಿ ಕೊಡುಗೆ ನೀಡಿದೆ. ಈ ಹಿಂದೆ ಸರ್ಕಾರ ಬಜೆಟ್ನಲ್ಲಿ ನೀಡಿದ್ದ ಅನುದಾನದಲ್ಲಿ 535 ಬಿಎಸ್- VI ಡೀಸೆಲ್ ಬಸ್ ಖರೀದಿ ಮಾಡಲಾಗಿತ್ತು. ಈಗಾಗಲೇ 40 ಎಲೆಕ್ಟ್ರಿಕ್, 150 ಬಿಎಸ್- VI ಡೀಸೆಲ್ ಬಸ್ಗಳು ಬಿಎಂಟಿಸಿ ಸಂಸ್ಥೆ ಸೇರಿವೆ. ಫೆಬ್ರವರಿ ವೇಳೆಗೆ ಉಳಿದ ಎಲ್ಲಾ ಹೊಸ ಬಸ್ಗಳು ಸಂಚಾರ ನಡೆಸಲಿವೆ. ಇಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬೊಮ್ಮಾಯಿ, ಇಲೆಕ್ಟ್ರಿಕ್ ಬಸ್ನಲ್ಲಿ ಸಂಚಾರ ಮಾಡಿದರು. ಈ ವೇಳೆ ಸಚಿವ ಶ್ರೀರಾಮುಲು, ಸಚಿವ ಎಸ್ ಟಿ ಸೋಮಶೇಖರ್ ಉಪಸ್ಥಿತರಿದ್ದರು.
ಇದನ್ನೂ ಓದಿ: ‘ಬೆಳೆಯಲು ಆ ನಟಿಗೆ ಕನ್ನಡ ಬೇಕಿತ್ತು; ಈಗ ಕನ್ನಡದಲ್ಲಿ ಡಬ್ ಮಾಡೋಕೆ ಟೈಂ ಇಲ್ಲ’: ವಿಶ್ವನಾಥ್ ಜಿ.ಪಿ. ಆಕ್ರೋಶ
Published On - 1:49 pm, Mon, 27 December 21