7 ಸಾವಿರ ಕೋಟಿ ದಾಟಿದ ‘ಸ್ಪೈಡರ್ ಮ್ಯಾನ್’​ ಕಲೆಕ್ಷನ್​; ಭಾರತದಲ್ಲೂ ಮ್ಯಾಜಿಕ್​ ಮಾಡಿದ ಸಿನಿಮಾ

7 ಸಾವಿರ ಕೋಟಿ ದಾಟಿದ ‘ಸ್ಪೈಡರ್ ಮ್ಯಾನ್’​ ಕಲೆಕ್ಷನ್​; ಭಾರತದಲ್ಲೂ ಮ್ಯಾಜಿಕ್​ ಮಾಡಿದ ಸಿನಿಮಾ
ಸ್ಪೈಡರ್​ ಮ್ಯಾನ್

ಕ್ರಿಸ್​ಮಸ್​ ಸಮಯವಾದ್ದರಿಂದ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಹಾಲಿವುಡ್​ನ ‘ಮೆಟ್ರಿಕ್ಸ್​’ ಸಿನಿಮಾ ಡಿಸೆಂಬರ್​ 22ರಂದು ರಿಲೀಸ್​ ಆಗಿದೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿಲ್ಲ. ಈ ಕಾರಣಕ್ಕೆ ‘ಸ್ಪೈಡರ್​ ಮ್ಯಾನ್​’ ಚಿತ್ರದ ಕಲೆಕ್ಷನ್​ ಹೆಚ್ಚುತ್ತಿದೆ.

TV9kannada Web Team

| Edited By: Rajesh Duggumane

Dec 27, 2021 | 2:02 PM

‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಸಿನಿಮಾ ಕ್ರಿಸ್​​ಮಸ್​ಗೂ ಒಂದು ವಾರ ಮೊದಲು ತೆರೆಗೆ ಬಂದಿತ್ತು. ಈ ಸಿನಿಮಾಗೆ ಅದ್ಭುತ ರೆಸ್ಪಾನ್ಸ್​ ಸಿಕ್ಕಿದೆ. ಹೀಗಾಗಿ, ಬಾಕ್ಸ್​ ಆಫೀಸ್​​ನಲ್ಲಿ ಈ ಸಿನಿಮಾ ಅದ್ಭುತ ಕಲೆಕ್ಷನ್​ ಮಾಡುತ್ತಿದೆ. ರಿಲೀಸ್​ ಆಗಿ 12 ದಿನಕ್ಕೆ ಈ ಚಿತ್ರದ ಗಳಿಕೆ 8,000 ಕೋಟಿ ಸಮೀಪಿಸಿದೆ. ಈ ಸಿನಿಮಾ ಹೊಸ ದಾಖಲೆ ಬರೆಯುತ್ತದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಭಾರತದ ಬಾಕ್ಸ್​ ಆಫೀಸ್​ನಲ್ಲೂ ಚಿತ್ರದ ಕಲೆಕ್ಷನ್​ ಉತ್ತಮವಾಗಿದೆ ಅನ್ನೋದು ವಿಶೇಷ.

ಕ್ರಿಸ್​ಮಸ್​ ಸಮಯವಾದ್ದರಿಂದ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಹಾಲಿವುಡ್​ನ ‘ಮೆಟ್ರಿಕ್ಸ್​’ ಸಿನಿಮಾ ಡಿಸೆಂಬರ್​ 22ರಂದು ರಿಲೀಸ್​ ಆಗಿದೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿಲ್ಲ. ಈ ಕಾರಣಕ್ಕೆ ‘ಸ್ಪೈಡರ್​ ಮ್ಯಾನ್​’ ಚಿತ್ರದ ಕಲೆಕ್ಷನ್​ ಹೆಚ್ಚುತ್ತಿದೆ. ಈ ಚಿತ್ರ 12 ದಿನಕ್ಕೆ 7,501 ಕೋಟಿ ರೂಪಾಯಿ (1 ಬಿಲಿಯನ್​​ ಡಾಲರ್​​) ಕಲೆಕ್ಷನ್​ ಮಾಡಿದೆ. ‘ಅವೆಂಜರ್ಸ್​: ಇನ್​​ಫಿನಿಟಿ ವಾರ್​’ ಮತ್ತು ‘ಅವೆಂಜರ್ಸ್: ಎಂಡ್​ಗೇಮ್​’ ಈ ಎರಡು ಚಿತ್ರಗಳು ಮಾತ್ರ 11 ದಿನಕ್ಕೆ 1 ಬಿಲಿಯನ್​ ಗಡಿ ತಲುಪಿದ್ದವು.

ವಿಶ್ವಾದ್ಯಂತ ಮತ್ತೆ ಕೊವಿಡ್​ ಭಯ ಕಾಡುತ್ತಿದೆ. ನಿಧಾನವಾಗಿ ಕೊವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಾಕಷ್ಟು ಕಡೆಗಳಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಕೆಲ ರಾಷ್ಟ್ರಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ಈ ಎಲ್ಲಾ ಕಾರಣಗಳಿಂದ ಈ ಚಿತ್ರಕ್ಕೆ ಕೊಂಚ ಹಿನ್ನಡೆ ಆಗಿದೆ. ಆದಾಗ್ಯೂ, ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ.

‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಸಿನಿಮಾ 2ಡಿ, 3ಡಿ, ಐಮ್ಯಾಕ್ಸ್​ 3ಡಿ ಸೇರಿ ಸಾಕಷ್ಟು ವಿಧದಲ್ಲಿ ಪ್ರೇಕ್ಷಕರಿಗೆ ಲಭ್ಯವಿದೆ. ಈ ಮೂಲಕ ನಾನಾ ರೀತಿಯ ಅನುಭವ ಹೊಂದುವ ಅವಕಾಶ ಇದೆ. ಭಾರತೀಯ ಪ್ರೇಕ್ಷಕರು ಸಿನಿಮಾವನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ. ಈ ಚಿತ್ರ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಬರೋಬ್ಬರಿ 155 ಕೋಟಿ ರೂಪಾಯಿ ಬಾಚಿಕೊಂಡಿದೆ. ವೀಕೆಂಡ್​ನಲ್ಲಿ ಸಿನಿಮಾ ಕೆಲ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಮತ್ತಷ್ಟು ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಮತ್ತೊಂದು ಸ್ಟಾರ್​ ನಟನಿಗೆ ಜತೆಯಾದ ಸಮಂತಾ; ಇವರನ್ನು ತಡೆಯೋರೆ ಇಲ್ಲ ಎಂದ ಅಭಿಮಾನಿಗಳು

ಭಾರತದ ಬಾಕ್ಸ್​ ಆಫೀಸ್​ನಲ್ಲಿ ಮೊದಲ ವಾರ 100 ಕೋಟಿ ರೂಪಾಯಿ ಗಳಿಸಿದ ‘ಸ್ಪೈಡರ್​ ಮ್ಯಾನ್​’  

Follow us on

Related Stories

Most Read Stories

Click on your DTH Provider to Add TV9 Kannada