ರಚಿತಾ ರಾಮ್ ನಟನೆಯ ‘ಲವ್ ಯೂ ರಚ್ಚು’ (Love You Racchu) ಸಿನಿಮಾ ಡಿ.31ರಂದು ಬಿಡುಗಡೆ ಆಗುತ್ತಿದೆ. ಅದೇ ದಿನ ಕರ್ನಾಟಕ ಬಂದ್ (Karnataka Bandh) ಕೂಡ ಆಗುತ್ತಿದೆ. ಆ ಬಗ್ಗೆ ರಚಿತಾ ರಾಮ್ (Rachita Ram) ಮಾತನಾಡಿದ್ದಾರೆ. ‘ಸಿನಿಮಾಗಾಗಿ ನಮ್ಮ ನಿರ್ಮಾಪಕರು ತುಂಬ ಫೈಟ್ ಮಾಡುತ್ತಿದ್ದಾರೆ. ಎಲ್ಲಿಂದಲೋ ದುಡ್ಡು ತೆಗೆದುಕೊಂಡು ಬಂದು ಸಿನಿಮಾ ಮಾಡಿ, ಕಷ್ಟಪಡುತ್ತಿದ್ದಾರೆ. ಒಂದು ಕಡೆ ನಮ್ಮ ರಾಜ್ಯಕ್ಕೋಸ್ಕರ ನಾವು ಸಪೋರ್ಟ್ ಮಾಡಬೇಕಾಗುತ್ತದೆ. ಇನ್ನೊಂದು ಕಡೆ ನಮ್ಮ ಸಿನಿಮಾ ಇದೆ. ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಒಂದು ಕಡೆ ನಮ್ಮ ಪ್ರೊಡ್ಯೂಸರ್, ಇನ್ನೊಂದು ಕಡೆ ನಮ್ಮ ರಾಜ್ಯ. ಎರಡೂ ಕಡೆಗೆ ನನ್ನ ಬೆಂಬಲ ಇದೆ. ಆದರೆ ನಮ್ಮ ರಾಜ್ಯಕ್ಕಾಗಿ ಹೆಚ್ಚು ಸಪೋರ್ಟ್ ಇರುತ್ತೆ’ ಎಂದು ರಚಿತಾ ಹೇಳಿದ್ದಾರೆ.
ಇದನ್ನೂ ಓದಿ:
‘ನಾನು ಸಿಗರೇಟ್ ಸೇದಿದ್ದಕ್ಕೆ ಕಾರಣ ಇದೆ’; ಬೋಲ್ಡ್ ದೃಶ್ಯಗಳ ಬಗ್ಗೆ ನೇರವಾಗಿ ಮಾತಾಡಿದ ರಚಿತಾ
‘ಇದು ಪಬ್ಲಿಸಿಟಿ ಗಿಮಿಕ್ ಅಲ್ಲ’; ಅಜಯ್ ರಾವ್-ಗುರು ದೇಶಪಾಂಡೆ ಅಸಮಾಧಾನದ ಬಗ್ಗೆ ರಚಿತಾ ಮಾತು