‘ನಾನು ಸಿಗರೇಟ್​ ಸೇದಿದ್ದಕ್ಕೆ ಕಾರಣ ಇದೆ’; ಬೋಲ್ಡ್​ ದೃಶ್ಯಗಳ ಬಗ್ಗೆ ನೇರವಾಗಿ ಮಾತಾಡಿದ ರಚಿತಾ

‘ನಾನು ಸಿಗರೇಟ್​ ಸೇದಿದ್ದಕ್ಕೆ ಕಾರಣ ಇದೆ’; ಬೋಲ್ಡ್​ ದೃಶ್ಯಗಳ ಬಗ್ಗೆ ನೇರವಾಗಿ ಮಾತಾಡಿದ ರಚಿತಾ
ರಚಿತಾ ರಾಮ್

Ek Love Ya Movie Songs: ‘ಸಿಗರೇಟ್​ ಸೇದುವ ದೃಶ್ಯದಲ್ಲಿ ನಟಿಸಿದಾಗ ಅದು ಕೃತಕವಾಗಿ ಕಾಣಿಸಿದರೆ ಚೆನ್ನಾಗಿ ಇರೋದಿಲ್ಲ. ಸಹಜವಾಗಿ ಮೂಡಿಬಂದರೆ ಮಾತ್ರ ಆ ಪಾತ್ರಕ್ಕೆ ಒಂದು ಕಳೆ’ ಎಂದು ರಚಿತಾ ರಾಮ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Dec 27, 2021 | 10:04 AM


ನಟಿ ರಚಿತಾ ರಾಮ್​ (Rachita Ram) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಲವ್​ ಯೂ ರಚ್ಚು’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದೇ ರೀತಿ, ‘ಏಕ್​ ಲವ್​ ಯಾ’ (Ek Love Ya) ಸಿನಿಮಾ ಕೂಡ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗ ಹಾಡುಗಳ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದೆ. ಅರ್ಜುನ್​ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಜೋಗಿ’ ಪ್ರೇಮ್​ (Jogi Prem) ಅವರ ಬತ್ತಳಿಕೆಯಿಂದ ‘ಏಕ್​ ಲವ್​ ಯಾ’ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ರಚಿತಾ ರಾಮ್​ ಸಿಗರೇಟ್​ ಸೇದುವ ದೃಶ್ಯ ಇದೆ. ಕೊಂಚ ಬೋಲ್ಡ್​ ಆಗಿಯೇ ಅವರು ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ಎದುರಾದ ಪ್ರಶ್ನೆಗೆ ರಚಿತಾ ರಾಮ್​ ನೇರ ಉತ್ತರ ನೀಡಿದ್ದಾರೆ.

ತಾವು ಏನೇ ಮಾಡಿದ್ದರೂ ಅದನ್ನು ಪಾತ್ರಕ್ಕಾಗಿ ಮಾಡಿರುವುದಾಗಿ ರಚಿತಾ ಹೇಳಿದ್ದಾರೆ. ‘ನಾನು ಈ ರೀತಿಯ ಪಾತ್ರ ಮಾಡಿದ್ದೇನೆ ಎಂದರೆ ಅದಕ್ಕೊಂದು ಅರ್ಥ ಇದೆ. ಸುಮ್​ ಸುಮ್ಮನೇ ನಾನು ಸಿಗರೇಟ್​ ಸೇದಿಲ್ಲ. ಬೋಲ್ಡ್​ ದೃಶ್ಯಗಳಲ್ಲಿ ಯಾಕೆ ನಟಿಸಿದ್ದೇನೆ ಎಂಬುದು ಸಿನಿಮಾ ರಿಲೀಸ್​ ಆದಾಗ ಗೊತ್ತಾಗುತ್ತದೆ. ಚೆನ್ನಾಗಿ ಮಾಡಿದ್ದೇನೆ ಅಂತ ಅಂದುಕೊಂಡಿದ್ದೇನೆ’ ಎಂದಿದ್ದಾರೆ ರಚಿತಾ ರಾಮ್​.

‘ಸಿಗರೇಟ್​ ಸೇದುವ ದೃಶ್ಯದಲ್ಲಿ ನಟಿಸಿದಾಗ ಅದು ಕೃತಕವಾಗಿ ಕಾಣಿಸಿದರೆ ಚೆನ್ನಾಗಿ ಇರೋದಿಲ್ಲ. ಸಹಜವಾಗಿ ಮೂಡಿಬಂದರೆ ಮಾತ್ರ ಆ ಪಾತ್ರಕ್ಕೆ ಒಂದು ಕಳೆ. ಸಾಂಗ್​ ಬಿಡುಗಡೆ ಆದಾಗಲೇ ನಂಗೆ ಆ ದೃಶ್ಯಗಳನ್ನು ನೋಡುವ ಅವಕಾಶ ಸಿಕ್ಕಿದ್ದು. ಇವತ್ತಿನವರೆಗೂ ಪ್ರೇಮ್​ ಅವರು ಯಾವುದೇ ಹಾಡನ್ನು ನಮಗೆ ತೋರಿಸಿರಲಿಲ್ಲ. ಅವರು ಅಷ್ಟು ರಹಸ್ಯ ಕಾಪಾಡಿಕೊಂಡು, ನಂತರ ಜನರ ಮಡಿಲಿಗೆ ಹಾಕುತ್ತಾರೆ’ ಎಂದಿದ್ದಾರೆ ರಚಿತಾ ರಾಮ್​.

ಈ ಬಗ್ಗೆ ನಿರ್ದೇಶಕ ಪ್ರೇಮ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಧೂಮಪಾನ, ಮದ್ಯಪಾನ ಮಾಡುವ ಹುಡುಗಿಯರು ಸಹ ಇದ್ದಾರೆ. ಆ ರೀತಿ ಮಾಡಲು ಅವರಿಗೆ ಅವರದ್ದೇ ಆದ ಕಾರಣಗಳಿವೆ. ಅಂಥವರ ಪಾತ್ರವನ್ನು ರಚಿತಾ ರಾಮ್​ ಮಾಡಿದ್ದಾರೆ. ಮೊದಲು ಈ ಪಾತ್ರ ಮಾಡಲು ಅಂಜಿಕೊಂಡಿದ್ದರು. ನಂತರ ಒಪ್ಪಿಕೊಂಡರು’ ಎಂದು ಪ್ರೇಮ್​ ಹೇಳಿದ್ದಾರೆ.


ಇದನ್ನೂ ಓದಿ:

‘ಪ್ರೀತಿ ತೋರಿಸೋ ನಮಗೆ ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡ್ದಾಗ ಬೇಜಾರಾಗತ್ತೆ’: ರಚಿತಾ ರಾಮ್​

ಚಂದನ್ ಶೆಟ್ಟಿ ಜತೆ ರಚಿತಾ ರಾಮ್​ ‘ಲಕ ಲಕ ಲ್ಯಾಂಬೋರ್ಗಿನಿ’; ಪೋಸ್ಟರ್​ ಮೂಲಕ ಹೆಚ್ಚಿತು ಕ್ರೇಜ್​

Follow us on

Related Stories

Most Read Stories

Click on your DTH Provider to Add TV9 Kannada