‘ಪೈರಸಿ ಮೂಲಕ ‘ರೈಡರ್​’ ನೋಡ್ಬೇಡಿ’; ಕೈ ಮುಗಿದು ಮನವಿ ಮಾಡಿದ ನಿಖಿಲ್​ ಕುಮಾರ್​

ಗಾಗಲೇ ಟೆಲಿಗ್ರಾಮ್​ನಲ್ಲೂ ಈ ಸಿನಿಮಾದ ಕಾಪಿ ಹರಿದಾಡುತ್ತಿದೆ. ಇದರಿಂದ ಚಿತ್ರದ ಕಲೆಕ್ಷನ್​ಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಪರಭಾಷೆಯ ದೊಡ್ಡ ಸಿನಿಮಾಗಳ ಜತೆ ನಿಖಿಲ್​ ಚಿತ್ರ ಸ್ಪರ್ಧೆ ಮಾಡುತ್ತಿದೆ. ಈ ಮಧ್ಯೆ ಪೈರಸಿ ಕಾಟದಿಂದ ಚಿತ್ರಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಗೋಚರವಾಗಿದೆ.

TV9kannada Web Team

| Edited By: Rajesh Duggumane

Dec 26, 2021 | 6:22 PM

ನಿಖಿಲ್​ ಕುಮಾರ್​ ನಟನೆಯ ‘ರೈಡರ್​’ ಸಿನಿಮಾ ಡಿಸೆಂಬರ್​ 24ರಂದು ತೆರೆಗೆ ಬಂದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಒಂದು ವರ್ಗದ ಜನರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಆದರೆ, ಈಗ ಕಲೆಕ್ಷನ್​ಗೆ ಹೊಡೆತ ಕೊಡುವ ಸಂಗತಿ ನಡೆದಿದೆ. ನಿಖಿಲ್​ ನಟನೆಯ ‘ರೈಡರ್​’ ಸಂಪೂರ್ಣ ಚಿತ್ರವನ್ನು ಆನ್​ಲೈನ್​ನಲ್ಲಿ ಲೀಕ್​ ಮಾಡಲಾಗಿದೆ. ಇದು ಚಿತ್ರತಂಡಕ್ಕೆ ಬೇಸರ ತಂದಿದೆ. ಈ ಸಿನಿಮಾವನ್ನು ಎಲ್ಲರೂ ಚಿತ್ರಮಂದಿರದಲ್ಲೇ ನೋಡಿ, ಯಾರೂ ಪೈರಸಿ ಕಾಪಿ ನೋಡಬೇಡಿ ಎಂದು ನಿಖಿಲ್ ಕೈ ಮುಗಿದು​ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಟೆಲಿಗ್ರಾಮ್​ನಲ್ಲೂ ಈ ಸಿನಿಮಾದ ಕಾಪಿ ಹರಿದಾಡುತ್ತಿದೆ. ಇದರಿಂದ ಚಿತ್ರದ ಕಲೆಕ್ಷನ್​ಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಪರಭಾಷೆಯ ದೊಡ್ಡ ಸಿನಿಮಾಗಳ ಜತೆ ನಿಖಿಲ್​ ಚಿತ್ರ ಸ್ಪರ್ಧೆ ಮಾಡುತ್ತಿದೆ. ಈ ಮಧ್ಯೆ ಪೈರಸಿ ಕಾಟದಿಂದ ಚಿತ್ರಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಗೋಚರವಾಗಿದೆ.

ಇದನ್ನೂ ಓದಿ: ‘ರೈಡರ್​’ ಚಿತ್ರ ನೋಡಿ ಜನ ಹೇಗೆ ಕಮೆಂಟ್​ ಮಾಡಿದಾರೆ? ಅಸಲಿ ವಿಚಾರ ತೆರೆದಿಟ್ಟ ನಿಖಿಲ್​

Follow us on

Click on your DTH Provider to Add TV9 Kannada