‘ರೈಡರ್​’ ಚಿತ್ರ ನೋಡಿ ಜನ ಹೇಗೆ ಕಮೆಂಟ್​ ಮಾಡಿದಾರೆ? ಅಸಲಿ ವಿಚಾರ ತೆರೆದಿಟ್ಟ ನಿಖಿಲ್​

Rider Kannada Movie: ನಿಖಿಲ್​ ಕುಮಾರಸ್ವಾಮಿ ನಟನೆಯ ‘ರೈಡರ್​’ ಚಿತ್ರ ಡಿ.24ರಂದು ರಿಲೀಸ್​ ಆಗಿದೆ. ‘ಕೆಲವರು ನನ್ನ ಸಿನಿಮಾ ನೋಡಿ ಉದ್ದೇಶಪೂರ್ವಕವಾಗಿ ಕೆಟ್ಟ ಕಮೆಂಟ್​ ಮಾಡುತ್ತಿದ್ದಾರೆ’ ಎಂದು ನಿಖಿಲ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Dec 26, 2021 | 4:28 PM

ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಅವರು ರಾಜಕಾರಣಿಯೂ ಹೌದು, ನಟನೂ ಹೌದು. ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಅವರಿಗೆ ಆಸಕ್ತಿ ಇದೆ. ಅವರು ಅಭಿನಯಿಸಿರುವ ‘ರೈಡರ್​’ ಚಿತ್ರ (Rider Kannada Movie) ಡಿ.24ರಂದು ಬಿಡುಗಡೆ ಆಗಿದೆ. ಚಿತ್ರ ನೋಡಿದ ಅನೇಕರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಟ್ರೋಲ್​ ಎಂಬುದು ನಿಖಿಲ್​ ಪಾಲಿಗೆ ಹೊಸದೇನೂ ಅಲ್ಲ. ಅವುಗಳನ್ನೆಲ್ಲ ಅವರು ಎದುರಿಸಿದ್ದಾರೆ. ಶನಿವಾರ (ಡಿ.25) ‘ರೈಡರ್​’ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸೇರಿದಂತೆ ಅನೇಕ ಗಣ್ಯರು ಸಿನಿಮಾ ವೀಕ್ಷಿಸಿದರು. ಪ್ರದರ್ಶನದ ಬಳಿಕ ಮಾಧ್ಯಮದ ಜತೆ ಮಾತನಾಡಿದ ನಿಖಿಲ್​ ಕುಮಾರಸ್ವಾಮಿ ಅವರು ಕೆಲವು ವಿಚಾರಗಳನ್ನು ತೆರೆದಿಟ್ಟರು. ‘ತುಂಬ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಪರಭಾಷೆಗಿಂತಲೂ ಮೊದಲು ಕನ್ನಡ ಚಿತ್ರಕ್ಕೆ ಆದ್ಯತೆ ನೀಡಿ ಅಂತ ಜನರಲ್ಲಿ ಕೇಳಿಕೊಳ್ಳುತ್ತೇನೆ. ಅಕ್ಕ-ಪಕ್ಕದ ರಾಜ್ಯದಲ್ಲಿ ಕನ್ನಡ ಸಿನಿಮಾ ಹಾಕಲ್ಲ. ಹಾಕಿದ್ರೂ ಅಲ್ಲಿ ಬೆಲೆ ಸಿಗುತ್ತಿಲ್ಲ. ಕೆಲವರು ನನ್ನ ಸಿನಿಮಾ ನೋಡಿ ಉದ್ದೇಶಪೂರ್ವಕವಾಗಿ ಕೆಟ್ಟ ಕಮೆಂಟ್​ ಮಾಡುತ್ತಿದ್ದಾರೆ. ಆದರೆ ಸಿನಿಮಾ ನೋಡಿದವರು ಅದಕ್ಕೆ ಉತ್ತರ ನೀಡುತ್ತಿದ್ದಾರೆ’ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:

‘ಚಿತ್ರರಂಗಕ್ಕೆ ಪುನೀತ್​ ರೀತಿಯ ನಟ ಬೇಕು; ನಿಖಿಲ್​ ಹೆಚ್ಚು ಸಿನಿಮಾ ಮಾಡಲಿ’: ಎಚ್​​.ಡಿ. ಕುಮಾರಸ್ವಾಮಿ

ನ್ಯೂ ಇಯರ್​​ ಪಾರ್ಟಿಗೆ ರಾಧಿಕಾ ಕುಮಾರಸ್ವಾಮಿ ರಂಗು; ಕಲರ್ಸ್​ ಕನ್ನಡದಲ್ಲಿ ಮಸ್ತ್​ ಡ್ಯಾನ್ಸ್​

Follow us on

Click on your DTH Provider to Add TV9 Kannada