2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸೋ ಬಗ್ಗೆ ನಿಖಿಲ್ ಕುಮಾರ್ ಮಾತು
2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ಜೆಡಿಎಸ್ ಪಕ್ಷದಿಂದ ನಿಖಿಲ್ ಸ್ಪರ್ಧೆ ಮಾಡುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ. ಇದಕ್ಕೆ ನಿಖಿಲ್ ಉತ್ತರಿಸಿದ್ದಾರೆ.
ನಿಖಿಲ್ ಕುಮಾರ್ ನಟನೆಯ ‘ರೈಡರ್’ ಚಿತ್ರ ಡಿಸೆಂಬರ್ 24ರಂದು ತೆರೆಗೆ ಬಂದಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ನಿಖಿಲ್ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗುತ್ತಾರಾ ಅಥವಾ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. 2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ಜೆಡಿಎಸ್ ಪಕ್ಷದಿಂದ ನಿಖಿಲ್ ಸ್ಪರ್ಧೆ ಮಾಡುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ. ಇದಕ್ಕೆ ನಿಖಿಲ್ ಉತ್ತರಿಸಿದ್ದಾರೆ. ಚಿಕ್ಕಬಳ್ಳಾಫುರದಲ್ಲಿ ಮಾತನಾಡಿದ ನಿಖಿಲ್, ‘2023ರಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬುದನ್ನು ಪಕ್ಷ ತೀರ್ಮಾನಿಸಲಿದೆ. ನಾನು ಯಾವುದನ್ನೂ ಪ್ಲ್ಯಾನ್ ಮಾಡಿಕೊಂಡು ಬಂದವನಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ‘ರೈಡರ್’ ಬಗ್ಗೆ ನಿಖಿಲ್ ಕುಮಾರ್ ಭಾವುಕ ನುಡಿ
ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಸಿನಿಮಾ ರಿಲೀಸ್; ಚಿತ್ರಮಂದಿರದಲ್ಲಿ ಹೇಗಿದೆ ಸಂಭ್ರಮ?
Latest Videos