ಬೆಳಗಾವಿಯಲ್ಲಿ ಕುಂದಾ ಖರೀದಿಗೆ ಮುಗಿಬಿದ್ದ ಜನಪ್ರತಿನಿಧಿಗಳು: ವಿಡಿಯೋ ನೋಡಿ
ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲ ಮಹಾರಾಷ್ಟ್ರದಿಂದ ಹಾಲು, ಕವಾ ತರೆಸಿ ಕುಂದಾ ರೆಡಿ ಮಾಡುತ್ತಿದ್ದಾರೆ. ಇನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ವೀಟ್ ಮಾರ್ಟ್ನಲ್ಲಿ ಕುಂದಾ ಖರೀದಿಸಿದ್ದಾರೆ.
ಬೆಳಗಾವಿ ಅಧಿವೇಶನದ ಕೊನೆ ದಿನ ಕುಂದಾ ಖರೀದಿಸಲು ನೂರಾರು ಜನ ಮುಗಿಬಿದ್ದಿದ್ದಾರೆ. ಅಧಿವೇಶನ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ, ಪೊಲೀಸರು, ಅಧಿಕಾರಿಗಳು ಅಷ್ಟೇ ಅಲ್ಲದೇ ಶಾಸಕರಿಂದಲೂ ಕುಂದಾ ಖರೀದಿಸಲು ಮುಗಿಬಿದ್ದಿದ್ದಾರೆ. ಪ್ರತಿ ಅಂಗಡಿಗಳಲ್ಲಿ ದಿನಕ್ಕೆ ಸಾವಿರಕ್ಕೂ ಅಧಿಕ ಕೆಜಿ ಕುಂದಾ ವ್ಯಾಪಾರವಾಗುತ್ತಿದೆ. ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲ ಮಹಾರಾಷ್ಟ್ರದಿಂದ ಹಾಲು, ಕವಾ ತರೆಸಿ ಕುಂದಾ ರೆಡಿ ಮಾಡುತ್ತಿದ್ದಾರೆ. ಇನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ವೀಟ್ ಮಾರ್ಟ್ನಲ್ಲಿ ಕುಂದಾ ಖರೀದಿಸಿದ್ದಾರೆ. ಅಧಿವೇಶನಕ್ಕೂ ಮೊದಲು ವಿವಿಧ ಅಂಗಡಿಗಳಲ್ಲಿ ನಿತ್ಯ 200ರಿಂದ 300 ಕೆಜಿ ಕುಂದಾ ಮಾರಾಟವಾಗುತ್ತಿತ್ತು. ಆದರೆ ಅಧಿವೇಶನದ ವೇಳೆ ಈ ಪ್ರಮಾಣವು ದಿನಕ್ಕೆ 1 ಸಾವಿರ ಕೆಜಿಯಷ್ಟು ಹೆಚ್ಚಾಗಿತ್ತು ಎಂದು ಸ್ವೀಟ್ ಮಾರ್ಟ್ ಮಾಲೀಕ ರಾಜಪುರೋಹಿತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ
ರಿಲೀಸ್ ಆಗಿ 25 ದಿನದೊಳಗೆ ಒಟಿಟಿಗೆ ಬಂತು ‘ಮದಜಗ’; ಅಮೇಜಾನ್ ಪ್ರೈಂನಲ್ಲಿ ಶ್ರೀಮುರಳಿ ಸಿನಿಮಾ
ಹುಟ್ಟೂರಿಗೆ ಬಂದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎನ್ವಿ ರಮಣ ಅವರಿಗೆ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ