ಲಾಕ್ಡೌನ್ ಟೈಮಲ್ಲಿ ಶ್ವಾನಗಳನ್ನು ಬೀದಿಗೆ ತಳ್ಳಿದ ಮಾಲೀಕರು; ಬೆಂಗಳೂರಲ್ಲಿ ಶೇಕಡಾ 49ರಷ್ಟು ಸಾಕುನಾಯಿಗಳು ಬೀದಿಪಾಲು
ಬೆಂಗಳೂರಿನಲ್ಲಿ ಸಾಕಿದ ನಾಯಿ ಪೈಕಿ ಶೇಕಡಾ 49 ರಷ್ಟು ನಾಯಿಗಳನ್ನು ಮನೆಯಿಂದ ಹೊರ ಹಾಕಿದ್ದಾರೆ. ಇದರಿಂದ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಈಗ ಕೆಲ ಎನ್ಜಿಒಗಳು ನಾಯಿಗಳನ್ನು ರಕ್ಷಣೆ ಮಾಡಿ ಆಶ್ರಯ ನೀಡುತ್ತಿದ್ದಾರೆ.
ಬೆಂಗಳೂರು: ಕೊರೊನಾ ಲಾಕ್ಡೌನ್ ಅಂತಾ ಸಾವಿರಾರು ಜನ ಬೆಂಗಳೂರು ಬಿಟ್ಟು ಹುಟ್ಟೂರಿಗೆ ಹೋದರು. ಇನ್ನೂ ಕೆಲವರು ಸೋಂಕಿನ ಸುಳಿಗಾಳಿಗೆ ಸಿಲುಕಿ ಸಾವಿನ ಮನೆ ಸೇರಿದರು. ಆದರೆ ಲಾಕ್ಡೌನ್, ಕೊರೊನಾ ಅಂತಾ ಮಾಲೀಕರು ತಾವು ಸಾಕಿದ ನಾಯಿಗಳನ್ನು ಕೂಡ ಬೀದಿಗೆ ತಳ್ಳಿದ್ದಾರೆ. ಬೆಂಗಳೂರಿನಲ್ಲಿ ಪ್ರಾಣಿಗಳ ರಕ್ಷಣಾ ಸಂಘ ಸಂಸ್ಥೆಗಳು ನಡೆಸಿದ ಸರ್ವೆಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿವೆ. ಬೆಂಗಳೂರಿನಲ್ಲಿ ಸಾಕಿದ ನಾಯಿ ಪೈಕಿ ಶೇಕಡಾ 49 ರಷ್ಟು ನಾಯಿಗಳನ್ನು ಮನೆಯಿಂದ ಹೊರ ಹಾಕಿದ್ದಾರೆ. ಇದರಿಂದ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಈಗ ಕೆಲ ಎನ್ಜಿಒಗಳು ನಾಯಿಗಳನ್ನು ರಕ್ಷಣೆ ಮಾಡಿ ಆಶ್ರಯ ನೀಡುತ್ತಿದ್ದಾರೆ.
ಎನ್ಜಿಒಗಳ ಆಶ್ರಯದಲ್ಲಿರುವ ಈ ಸಾಕು ನಾಯಿಗಳನ್ನು ಕೆಲವರು ದತ್ತು ಪಡೆಯುತ್ತಿದ್ದು, ಕೆಲವರು ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಇಂತಹ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಯೋಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:
ಕೊರೊನಾದಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಪರಿಹಾರ ಧನದ ಚೆಕ್ ವಿತರಿಸಿದ ಶಾಸಕ ಆರ್ ಮಂಜುನಾಥ್
ಕೊರೊನಾವೈರಸ್ ಹೃದಯ, ಮೆದುಳಿನಲ್ಲಿ ತಿಂಗಳುಗಳವರೆಗೆ ಇರುತ್ತದೆ: ಅಧ್ಯಯನ ವರದಿ