Diganth: ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟ ದಿಗಂತ್; ಅವರ ಖಾತೆಯಲ್ಲಿ ಒಟ್ಟು ಎಷ್ಟು ಸಿನಿಮಾಗಳಿವೆ ಗೊತ್ತಾ?

Diganth Birthday: ನಟ ದಿಗಂತ್ ಮಂಚಾಲೆ ಪ್ರಸ್ತುತ ಸ್ಯಾಂಡಲ್​ವುಡ್​ನ ಬ್ಯುಸಿ ನಟರಲ್ಲಿ ಒಬ್ಬರು ಎಂದರೆ ತಪ್ಪಿಲ್ಲ. ಕಾರಣ ಅವರ ಬತ್ತಳಿಕೆಯಲ್ಲಿರುವ ಚಿತ್ರಗಳ ಪಟ್ಟಿ! ಕುತೂಹಲಕಾರಿ ಪಾತ್ರಗಳನ್ನು ಒಪ್ಪಿಕೊಂಡಿರುವ ಅವರ ಮುಂದಿನ ಸಿನಿಮಾಗಳ ನೋಟ ಇಲ್ಲಿದೆ.

TV9kannada Web Team

| Edited By: shivaprasad.hs

Dec 28, 2021 | 12:42 PM

ನಟ ದಿಗಂತ್ 38ನೇ ಜನ್ಮದಿನವನ್ನು ಇಂದು (ಡಿಸೆಂಬರ್ 28) ಆಚರಿಸಿಕೊಳ್ಳುತ್ತಿದ್ದಾರೆ. ವಿಶಿಷ್ಟ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾ, ಹೊಸಬರೊಂದಿಗೂ ಕೆಲಸ ಮಾಡುತ್ತಿರುವ ದಿಗಂತ್ ಬತ್ತಳಿಕೆಯಲ್ಲಿ ಈಗ ಹಲವಾರು ಸಿನಿಮಾಗಳಿವೆ. ಟ್ರೈಲರ್​ನಿಂದ ಗಮನಸೆಳೆದಿರುವ ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರ ಇದೇ ಡಿಸೆಂಬರ್ 31ಕ್ಕೆ ತೆರೆಕಾಣಲಿದೆ. ಇದಲ್ಲದೇ ದಿಗಂತ್, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಮಾರಿಗೋಲ್ಡ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರೀಕರಣ ಪೂರೈಸಿದ್ದಾರೆ. ಚಿತ್ರಪ್ರೇಮಿಗಳು ಬಹಳ ಕಾಲದಿಂದ ಕಾಯುತ್ತಿರುವ ‘ಗಾಳಿಪಟ 2’ ಚಿತ್ರದ ಚಿತ್ರೀಕರಣವೂ ಮುಕ್ತಾಯವಾಗಿದೆ. ಚಿತ್ರದ ಕುರಿತು ಸದ್ಯದಲ್ಲೇ ಅಪ್ಡೇಟ್ ನೀಡುವುದಾಗಿ ಚಿತ್ರತಂಡ ತಿಳಿಸಿದೆ.

ದಿಗಂತ್ ಅವರ ಹಲವು ಚಿತ್ರಗಳು ಚಿತ್ರೀಕರಣದ ಹಂತದಲ್ಲಿವೆ. ಅನಂತ್ ನಾಗ್ ಹಾಗೂ ದಿಗಂತ್ ಮತ್ತೊಮ್ಮೆ ಜತೆಯಾಗಿ ಕಾಣಿಸಿಕೊಳ್ಳುತ್ತಿರುವ ‘ತಿಮ್ಮಯ್ಯ ಮತ್ತು ತಿಮ್ಮಯ್ಯ’ ಚಿತ್ರದ ಕೆಲಸಗಳು ನಡೆಯುತ್ತಿವೆ. ಇದಲ್ಲದೇ ‘ಎಡಗೈಯೇ ಅಪಘಾತಕ್ಕೆ ಕಾರಣ’ ಹಾಗೂ ‘ಎವರು’ ಚಿತ್ರದ ರಿಮೇಕ್​ನಲ್ಲೂ ದಿಗಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಗಳ ಮೂಲಕ ದಿಗಂತ್ ಹಲವು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಈ ಮೂಲಕ ಈ ವಾರ ತೆರೆ ಕಾಣುತ್ತಿರುವ ಚಿತ್ರ ಸೇರಿಸಿ ದಿಗಂತ್ ಒಟ್ಟು ಏಳು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:

Diganth Birthday: ಒಂದೇ ವಾರದಲ್ಲಿ ಎರಡೆರಡು ‘ಹುಟ್ಟುಹಬ್ಬ’ದ ಸಂಭ್ರಮದಲ್ಲಿರುವ ದಿಗಂತ್!; ಏನಿದು ಸಮಾಚಾರ?

ದಿಗಂತ್ ಬಾಯಿಂದ ಕೊಟ್ಟ ಹೂವನ್ನು ತುಟಿಯಿಂದಲೇ ಸ್ವೀಕರಿಸಿದ ಐಂದ್ರಿತಾ ರೇ; ಇಲ್ಲಿದೆ ವಿಡಿಯೋ

Follow us on

Click on your DTH Provider to Add TV9 Kannada