AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diganth Birthday: ಒಂದೇ ವಾರದಲ್ಲಿ ಎರಡೆರಡು ‘ಹುಟ್ಟುಹಬ್ಬ’ದ ಸಂಭ್ರಮದಲ್ಲಿರುವ ದಿಗಂತ್!; ಏನಿದು ಸಮಾಚಾರ?

Huttu Habbada Shubhashayagalu Movie: ನಟ ದಿಗಂತ್ ಈ ವಾರ ಎರಡೆರಡು ‘ಹುಟ್ಟುಹಬ್ಬ’ದ ಸಂಭ್ರಮದಲ್ಲಿದ್ದಾರೆ. ಇದೇನು ಅಂತೀರಾ? ಇಲ್ಲಿದೆ ಕುತೂಹಲಕರ ಸಮಾಚಾರ.

Diganth Birthday: ಒಂದೇ ವಾರದಲ್ಲಿ ಎರಡೆರಡು ‘ಹುಟ್ಟುಹಬ್ಬ’ದ ಸಂಭ್ರಮದಲ್ಲಿರುವ ದಿಗಂತ್!; ಏನಿದು ಸಮಾಚಾರ?
ದಿಗಂತ್
TV9 Web
| Edited By: |

Updated on:Dec 28, 2021 | 1:08 PM

Share

ಸ್ಯಾಂಡಲ್​ವುಡ್ ನಟ ದಿಗಂತ್ ಮಂಚಾಲೆ (Diganth Manchale) ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವೃತ್ತಿ ಜೀವನದುದ್ದಕ್ಕೂ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡ ಅವರ ಕೈಯಲ್ಲಿ ಈಗ ಹಲವಾರು ಚಿತ್ರಗಳಿವೆ. ದಿಗಂತ್ ಜನ್ಮದಿನ ಇಂದಾದರೂ ಕೂಡ ಅವರ ಅಭಿಮಾನಿಗಳು ಸಂಭ್ರಮ ಆಚರಿಸೋದು ಡಿಸೆಂಬರ್ 31ಕ್ಕೆ. ಅದೇಕೆ ಅಂತೀರಾ? ಇಲ್ಲೇ ಇರೋದು ಅಚ್ಚರಿಯ ವಿಚಾರ. ದಿಗಂತ್ ನಟಿಸಿರುವ ಚಿತ್ರ ‘ಹುಟ್ಟು ಹಬ್ಬದ ಶುಭಾಶಯಗಳು’ (Huttu Habbada Shubhashayagalu) ತೆರೆಗೆ ಬರಲು ಸಿದ್ಧವಾಗಿದೆ. ಇದೇ ಡಿಸೆಂಬರ್ 31ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ. ಈಗಾಗಲೇ ಟ್ರೈಲರ್ ಮುಖಾಂತರ ಗಮನ ಸೆಳೆದಿರುವ ಈ ಚಿತ್ರವನ್ನು ವೀಕ್ಷಿಸಲು ದಿಗಂತ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅಲ್ಲದೇ ದಿಗಂತ್ ಕಡೆಯದಾಗಿ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು 2019ರಲ್ಲಿ ತೆರೆಕಂಡ ‘ಫಾರ್ಚೂನರ್’ನಲ್ಲಿ. ಅದರ ನಂತರ ‘ಪಂಚತಂತ್ರ’ ಹಾಗೂ ‘ಯುವರತ್ನ’ದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಬಗ್ಗೆ ಅವರಿಗೂ ಅಪಾರ ನಿರೀಕ್ಷೆಗಳಿವೆ. ಆದ್ದರಿಂದಲೇ ಅವರಿಗೆ ಈವಾರ ‘ಹುಟ್ಟುಹಬ್ಬ’ದ ಡಬಲ್ ಸಂಭ್ರಮ!

ಈಗಾಗಲೇ ‘ಹುಟ್ಟು ಹಬ್ಬದ ಶುಭಾಶಯಗಳು’ ಚಿತ್ರದ ಟ್ರೈಲರ್​ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಸುಮಾರು 1 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ. ನಾಗರಾಜು ಬೇತೂರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಡಾ.ಟಿಆರ್ ಚಂದ್ರಶೇಖರ್ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್​ನಲ್ಲಿ ನಿರ್ಮಾಣ ಮಾಡಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು ಟ್ರೈಲರ್ ಇಲ್ಲಿದೆ:

ಚಿತ್ರದಲ್ಲಿ ದಿಗಂತ್ ಅವರೊಂದಿಗೆ ಕವಿತಾ ಗೌಡ, ಚೇತನ್ ಗಂದರ್ವ, ಮಡೇನೂರು ಮನು, ಸೂರಜ್, ಸೂರ್ಯ, ವಾಣಿಶ್ರೀ, ರೋಹಿತ್ ರಂಗಸ್ವಾಮಿ ಮೊದಲಾದವರು ತೆರೆ ಹಂಚಿಕೊಂಡಿದ್ದಾರೆ. ಕತೆ- ಚಿತ್ರಕತೆಯನ್ನು ಪ್ರಸನ್ನ ವಿಎಮ್ ರಚಿಸಿದ್ದು, ಅಭಿಲಾಶ್ ಕಲತಿ ಛಾಯಾಗ್ರಹಣ ಮಾಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ.

ಇದನ್ನೂ ಓದಿ:

Shiva Rajkumar: ಶಿವಣ್ಣ ಹೃದಯವಂತಿಕೆಗಿಲ್ಲ ಸರಿಸಾಟಿ; ಮಕ್ಕಳೊಂದಿಗೆ ಖೋ ಖೋ ಆಡುತ್ತಿರುವ ಅಪರೂಪದ ವಿಡಿಯೋ ಇಲ್ಲಿದೆ

‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?

Published On - 12:06 pm, Tue, 28 December 21